ಮಹಾದಯಿ ಯೋಜನೆ ಜಾರಿಗೆ ಸಾಕಷ್ಟು ಪ್ರಯತ್ನಿಸಿದ್ದೇನೆ: ಎಮ್‌.ಬಿ. ಪಾಟೀಲ

ನವಲಗುಂದ : ಮಹದಾಯಿ, ಕಳಸಾ-ಬಂಡೂರಿ ಯೋಜನೆ ಜಾರಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸದನದಲ್ಲಿ 2 ಬಾರಿ ಒಗ್ಗಟ್ಟಿನ ನಿರ್ಣಯ ತೆಗೆದುಕೊಂಡು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದರೂ ಯೋಜನೆ ಜಾರಿ ಮಾಡುತ್ತಿಲ್ಲ ಎಂದು ಮಾಜಿ ಬೃಹತ್ ನೀರಾವರಿ ಸಚಿವ ಹಾಗೂ ಕೆಪಿಸಿಸಿ ಪ್ರಚಾರ ಸಮೀತಿ ಅಧ್ಯಕ್ಷ ಎಮ್‌.ಬಿ. ಪಾಟೀಲ ಹೇಳಿದರು. 

ಅವರು ಪ್ರಚಾರ ಸಮೀತಿಯ ಅಧ್ಯಕ್ಷರಾಗಿ ಪ್ರಥಮ ಬಾರಿ ನವಲಗುಂದ ಮಾರ್ಗವಾಗಿ ಹುಬ್ಬಳ್ಳಿಗೆ ತೆರಳುವ ಸಂದರ್ಭದಲ್ಲಿ ನವಲಗುಂದ ರೈತ ಬಂಡಾಯ ನೆಲದಲ್ಲಿ ರೈತ ಹುತಾತ್ಮ ದಿ. ಬಸಪ್ಪ ಲಕ್ಕುಂಡಿ ಅವರ ವೀರಗಲ್ಲಿಗೆ ಹಾಗೂ ಮಹಾದಾನಿ ಶಿರಸಂಗಿ ಲಿಂಗರಾಜರ ಪುತ್ಥಳಿಗೆ ಮಾಲಾರೆ​‍್ಣ ಮಾಡಿದ ನಂತರ ನವಲಗುಂದ ಪ್ರಥಮ ಪ್ರಜೆ ಪುರಸಭೆ ಅಧ್ಯಕ್ಷ ಅಪ್ಪಣ್ಣ ಹಳ್ಳದ ನಗರದ ಹಿರಿಯರ ಪರವಾಗಿ ಮಾಲಾರೆ​‍್ಣ ಮಾಡಿ ಸ್ವಾಗತಿಸಿದರು. ನಂತರ ಮಾತನಾಡಿದ ಅವರು ಮಹದಾಯಿ, ಕಳಸಾ-ಬಂಡೂರಿ ಯೋಜನೆ ಜಾರಿ ಮಾಡಲು ವಿಧಾನಸಭೆಯಲ್ಲಿ ಪಕ್ಷಾತೀತವಾಗಿ ಎಲ್ಲ ಶಾಸಕರು ಒಗ್ಗಟ್ಟಿನ ನಿರ್ಣಯ ತೆಗೆದುಕೊಂಡು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಿದರೂ ಯೋಜನೆ ಜಾರಿಗೆ ಇಲ್ಲಿಯವರೆಗೆ ಕ್ರಮ ಕೈಗೊಳ್ಳುತ್ತಿಲ್ಲ. ನಂತರ ಮಹಾದಾಯಿ ನ್ಯಾಯಾಧೀಕರಣ ತೀರ​‍್ಿನಲ್ಲಿ ರಾಜ್ಯಕ್ಕೆ 13.42 ಟಿಎಂಸಿ ನೀರು ಹಂಚಿಕೆ ಮಾಡಿದ ನಂತರ ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ಕೇಂದ್ರ ಸರ್ಕಾರ ಆದೇಶ ಹೊರಡಿಸಿದರೂ ನಾವೆಲ್ಲರೂ ಒಟ್ಟಿಗೆ ಸೇರಿ ಈ ಯೋಜನೆ ಜಾರಿಗೆ ಮುಂದಾಗಬೇಕೆಂದು ಹೇಳಿದರು. ದಿನಾಂಕ: 03 ರಂದು ದಾವಣಗೇರೆಯಲ್ಲಿ ಸಿದ್ದರಾಮಯ್ಯ ಅವರ 75ನೇ ವರ್ಷದ ಹುಟ್ಟು ಹಬ್ಬದ ಅಮೃತ ಮಹೋತ್ಸವ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ ಆಯೋಜಿಸಿದ ಅಗಸ್ಟ್‌ 15ರಂದು ನಡೆದ ಬೆಂಗಳುರಿನ ಸಂಗೊಳ್ಳಿ ರಾಯಣ್ಣ ವೃತ್ತದಿಂದ ನ್ಯಾಶನಲ್ ಕಾಲೇಜು ಮೈದಾನದ ವರೆಗೆ ಸ್ವತಂತ್ರ ನಡುಗೆ ಕಾರ್ಯಕ್ರಮಗಳಿಗೆ ಲಕ್ಷೊಪ ಲಕ್ಷ ಜನ ಕಾಂಗ್ರೇಸ್‌ಗೆ ಬೆಂಬಲಿಸುತ್ತಿದ್ದಾರೆ, 2023ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು.  

ಅಂದಿನ ನವಲಗುಂದ ಶಾಸಕರಾಗಿದ್ದ ಎನ್‌.ಹೆಚ್‌. ಕೋನರಡ್ಡಿ ಅವರ ಒತ್ತಡದ ಮೇಲೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಇದ್ದಾಗ ನೀರಾವರಿ ಸಚಿವನಾಗಿ ಮಲಪ್ರಭಾ ಬಲದಂಡೆ ಕಾಲುವೆಯನ್ನು ಅಭಿವೃದ್ಧಿಪಡಿಸಲು 1365 ಕೋಟಿ ಅನುದಾನ ನೀಡಿ 39ಅ ವ್ಯರ್ಥವಾಗಿ ಹೋಗುವ ನೀರನ್ನು ಉಳಿತಾಯ ಮಾಡಿ ಕೊನೆಯ ಅಂಚಿನ ರೈತರ ಜಮೀನುಗಳಿಗೆ ನೀರು ಹರಿಯುವಂತೆ ಮಾಡಲಾಗಿದೆ ಎಂದು ಎಂ.ಬಿ. ಪಾಟೀಲ ಹೇಳಿದರು. 

ಮಾಜಿ ನೀರಾವರಿ ಸಚಿವರಾದ ಎಂ.ಬಿ. ಪಾಟೀಲ ಅವರು ಪ್ರಚಾರ ಸಮೀತಿಯ ಅಧ್ಯಕ್ಷರಾಗಿ ಪ್ರಥಮ ಬಾರಿಕೆ ಆಗಮಿಸಿದ ಅವರು ಮಹಾದಾಯಿ ಹಾಗೂ ಮಲಪ್ರಭಾ ಬಲದಂಡೆ ಕಾಲುವೆ, ಸಮುದಾಯ ಭವನ ನಿರ್ಮಾಣ, ರಸ್ತೆ ದುರಸ್ಥಿಗಾಗಿ ನವಲಗುಂದ ಕ್ಷೇತ್ರಕ್ಕೆ  ಅಂದಾಜು 1700 ಕೋಟಿ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿ ಪಡಿಸಿದ್ದಕ್ಕೆ ಅವರನ್ನು ಕ್ಷೇತ್ರದ ಜನತೆಯ ಪರವಾಗಿ ನವಲಗುಂದ ಮಾಜಿ ಶಾಸಕ ಎನ್‌.ಹೆಚ್‌. ಕೋನರಡ್ಡಿ ಅವರು ಕೃತಜ್ಞತೆ ಸಲ್ಲಸಿದರು. 

ಈ ಸಂದರ್ಬಧಲ್ಲಿ ಮಾಜಿ ಸಚಿವ ಕೆ.ಎನ್‌. ಗಡ್ಡಿ, ಧರಾವಾಡ ಜಿಲ್ಲಾ ಗ್ರಾಮೀನ ಯುವ ಅಧ್ಯಕ್ಷ ವಿನೋದ ಅಸೂಟಿ, ಪುರಸಭೆ ಅಧ್ಯಕ್ಷ ಅಪ್ಪಣ್ಣ ಹಳ್ಳದ, ಸ್ಥಾಯಿ ಸಮತಿ ಚೇರಮನ್ ಸುರೇಶ ಮೇಟಿ, ಸದಸ್ಯರುಗಳಾದ ಜೀವನ ಪವಾರ, ಮಂಜು ಜಾಧವ, ಶಿವಾನಂದ ತಡಸಿ, ಪ್ರಕಾಶ ಶಿಗ್ಲಿ, ಮೋದಿನಸಾಬ ಶಿರೂರ, ಮಹಾಂತೇಶ ಭೋವಿ,   ಹುಸೇನಬಿ ದಾರವಾಡ,  ಕೆಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಾಪುಸೌಡ ಪಾಟೀಲ, ಸಮಾಜದ ಅಧ್ಯಕ್ಷ ನಿಂಗಪ್ಪ ಹಳ್ಳದ, ಮಹಾದಾಯಿ ಹೋರಾಟಗಾರ ಸುಭಾಷಚಂದ್ರಗೌಡ ಪಾಟೀಲ, ಲಾಲುಗುಡಿ ಹನಮಂತ ದೇವಸ್ಥಾನದ ಅಧ್ಯಕ್ಷ ಸಕ್ರಾ​‍್ಪ ಹಳ್ಳದ, ಅರುಣಕುಮಾರ ಮಜ್ಜಗಿ, ಬಸಣ್ಣ ಹರಿವಾಳದ, ಗಂಗಣ್ಣ ಹಳ್ಳದ, ನಾಗಪ್ಪ ಸಂಗಟಿ, ಮಂಜು ಸುಬೇದಾರ, ಬಸವರಾಜ ಸೋಮಗೊಂಡ,  ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಗುರುಪ್ರಸಾಧ ದೇಸಾಯಿಗೌಡ ಪಾಟೀಲ, ಲಕ್ಷ್ಮಣ ಹಳ್ಳದ, ಉಸ್ಮಾನ ಬಬರ್ಚಿ, ಈರಣ್ಣ ಸಿಡಗಂಟಿ, ಕೀರೀಣ ಉಳ್ಳಿಗೇರಿ, ಶರಣು ಯಮನೂರ, ಸುಲೇಮಾನ ನಾಶಿಪುಡಿ, ವಿ.ಸಿ. ಹಳ್ಳದ, ಹಮನಂತ ಮಾಳಗಿ, ಸಿರಾಜುದ್ದೀಣ ದಾರವಾಡ, ನಾಗಪ್ಪ ಹಳ್ಳದ, ಆರ್‌.ಎನ್‌. ಧಾರವಾಡ, ನಾರಾಯಣ ರಂಗರಡ್ಡಿ, ಹನಮಂತಪ್ಪ ಇಬ್ರಾಹಿಮಪುರ,  ಏಕನಾಥ ಜಾಧವ,   ನಂದಿನಿ ಹಾದಿಮನಿ ಹಾಗೂ ಇತರರು ಉಪಸ್ಥಿತರಿದ್ದರು.