ಲೋಕದರ್ಶನ ವರದಿ
ಹೊಸಪೇಟೆ 03: ಗ್ರಾಮೀಣ ಕ್ರೀಡೆಗಳಿಂದ ಏಕಾಗ್ರತೆ, ಆತ್ಮವಿಶ್ವಾಸ ವೃದ್ಧಿ ಮತ್ತು ಪರಸ್ಪರ ಸೌಹರ್ದಯುತ ವಾತಾವರಣ ನಿರ್ಮಿಣವಾಗುತ್ತದೆ ಎಂದು ಪತ್ರಕರ್ತ ನಾಗರಾಜ್ ಇಂಗಳಗಿ ಹೇಳಿದರು.
ಅವರು ಸಮೀಪದ ಕಮಲಾಪುರದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬಳ್ಳಾರಿ ಮತ್ತು ವಿಜಯನಗರ ಯುವಕರ ಬಳಗ ಹೊಸಪೇಟೆ ಇವುಗಳ ಸಹಯೋಗದಲ್ಲಿ ಅಯೋಜಿಸಿದ್ದ ಗ್ರಾಮೀಣ ಕ್ರೀಡೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯಕ್ಕೆ ಕ್ರೀಡಾಸಕ್ತಿ ಕಡಿಮೆಯಾಗುತ್ತಿದೆ, ನಶಿಸುತ್ತಿರುವ ಗ್ರಾಮೀಣ ಕ್ರೀಡೆಗಳಿಗೆ ಸರಕಾರ ಒತ್ತು ನೀಡಬೇಕಿದ್ದು, ಸಂಘ ಸಂಸ್ಥೆಗಳು ಕ್ರೀಡೆಗೆ ಹೆಚ್ಚು ಆದ್ಯತೆ ನೀಡಬೇಕಿದೆ ಎಂದು ಕಿವಿಮಾತು ಹೇಳಿದರು.
ಬಳಗದ ಅಧ್ಯಕ್ಷ ಸೋಮಶೇಖರ್ ನಾಯಕ ಮಾತನಾಡಿ, ಕ್ರೀಡೆಗಳಲ್ಲಿ ಪಾಲ್ಗೊಳ್ಳುವಿಕೆ ಮುಖ್ಯವಾಗಿದ್ದು ಸೋಲು ಗೆಲುವನ್ನು ಸ್ಪಧರ್ಾ ಮನೋಭಾವದಿಂದ ಸ್ವೀಕರಿಸಬೇಕು ಗೆಲುವಿಗಿಂತ ಸೋಲು ನಮಗೆ ಅನೇಕ ಪಾಠ ಕಲಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಕ್ರೀಡೆಗೆ ಚಾಲನೆ ನೀಡಿದ ಕಮಲಾಪುರ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯರಾದ ಮುಕ್ತಿಯಾರ್ ಪಾಷ ಅವರನ್ನು ಪತ್ರಕರ್ತ ನಾಗರಾಜ್ ಇಂಗಳಗಿ ಹಾಗು ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಗುಂಡಿ ರಮೇಶ್ ಇವರು ಸನ್ಮಾಸಿದರು.
ವೇದಿಕೆಯಲ್ಲಿ ಕಮಲಾಪುರ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯರಾದ ಮುಕ್ತಿಯಾರ್ ಪಾಷ, ಕನರ್ಾಟಕ ರಕ್ಷಣಾ ವೇದಿಕೆ ಯುವ ಶಕ್ತಿ ಉತ್ತರ ಕರ್ನಾಟಕ ಯುವ ಘಟಕದ ಅಧ್ಯಕ್ಷ ಪರಶುಮ್ ನಾಯಕ ಗಂಗಾವತಿ, ಕಮಲಾಪುರ ವಾಲ್ಮಿಕಿ ಸಮಾಜದ ಅಧ್ಯಕ್ಷರು ಹಾಗು ಪಟ್ಟಣ ಪಂಚಾಯಿತಿ ಸದಸ್ಯರಾದ ಗಂಗಯ್ಯ, ಮಾಳಿಗಿ ರಾಮಸ್ವಾಮಿ, ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಶಿವಕುಮಾರ ಮಠದ್, ಸಂಘಟನೆಯ ಸದಸ್ಯರಾದ ಹರೀಶ್, ಷಣ್ಮುಖ, ಎಲ್ಲಪ್ಪ, ಖಾಸಿಂ ಬಡಿಗೇರ್, ಇ.ವ್ಯಾಸರಾಜ್, ಹನುಮಂತಪ್ಪ, ಹಳ್ಳಿ ರಾಘು, ಶ್ರೀನಿವಾಸ್ ಮತ್ತು ನಾಗ ಡಿಎಸ್ಅರ್ ಇತರರಿದ್ದರು.
ವಿವಿಧ ಭಾಗದ 11 ಕಬಡ್ಡಿ ತಂಡಗಳು, ಎಂಟು ಕೊಕ್ಕೊ ತಂಡಗಳು ಹಾಗು 150 ಜನ ಗುಂಡು ಎತ್ತುವ ಸ್ಪಧರ್ೆಯಲ್ಲಿ ಭಾಗವಹಿಸಿದ್ದರು. ಪ್ರಥಮ ಬಹುಮಾನ ಫ್ರಂಡ್ಶಿಪ್ ಯುಥ್ ಕ್ಲಬ್ ಹೊಸಪೇಟೆ (ಕಬಡ್ಡಿ ಪ್ರಥಮ), ಕಮಲಾಪುರ ಕ್ಲಬ್ ನಂ 1 (ಕಬಡ್ಡಿ ದ್ವಿತೀಯ), ಕಮಲಾಪುರದ ಬುದ್ದ ವಾರಿಯರ್ ತಂಡ (ಕೊಕ್ಕೊ ಪ್ರಥಮ), ಕಮಲಾಪುರ ಬಾಯ್ಸ್ (ಕೊಕ್ಕೊ ದ್ವಿತೀಯ) ಸ್ಥಾನ ಪಡೆದರು. ಗುಂಡು ಎತ್ತುವ ಸ್ಪಧರ್ೆಯಲ್ಲಿ ಕಮಲಾಪುರದ ಮಸ್ತಾನ್ ವಿಜೇತರಾದರು. ವಿವಿಧ ಸ್ಥಾನ ಪಡೆದ ಸ್ಪರ್ಧಾರ್ಥಿಗಳಿಗೆ ಬಳಗದ ಅಧ್ಯಕ್ಷರಾದ ಸೋಮಶೇಖರ್ ನಾಯಕ ಬಹುಮಾನ ವಿತರಿಸಿದರು.