ಹೊಸಪೇಟೆ 25: ಮುಂಬರುವ ರಾಜ್ಯ ಬಜೆಟ್ನಲ್ಲಿ ಹಿಂದುಳಿದ ವರ್ಗಗಳ ಸಮುದಾಯಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ಒತ್ತಾಯಿಸಿ ಹಿಂದುಳಿದ ವರ್ಗಗಳ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಜಾತಿಗಳ ಪದಾಧಿಕಾರಿಗಳು ಅರಣ್ಯ ಸಚವಿ ಆನಂದ್ ಸಿಂಗೆಗೆ ಮನವಿ ಸಲ್ಲಿಸಿದರು.
ಒಕ್ಕೂಟದ ಅಧ್ಯಕ್ಷ ವೈ. ಯಮುನೇಶ್ ಮಾತನಾಡಿ, ರಾಜ್ಯದ ಜನಸಂಖ್ಯೆಯಲ್ಲಿ ಶೇ.35% ರಷ್ಟು ಹಿಂದುಳಿದ ಜಾತಿಯ ಸಮುದಾಯಗಳಿರುವುದನ್ನು ಹಲವು ಆಯೋಗಗಳ ಸಮೀಕ್ಷೆ ಮತ್ತು ಅಂಕಿ ಅಂಶಗಳಲ್ಲಿ ಪ್ರಕಟವಾಗಿದೆ. ಬೆಸ್ತ(ಗಂಗಾಮತ), ಯಾದವ, ಉಪ್ಪಾರ, ಕುರುಬ, ಮಡಿವಾಳ, ಸವಿತ, ಈಡಿಗ, ವಿಶ್ವಕರ್ಮ, ರಜಪೂತ, ಗೌಳಿ, ನೇಕಾರ, ಬಲಿಜ, ಮರಾಠ, ಕಲಾಲ್, ಸೋಮವಂಶ ಕ್ಷತ್ರಿಯ, ಮುಂತಾದ ನೂರಾರು ಹಿಂದುಳಿದ ಜಾತಿಗಳಿದ್ದು, ಈ ವರ್ಗಗಳು ಎಲ್ಲಾ ಕ್ಷೇತ್ರಗಳಲ್ಲಿ ಸಾಮಾಜಿಕ ನ್ಯಾಯದಿಂದ ವಂಚಿತವಾಗಿವೆ ಎಂದು ದೂರಿದರು.
ರಾಜ್ಯ ಹಾಗೂ ಕೇಂದ್ರ ಸಕರ್ಾರಗಳು ಪರಿಶಿಷ್ಟ ಜಾತಿ, ಹಾಗೂ ಪರಿಶಿಷ್ಟ ವರ್ಗಗಳ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ನಲ್ಲಿ ಅನುದಾನ ಹಂಚಿಕೆ ಮಾಡುವ ವ್ಯವಸ್ಥೆ ಇದೆ. ಅದೇ ರೀತಿ ಮಾಚರ್್ ತಿಂಗಳಲ್ಲಿ ಮಂಡನೆಯಾಗುವ ಬಜೆಟ್ನಲ್ಲಿ ಹಿಂದುಳಿದ ವರ್ಗಗಳಿಗೆ ಸಹ ಜನಸಂಖ್ಯಾ ಪ್ರಮಾಣಕ್ಕನುಗುಣವಾಗಿ ಅನುದಾನ ಹಂಚಿಕೆ ಮಾಡಿ ಈ ವರ್ಗಗಳ ಸರ್ವತೋಮುಖ ಅಭಿವೃಧ್ದಿಗೆ ಚಾಲನೆ ನೀಡಬೇಕೆಂದು ಮನವಿಮಾಡಿದರು.
ಈ ಸಂದರ್ಭದಲ್ಲಿ ವಿವಿಧ ಓ.ಬಿ.ಸಿ. ಸಮುದಾಯಗಳ ಮುಖಂಡರಾದ ಆರ್.ಕೊಟ್ರೇಶ್, ಬೋಡಾರಾಮಪ್ಪ, ರವಿಶಂಕರ್ ದೇವರಮನಿ, ಯು.ಅಶ್ವತಪ್ಪ, ರಾಘವೇಂದ್ರ, ಕುಮಾರಸ್ವಾಮಿ, ರಾಜ್ಕುಮಾರ್, ಸೋಮಣ್ಣಯಾದವ್, ಆಂಜನೇಯಲು, ಮಲ್ಲಿಕಾಜರ್ುನ, ರವಿಕುಮಾರ್, ರೂಪೇಶ್ ಇತರರಿದ್ದರು.