ಲೋಕದರ್ಶನ ವರದಿ
ಹೊಸಪೇಟೆ 03: ಮಕ್ಕಳು ಶಿಕ್ಷಣ ಮತ್ತು ಪಾಲಕ ಪೋಷಕರೊಂದಿಗೆ ನೆರವು ನೀಡವ ಮೂಲಕ ದೇಶದ ಉತ್ತಮಪ್ರಜೆಗಳಾಗಿ ಶಿಸ್ತುಬದ್ಧವಾಗಿ ಬಾಳಬೇಕು ಎಂದು ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ಮಾಜಿ ಲೋಕಸಭಾ ಸದಸ್ಯ ಡಾ.ಎಚ್.ಟಿ.ಸಾಂಗ್ಲಿಯಾನ ಹೇಳಿದರು.
ಬೆಂಗಳೂರಿನ ಮಧು ಸೇವಾಶ್ರಮ ಚಾರಿಟೇಬಲ್ ಟ್ರಸ್ಟ್ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನೂತವಾಗಿ ಆರಂಭಿಸಲು ಉದ್ದೇಶಿತ ಬಡ, ಹಿಂದೂಳಿದ, ನಿರ್ಗತಿಕ ಮಕ್ಕಳ ಉಚಿತ ವಸತಿ ಶಾಲೆಯ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಶೈಕ್ಷಣಿಕ ಅರಿವಿನಿಂದ ಮಾತ್ರ ಸಮಾಜ ಸುದಾರಿಸಲು ಸಾಧ್ಯ ಸರ್ಕಾರದ ಅನೇಕ ಯೋಜನೆಗಳು ಹಾಗೂ ಸವಲತ್ತುಗಳು ಸಾಕಷ್ಟು ಅವಕಾಶಗಳನ್ನು ನೀಡಿದ್ದರೂ ಮಾಹಿತಿಯ ಕೊರತೆಯಿಂದಾಗಿ ಅವುಗಳಿಂದ ವಂಚಿತವಾಗುತ್ತಿರುವುದು ವಿಷಾದನೀಯ ಇವುಗಳಿಂದ ಪಾರಾಗಲು ಶಿಕ್ಷಣವೊಂದೆ ದಾರಿಯಾಗಿದ್ದು ಗ್ರಾಮಗಳ ಮಕ್ಕಳು ಸಹ ಉತ್ತಮವಾದ ಶಿಕ್ಷಣ ಪಡೆಯಬೇಕು ಎಂಬ ಆಸೆಯಿಂದ ಇಂತಹ ಸಂಸ್ಥೆಗಳು ಮುಂದೆ ಬಂದು ನೀಡುತ್ತಿರುವು ಅವಕಾಶಗಳನ್ನು ಬಳಸಿಕೊಳ್ಳುವ ಮೂಲಕ ಪ್ರಗತಿ ಹೊಂದಬೇಕು ಎಂದರು.
ಸಂಸ್ಥೆಯ ಅಧ್ಯಕ್ಷ ಸ್ಯಾಮಸನ್ ಸಂತೋಷ ಮಾತನಾಡಿ ಬೆಂಗಳೂರು ಕೇಂದ್ರವಾಗಿ ರಾಜ್ಯದ ಅನೇಕ ಕಡೆ ಇಂತಹ ಬಡ, ನಿರ್ಗತಿಕ ಅನಾಥ ಮಕ್ಕಳಿಗೆ ಹಾಗೂ ಆಥರ್ಿಕ ದುರ್ಬಲರಿಗೆ ಇಂತಹ ಉಚಿತ ವಸತಿ ಶಾಲೆಗಳನ್ನು ಆರಂಭಿಸಲಾಗಿದ್ದು ಸಾವಿರಾರು ಬಡವರು ಪ್ರಯೋಜನ ಪಡೆದಿದ್ದಾರೆ ಹಿಂದೂಳಿದ ಹೈದ್ರಾಬಾದ್ ಕರ್ನಾಟಕದ ಕೊಪ್ಪಳದಲ್ಲಿ ಇಂತಹ ಶಾಲೆಗಳು ನಡೆಯುತ್ತಿದ್ದು ಹೊಸಪೇಟೆಯ ಬಳಿಯ ಇಂಗಳಗಿಯಲ್ಲಿಯೂ ಇದೇ ಶೈಕ್ಷಣಿಕ ವರ್ಷದಿಂದ ಶಾಲೆ ಆರಂಭಿಸಲಾಗುತ್ತಿದೆ ಎಂದರು. ಎಲ್ಲರೂ ಸಹಕಾರ ಹಾಗೂ ಕಾರ್ಯಕ್ರಮದ ಲಾಭ ಪಡೆಯುವಂತೆ ಕೋರಿದರು.
ಸ್ಥಳೀಯ ಯುವ ಮುಖಂಡ ಹಾಗೂ ಗ್ರಾಮ ಪಂಚಾಯ್ತಿ ಸದಸ್ಯ ಉದೇದಪ್ಪ ಮಾತನಾಡಿ ಶೈಕ್ಷಣಿಕ ಪ್ರಗತಿಯ ಜೊತೆ ಈ ಭಾಗದ ಮಹಿಳೆ ಹಾಗೂ ಯುವ ಜನಾಂಗವೂ ಸಹ ಉದ್ಯೋಗಿಗಳಾಗಲು ಸಹ ಮಧು ಸೇವಾಶ್ರಮ ಚಾರಿಟೇಬಲ್ ಟ್ರಸ್ಟ್ ಸಹಕಾರ ನೀಡಲು ಮನವಿ ಮಾಡಿದರು,
ಇದೇ ಸಂದರ್ಭದಲ್ಲಿ ರಾಷ್ಟ್ರಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕ ಮಧುಸೂಧನ, ಹಿರಿಯ ದಕ್ಷ ಪ್ರಾಮಾಣಿಕ ಪೋಲೀಸ್ ಅಧಿಕಾರಿಯಾಗಿದ್ದ ಡಾ.ಎಚ್.ಟಿ.ಸಾಂಗ್ಲಿಯಾನ ಸೇರಿದಂತೆ ಅನೇಕರನ್ನು ಸನ್ಮಾನಿಸಲಾಯಿತು.