ಹೊಸಪೇಟೆ: ಕೆರೆಗಳ ಅಭಿವೃದ್ಧಿಗೆ ಮುಂದಾಗಿ: ಸಚಿವ ಮಾಧುಸ್ವಾಮಿ

ಲೋಕದರ್ಶನ ವರದಿ

ಹೊಸಪೇಟೆ 03: ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಅಡಿ ಶಿಕ್ಷಣ, ಆರೋಗ್ಯಕ್ಕೆ ಒತ್ತು ನೀಡಿದಂತೆ ಅಂತರ್ಜಲ ಅಭಿವೃದ್ಧಿ ಮತ್ತು ಕೆರೆಗಳ ಸಂರಕ್ಷಣೆ ಹಾಗೂ ಕೆರೆಗಳ ಅಭಿವೃದ್ಧಿಗೆ ಮುಂದಾಗಬೇಕು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ,ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಮನವಿ ಮಾಡಿದರು. 

ಹೊಸಪೇಟೆಯ ಕೃಷ್ಣ ಪ್ಯಾಲೇಸ್ ಹೋಟಲ್ ಸಭಾಂಗಣದಲ್ಲಿ ಭಾನುವಾರ ನಡೆದ ರಾಜ್ಯದ ಕೆರೆಗಳನ್ನು ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಅಡಿ ಅಭಿವೃದ್ಧಿಪಡಿಸಲು ಕಾರ್ಪೋರೆಟ್ ಸಂಸ್ಥೆಗಳೊಂದಿಗೆ ಹಾಗೂ ಉದ್ಯಮಿಗಳೊಂದಿಗೆ ಪೂರ್ವಭಾವಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ದಾಹಕ್ಕೆ ಮೀತಿಮಿರಿದ ಪ್ರಕೃತಿ ಬಳಕೆ ಮಾಡಿದ ಪರಿಣಾಮ ನೀರಿನ ಸಮಸ್ಯೆ ಸೇರಿದಂತೆ ಇಂದು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಇದನ್ನು ಸರಿಪಡಿಸುವುವುದು ಇದರ ಪ್ರಯೋಜನ ಪಡೆದ ನಮ್ಮೆಲ್ಲರ ಹೊಣೆಗಾರಿಕೆ ಎಂದು ಪರಿಭಾವಿಸಬೇಕು ಎಂದರು.

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಕಾರ್ಯದಶರ್ಿಗಳಾದ ಮೃತ್ಯುಂಜಯ ಸ್ವಾಮಿ ಅವರು ಮಾತನಾಡಿ, ರಾಜ್ಯದಲ್ಲಿ 36729ಕೆರೆಗಳಿದ್ದು, ಕೆಲ ಕೆರೆಗಳು ಜಿಪಂ ವ್ಯಾಪ್ತಿಗೆ, ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ 3335 ಕೆರೆಗಳು, ಇನ್ನೂ ಕೆಲ ಕೆರೆಗಳು ಸಿಎಂಸಿ ಹಾಗೂ ಬಿಬಿಎಂಪಿ ವ್ಯಾಪ್ತಿಗೆ ಬರುತ್ತವೆ ಎಂದರು. ಕೆರೆಗಳು ನಾನಾ ಕಾರಣಗಳಿಂದ ಬಹಳ ಒತ್ತುವರಿಯಾಗಿದ್ದು, ಕೆರೆಗಳನ್ನು ಸಿಎಆರ್ ಅಡಿ ಅಭಿವೃದ್ಧಿಪಡಿಸಲು ಕಾರ್ಪೋರೆಟ್ ಸಂಸ್ಥೆಗಳು ಹಾಗೂ ಉದ್ಯಮಿಗಳು ಮುಂದೆ ಬಂದರೇ ಅಗತ್ಯ ಸಹಕಾರ ನೀಡಲಾಗುವುದು. ತಮ್ಮ ವ್ಯಾಪ್ತಿಯ ಕೆರೆಗಳನ್ನು ಅಭಿವೃದ್ಧಿಪಡಿಸಲು ಮುಂದೆ ಬಂದರೇ ಈ ಕಾರ್ಯಕ್ರಮದ ಉದ್ದೇಶ ಸಾರ್ಥಕವಾಗುತ್ತದೆ ಎಂದರು. 

ಶಾಸಕ ಈ.ತುಕಾರಾಂ, ಸಂಸದ ವೈ.ದೇವೇಂದ್ರಪ್ಪ ಅವರು ಮಾತನಾಡಿದರು.ಸಣ್ಣ ನೀರಾವರಿ ಇಲಾಖೆಯ ನಿದರ್ೇಶಕ ಶಿವುಸ್ವಾಮಿ ಈ ಯೋಜನೆಯ ಉದ್ದೇಶ ಹಾಗೂ ಅಗತ್ಯತೆ ಕುರಿತು,ಇದುವರೆಗಿನ ಪ್ರಗತಿಯನ್ನು ಸಭೆಯಲ್ಲಿ ಪ್ರಸ್ತುತಪಡಿಸಿದರು. 

ಈ ಸಂದರ್ಭದಲ್ಲಿ ಕಾರ್ಪೋರೇಟ್ ಸಂಸ್ಥೆಗಳ ಪ್ರತಿನಿಧಿಗಳು, ಉದ್ಯಮಿಗಳು, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಇದ್ದರು.