ಕುದರಿ ಗಾಡಿ ಬೈಕ್ ಡಿಕ್ಕಿ: ಬೈಕ್ ಸವಾರ ಸಾವು
Horse carriage collides with bike: Biker dies
ಲೋಕದರ್ಶನ ವರದಿ
ಜಮಖಂಡಿ 10: ತಾಲ್ಲೂಕಿನ ಕಲಬೀಳಗಿ ಗ್ರಾಮದಲ್ಲಿ ಬಾಲಕನೊರ್ವನು ಕುದರಿ ಗಾಡಿಯನ್ನು ಓಡಿಸಿಕೊಂಡು ಬರುವ ಸಮಯದಲ್ಲಿ ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಸಂಭವಿಸಿದೆ.
ಗೋಠೆ ಗ್ರಾಮದ ಕಡೆಯಿಂದ ಬೈಕ್ ಸವಾರ ಪಂಡಿತ ಜ್ಞಾನೋಭಾ ಪವಾರ (36) ಕಲಬೀಳಗಿ ಗ್ರಾಮದ ರಸ್ತೆ ಕಡೆಗೆ ಹೋಗುವ ಸಮಯದಲ್ಲಿ ಕುದುರೆಯನ್ನು ಓಡಿಸಿಕೊಂಡು ಬರುತ್ತಿದ್ದ ಬಾಲಕ ಮಲ್ಲಿಕಾರ್ಜುನ ಶಾಂತಯ್ಯ ಮಠಪತಿ (17) ಗೋಠೆ ಗ್ರಾಮದಿಂದ ಕಲಬೀಳಗಿ ಕಡೆಗೆ ಅತೀ ವೇಗವಾಗಿ ಕುದರೆ ಗಾಡಿಯನ್ನು ಓಡಿಕೊಂಡಿಸಿಕೊಂಡು ಬಂದು ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ ಎದೆ ಭಾಗಕ್ಕೆ ತೀವ್ರ ಪಟ್ಟಾದ ಕಾರಣ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಈ ಕುರಿತು ಸಾವಳಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪಿಎಸ್‌ಐ ಅಪ್ಪಣ ಐಗಳಿ ತನಿಖೆಯನ್ನು ಮುಂದುವರಿಸಿದ್ದಾರೆಂದು ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 