ಮಾಜಿ ಸೈನಿಕರ ಸಂಘದ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಸನ್ಮಾನ
Honors given to new President and Vice President of Ex-Servicemen's Association
ಲೋಕದರ್ಶನ ವರದಿ
ಇಂಡಿ 24: ತಾಲೂಕಿನ ಮಾಜಿ ಸೈನಿಕರ ಸಂಘದ ನೂತನ ಅಧ್ಯಕ್ಷರಾಗಿ ಬಿ ಎಸ್.ಬಂಕೂರ, ಉಪಾಧ್ಯಕ್ಷರಾಗಿ ಶ್ರೀಮಂತ ಬಿರಾದಾರ ಅವರನ್ನು ಇಂಡಿ ತಾಲೂಕಾ ಜೆಡಿಎಸ್ ಅಧ್ಯಕ್ಷ ಬಿ ಡಿ ಪಾಟೀಲರು ಗೌರವ ಪೂರ್ವಕವಾಗಿ ಸನ್ಮಾನಿಸಿದರು.
ನಂತರ ಮಾತನಾಡಿ, ಸುದೀರ್ಘವಾಗಿ ದೇಶ ಸೇವೆ ಮಾಡಿ ನಿವೃತ್ತಿ ನಂತರ ಕೂಡಾ ಸಮಾಜ ಮುಖಿ ಕಾರ್ಯದಲ್ಲಿ ತೊಡಗಿದ ಮಾಜಿ ಸೈನಿಕರ ಸಂಘದ ಸೇವೆ ಅನುಪಮವಾಗಿದೆ. ಇವರ ಸಮಾಜ ಸೇವಾ ಕಾರ್ಯಗಳಾದ ಉಚಿತ ಆರೋಗ್ಯ ತಪಾಸಣೆ, ಸ್ವಚ್ಛತಾ ಆಂದೋಲನ, ರಾಷ್ಟ್ರೀಯ ಹಬ್ಬಗಳ ಆಚರಣೆ, ಸ್ವಾತಂತ್ರ್ಯ ಹೋರಾಟಗಾರ ಬಗ್ಗೆ ಅಭಿಮಾನ ಮೂಡಿಸುವ ಕಾರ್ಯಕ್ರಮ ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು.
ಮಾಜಿ ಪುರಸಭಾ ಸದಸ್ಯ ಸಿದ್ದು ಡಂಗಾ, ಜೆಡಿಎಸ್ ಮುಖಂಡ ಶ್ರೀಶೈಲ ಗೌಡ ಪಾಟೀಲ್, ಮಾಜಿ ಸೈನಿಕರಾದ ಡಿ.ಸಿ.ವಾಲಿಕಾರ, ರಾಜೇಂದ್ರ ವಾಲಿಕಾರ, ದುಂಡು ಬಿರಾದಾರ, ಯಲ್ಲಪ್ಪ ಹರಳಯ್ಯ ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 