ಕೊಪ್ಪಳ 06: ನಗರಸಭೆ ಸ್ಥಾಯಿ ಸಮಿತಿ ನೂತನ ಅಧ್ಯಕ್ಷರಾಗಿ ಬಸಯ್ಯ ಹಿರೇಮಠ ಅವರು ಸೋಮವಾರ ದಂದು ಆಯ್ಕೆಯಾದರು. ಮಂಗಳವಾರ ಸಂಜೆ ನಗರಸಭೆ ಸ್ಥಾಯಿ ಸಮಿತಿ ನೂತನ ಅಧ್ಯಕ್ಷರಾದ ಬಸಯ್ಯ ಹಿರೇಮಠ ಅವರಿಗೆ ಜಂಗಮ ಸಮಾಜ ವತಿಯಿಂದ ಕೊಪ್ಪಳದ ಹೊಸಪೇಟೆ ರಸ್ತೆಯಲ್ಲಿರುವ ರೇಣುಕಾಚಾರ್ಯರ ಮಂದಿರದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಂಗಮ ಸಮಾಜ ಗೌರವಧ್ಯಕ್ಷರಾದ ಕೊಟ್ರಬಸಯ್ಯ ಹಿರೇಮಠ, ನಿರ್ದೇಶಕರಾದ ವಿಜಯಕುಮಾರ್ ವಸ್ತ್ರದ, ಶಿವಕುಮಾರ್ ಹಿರೇಮಠ, ಪಂಪಯ್ಯ ಹಿರೇಮಠ, ಮುಖಂಡರಾದ ಸದಾಶಿವಯ್ಯ ಹಿರೇಮಠ, ಮಹಾಂತಯ್ಯ ಶಾಸ್ತ್ರಿ, ದಯಾನಂದ, ಕುಮಾರ್ ಸಮರ್ಥ ಹಿರೇಮಠ ಸೇರಿದಂತೆ ಇನ್ನೂ ಅನೇಕ ಸಮಾಜದ ಮುಖಂಡರು ಇದ್ದರು.