ಗಡಿ ಕಾಯುವ ಅಗ್ನಿವೀರ ಹುದ್ದೆಗೆ ಆಯ್ಕೆಯಾದ ಪ್ರಯಕ್ತ ಗ್ರಾಮಸ್ಥರಿಂದ ಸನ್ಮಾನ

ಗಡಿ ಕಾಯುವ ಅಗ್ನಿವೀರ ಹುದ್ದೆಗೆ ಆಯ್ಕೆಯಾದ ಪ್ರಯಕ್ತ ಗ್ರಾಮಸ್ಥರಿಂದ ಸನ್ಮಾನ Honored by the villagers of Priyakta, who was selected for the post of Agniveer to guard the border

ಲೋಕದರ್ಶನ ವರದಿ 

ಸಿಂದಗಿ 21 : ತಾಲೂಕಿನ ಮಾಡಬಾಳ ಗ್ರಾಮದ ಯುವಕ ಮಹೇಶ ಸಿದ್ದನಗೌಡ ಕೋಟಿಖಾನಿ ಹಾಗೂ ಅಜಯ ಜಟ್ಟೇಪ್ಪ ಹುಂಡೆಕಾರ ಇವರು ಗಡಿ ಕಾಯುವ ಅಗ್ನಿವೀರ ಹುದ್ದೆಗೆ ಆಯ್ಕೆಯಾದ ಪ್ರಯಕ್ತ ಗ್ರಾಮಸ್ಥರು ಶಾಲಾ ಆವರಣದಲ್ಲಿರುವ ಹುತಾತ್ಮ ವೀರಯೋಧ ಸೋಮರಾಯ ಬಗಲಿಯವರ ಪುತ್ಥಳಿಯ ಮುಂದೆ ಸನ್ಮಾನಿಸಿ ಗೌರವಿಸಿ ಬಿಳ್ಕೋಡಲಾಯಿತು. ಈ ಸಂದರ್ಭದಲ್ಲಿ ಮಾಜಿ ಸೈನಿಕ ಶಬ್ಬೀರಪಟೇಲ ಬಿರಾದಾರ ಮಾತನಾಡಿ, ಗಡಿಯಲ್ಲಿ ನಮ್ಮ ಯೋಧರು ಹಗಲು ರಾತ್ರಿಯನ್ನದೇ ರಕ್ಷಣೆ ಮಾಡುತ್ತಿರುವುದರಿಂದ ನಾವೆಲ್ಲ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದೇವೆ. ದೇಶ ಸೇವೆ ಮಾಡೋದು ಎಂದರೆ ಅದೊಂದು ಪವಿತ್ರವಾದ ಕಾರ್ಯ ಕಾರಣ ಇಂದಿನ ಯುವಕರು ದುಶ್ಚಟಗಳಿಗೆ ಬಲಿಯಾಗದೇ ಸದೃಡ ಶರೀರದೋಂದಿಗೆ ದೇಶ ಸೇವೆ ಮಾಡಲು ಮುಂದೆ ಬರಬೇಕು ಎಂದು ಕರೆ ನೀಡಿದರು. 

ಮಾಜಿ ಸೈನಿಕ ಮಾಬುಪಟೇಲ ಬಿರಾದಾರ ಮಾತನಾಡಿ, ದೇಶ ಸೇವೆಗೆ ಗಂಡು ಹೆಣ್ಣು ಬೇದವಿಲ್ಲ ವಿದ್ಯಾರ್ಥಿದೆಸೆಯಿಂದಲೇ ದೇಶ ಸೇವೆ ಮಾಡುವ ಗುರಿ ಇಟ್ಟುಕೊಂಡು ಪ್ರಯತ್ನಿಸಿಬೇಕು ಎಂದು ಸಲಹೆ ನೀಡಿದರು. ಶಿಕ್ಷಕ ಸಂತೋಷ ನಂದರಗಿ ಮಾತನಾಡಿ, ಒಬ್ಬ ರೈತ ಹಾಗೂ ಒಬ್ಬ ಸೈನಿಕ ಈ ದೇಶಕ್ಕೆ ದೊಡ್ಡ ಶಕ್ತಿ ಇವರಿಬ್ಬರ ನಿಸ್ವಾರ್ಥ ಸೇವೆಯಿಂದ ನಾವೆಲ್ಲ ಸಮೃದ್ದಿ ಜೀವನ ನಡೆಸಲು ಸಾಧ್ಯವಾಗಿದೆ ಎಂದರು. ಈ ವೇಳೆ ಕನ್ನಡ ಹಾಗೂ ಉರ್ದು ಶಾಲೆಯ ಮುಖ್ಯೋಪಾಧ್ಯಯರು, ಮಾಜಿ ಸೈನಿಕರಾದ ಕಲ್ಲಪ್ಪ ಹೂಗಾರ, ಕಾಶೀನಾಥ ದೇಸಾಯಿ, ಎಸ್‌ಡಿಎಂಸಿ ಅಧ್ಯಕ್ಷ ಸಂಗನಗೌಡ ಪಾಟೀಲ, ಸದಸ್ಯರಾದ ಸಂತೋಷ ಬಗಲಿ, ಸಿದ್ದನಗೌಡ ಅಂಬಳನೂರ, ಮಲ್ಲಿಕಾರ್ಜುನ ಅಲ್ಲಾಪುರ, ಊರಿನ ಪ್ರಮುಖರಾದ ರಾಜೆಸಾಬ ಬಿರಾದಾರ, ದೇವರಡ್ಡಿ ಚಿಂಚೋಳಿ, ಬೀರ​‍್ಪ ಬಗಲಿ, ಭೀಮಾಶಂಕರ ಅಗಸರ, ಸಿದ್ದು ಪೂಜಾರಿ, ಜಟ್ಟೇಪ್ಪ ಹುಂಡೇಕಾರ ಸೇರಿದಂತೆ ಗ್ರಾಮಸ್ಥರು, ಶಾಲಾ ಸಿಬ್ಬಂದಿ ಇದ್ದರು.