ಇಂಡಿ 07: ತಾಲೂಕಿನ ವೀರಶೈವ ಲಿಂಗಾಯತ ಹಂಡೆ ವಜೀರ ಸಮಾಜದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿರುತ್ತಾರೆ. ತಾಲೂಕಿನಲ್ಲಿ ಕೇವಲ 8 ಹಳ್ಳಿಗಳಲ್ಲಿ ಮಾತ್ರ ಸಮಾಜದ ಜನರು ವಾಸ ಮಾಡುತ್ತಿದ್ದು, 10 ಜನ ವಿದ್ಯಾರ್ಥಿಗಳು ಶೇಕಡ 80 ಅ ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದಿರುತ್ತಾರೆ.
ಇವರಲ್ಲಿ ರೋಹಿಣಿ ರಾಮನಗೌಡ ಪಾಟೀಲ 98.24ಅ ರಷ್ಟು ಅಧಿಕ ಅಂಕಗಳನ್ನು ಪಡೆದು, ಸಮಾಜದ ಕೀರ್ತಿಯನ್ನು ಹೆಚ್ಚಿಸಿರುತ್ತಾಳೆ. ಈ ಸಂದರ್ಭದಲ್ಲಿ ಸಮಾಜದ ವತಿಯಿಂದ ವಿದ್ಯಾರ್ಥಿನಿಗೆ ಸನ್ಮಾನಿಸಿ ಗೌರವಿಸಲಾಯಿತು.
ಸಮಾಜದ ಹಿರಿಯರಾದ ಪ್ರೊ ಎಂ ಜೆ ಪಾಟೀಲ, ತಾಲೂಕಾಧ್ಯಕ್ಷ ಆರ್ ವಿ ಪಾಟೀಲ, ಜಿ ಎಸ್ ಪಾಟೀಲ, ವಿಶ್ವನಾಥ ಅವರಾದಿ, ಆರ್ ಬಿ ಪಾಟೀಲ, ಪ್ರಕಾಶ ಪಾಟೀಲ, ಸಂತೋಷ ಪಾಟೀಲ, ಸುರೇಶ ಅವರಾದಿ ರೇಣುಕಾ ಮಿಂಚನಾಳ ಮೇಡಂ ಉಪಸ್ಥಿತರಿದ್ದರು.