ಅಮೀರ್ ಹಮ್ಜಾ ನದಾಫ್ ಗೆ ಡಾಕ್ಟರೇಟ್ ಗೌರವ ಪ್ರಶಸ್ತಿ ಪ್ರಧಾನ : ಹಲವರ, ಅಭಿನಂದನೆ

ಅಮೀರ್ ಹಮ್ಜಾ ನದಾಫ್ ಗೆ ಡಾಕ್ಟರೇಟ್ ಗೌರವ ಪ್ರಶಸ್ತಿ ಪ್ರಧಾನ : ಹಲವರ, ಅಭಿನಂದನೆ Honorary Doctorate Conferred Upon Ameer Hamza Nadaf; Many Extend Congratulations


ಕೊಪ್ಪಳ 06: ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ, ಪ್ರೌಢಶಾಲಾ ವಿಭಾಗ ದಲ್ಲಿ ವೃತ್ತಿ ಶಿಕ್ಷಕರಾಗಿ, ಸುಮಾರು ಮೂರು ದಶಕಗಳ ಕಾಲ ಸೇವೆ ಸಲ್ಲಿಸಿ, ನಿವೃತ್ತಿಗೊಂಡ ಕೊಪ್ಪಳದ ಹಿರಿಯ ನಿವಾಸಿ ನಿವೃತ್ತ ವೃತ್ತಿ ಶಿಕ್ಷಕ, ಅಮೀರ್ ಹಮ್ಜಾ, ಎ, ನದಾಫ್ ರವರಿಗೆ, ಅವರ ಉತ್ತಮ ವೃತ್ತಿ ಶಿಕ್ಷಣ ಕ್ಷೇತ್ರದ ಸೇವೆ, ಜೊತೆಗೆ ನಿವೃತ್ತಿ ನಂತರದ, ಅಪಾರ ಸಮಾಜ ಸೇವಾ ಕಾರ್ಯ ಗಳಿಗೆ, ಗೌರವ  ಡಾಕ್ಟರೇಟ್ ಪದವಿ ಪ್ರಶಸ್ತಿಯನ್ನು, ದಿ, 5 ರ ಶನಿವಾರ ಸಂಜೆ ಮದರ್ ತೆರೇಸಾ ಯುನಿವರ್ಸಿಟಿಯ ವತಿಯಿಂದ, ಬೆಂಗಳೂರಿನ ಕ್ಯಾಪ್ಟಲ್  ಹೋಟೆಲ್ ಸಭಾ ಭವನದಲ್ಲಿ ಏರಿ​‍್ಡಸಿದ ಸಮಾರಂಭದಲ್ಲಿ, ಪ್ರಧಾನ ಮಾಡಿ, ಅವರನ್ನು ಸತ್ಕರಿಸಲಾಯಿತು, ಈ ಸಂದರ್ಭದಲ್ಲಿ ಕಾರ್ಯಕ್ರಮ ಸಂಘಟಕಿ  ಅಕಾಡೆಮಿಯ  ಮುಖ್ಯಸ್ಥರಾದ ಡಾಕ್ಟರ್ ವಿಜಯಾ ಸರಸ್ವತಿ ಯವರು ಉಪಸ್ಥಿತರಿದ್ದು, ಪ್ರಧಾನ ಮಾಡಿ, ಅವರನ್ನು ಅಭಿನಂದಿಸಿ ಶುಭ ಕೋರಿದರು,

ಪ್ರೊಫೆಸರ್ ಜೇಮ್ಸ್‌ ಫ್ರಾನ್ಸಿಸ್ ಕೇರ್, ಯೂನಸ್ ಜೋನ್ಸ ,ಅಲ್ಲದೆ ಚಲನಚಿತ್ರ ನಿರ್ದೇಶಕ ರಮೇಶ್ ಸುರ್ವೆ ಮತ್ತು ಕೊಪ್ಪಳದಿಂದ ಭಾಗವಹಿಸಿದ ನದಾಫ ಪಿಂಜಾರ ಸಂಘದ, ತಾಲೂಕಾಧ್ಯಕ್ಷ ಅಸ್ಮಾನ್ ಸಾಬ್ ಹಾಗೂ ಉಪಪ್ರಾಚಾರ್ಯ ಎಂ ಎ ಖೈಯುಮ, ಸೇರಿದಂತೆ ಅಮೀರ್ ಹಮ್ಜಾ  ನದಾಫ್ ರವರ ಪತ್ನಿ  ಸೇರಿದಂತೆ, ಅನೇಕ ಕಾರ್ಯಕರ್ತರು, ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು.ಕೊಪ್ಪಳದ ನಿವೃತ್ತ ವೃತ್ತಿ ಶಿಕ್ಷಕ ಅಮೀರ್ ಹಮ್ಜಾ ನದಾಫ್ ಅವರ ಉತ್ತಮ ಸಮಾಜ ಸೇವಾ ಕ್ಷೇತ್ರದ ಸಾಧನೆಗಾಗಿ, ಅವರಿಗೆ ಡಾಕ್ಟರೇಟ್ ಲಭಿಸಿರುವುದು ನಮ್ಮೆಲ್ಲರಿಗೆ ಸಂತಸ ಉಂಟು ಮಾಡಿದೆ ಎಂದು, ಅವರ ಸ್ನೇಹಿತರ ಬಳಗ, ವಿದ್ಯಾರ್ಥಿ ಬಳಗ ಹಾಗೂ ಅಭಿಮಾನಿ ಬಳಗ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.