ರಂಗು ರಂಗನ ಹೋಳಿ ಹಬ್ಬದಲ್ಲಿ ಗ್ರಾಮೀಣ ಸೊಗಡು ಅಡಗಿದೆ

ಹಿರಿಯ ಜಾನಪದ ಕಲಾವಿದ ನೇಮನ್ನ ಆರಿ  

ರಾಮದುರ್ಗ 26: ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ಹಬ್ಬಗಳಿಗೆ ಬಹು ವಿಶೇಷ ಸ್ಥಾನಮಾನವಿದೆ. ಅದರಲ್ಲೂ ರಂಗು ರಂಗನ ಹೋಳಿ ಹಬ್ಬದಲ್ಲಿ ಗ್ರಾಮೀಣ ಸೊಗಡು ಅಡಗಿದೆ ಎಂದು ಹಿರಿಯ ಜಾನಪದ ಕಲಾವಿದ ನೇಮನ್ನ ಆರಿ ಹೇಳಿದರು. 

ಅವರು ರಾಧಾಪೂರ ಪೇಟೆಯ ಕಾಮಣ್ಣನ ಕಟ್ಟೆಯ ಮೇಲೆ ಭಾನುವಾರ ರಾತ್ರಿ 11ನೇ ವರ್ಷದ ಹೋಳಿ ಹಬ್ಬದ ಅಂಗವಾಗಿ ಹಮ್ಮಿಕೊಂಡ ಹಲಗೆ ಉತ್ಸವ ಕಾರ್ಯಕ್ರಮವನ್ನು ಹಲಗೆ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಮರೆಯಾಗುತ್ತಿರುವ ಭಾರತೀಯ ಹಬ್ಬಗಳನ್ನು ಇಂದಿನ ಯುವಕರು ಆಚರಿಸಬೇಕಾದ ಅಗತ್ಯತೆ ಇದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಯುವ ಪಡೆಯು ಹಲಗೆ ಸ್ಫರ್ಧೆ ಏರಿ​‍್ಡಸುವ ಮೂಲಕ ಹೋಳಿ ಹಬ್ಬಕ್ಕೆ ಹೆಚ್ಚಿನ ಮಹತ್ವ ನೀಡಿದೆ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಪಾಲ್ಗೊಂಡ ರಾಷ್ಟ್ರ ಮಟ್ಟದ ಡೊಳ್ಳಿನ ಕಲಾವಿದ ಸಿದ್ದು ಮೋಟೆ ಅವರು ಮಾತನಾಡಿ, ನಾಡಿನಲ್ಲಿ ಸಾಕಷ್ಟು ಹಬ್ಬಗಳು ಬರುತ್ತವೆ ಹೋಗುತ್ತವೆ. ಅವುಗಳನ್ನು ಆಚರಿಸಿ, ಇಂದಿನ ಪೀಳಿಗೆಗೆ ಪರಿಚಯಿಸಬೇಕಾಗಿದೆ ಎಂದು ಹೇಳಿದರು. 

ಶಂಕ್ರಯ್ಯಸ್ವಾಮಿ ದೇವಾಂಗಮಠ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ವೇದಿಕೆಯಲ್ಲಿ ರಾಮಚಂದ್ರ​‍್ಪ ಸೂಳಿಭಾವಿ, ಶ್ರೀಕಾಂತ ಹೊಸಮನಿ, ದಶರಥಪ್ಪ ಸೂಳಿಭಾವಿ, ಅಶೋಕ ಸೂಳಿಭಾವಿ, ದಾಮೋಧರ ಗಂಗೂರಿ, ಮಲ್ಲೇಶಿ ಸೊಪ್ಪಡ್ಲ, ಶಂಕರ ಖಾನಾಪೂರ, ಉಮೇಶ ಖಾನಾಪೂರ, ಮಲಕಾಜಪ್ಪ ನರಸಾಪೂರ, ಸಂಗಮೇಶ ಶಿನ್ನೂರ, ಗುರುನಾಥಪ್ಪ ಅಕ್ಷರದ, ಅಶೋಕ ಮೊರಬದ, ನೂರಂದಪ್ಪ ಜವಳಿ ಸೇರಿದಂತೆ ಅನೇಕರು ಇದ್ದರು. 

ತುಕಾರಾಮ ಕರದಿನ ಸ್ವಾಗತಿಸಿದರು. ಅಶೋಕ ಖಾನಾಪೂರ ನಿರೂಪಿಸಿ, ವಂದಿಸಿದರು.