ಇತಿಹಾಸ ತಿಳುವಳಿಕೆ, ಹೊಸದನ್ನು ಕಟ್ಟಲು ಅವಶ್ಯ : ಡಾ. ಎಸ್‌.ಎಂ.ದೇವರಾಜ

ಕಾರವಾರ 13: ಭಾರತೀಯ ಪುರಾತತ್ವ ಸರ್ವೇಕ್ಷಣ ಧಾರವಾಡ ವಲಯವು  ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದಾಂಡೇಲಿಯಲ್ಲಿ  ಶನಿವಾರ  ವಿಶೇಷ ಉಪನ್ಯಾಸ ಹಾಗೂ ಉತ್ತರ ಕರ್ನಾಟಕದ ವಾಸ್ತು ವೈಭವ ಕುರಿತು ಛಾಯಾಚಿತ್ರ ಪ್ರದರ್ಶನವನ್ನು ಹಮ್ಮಿಕೊಂಡಿತ್ತು .ಕಾರ್ಯಕ್ರಮದಲ್ಲಿ  ಧಾರವಾಡ ವಲಯದ ಭಾರತೀಯ ಪುರಾತತ್ವ ಸರ್ವೇಕ್ಷಣ ಸಹಾಯಕ ಅಧಿಕ್ಷಕ ಡಾ.  ಎಸ್‌.ಎಂ.ದೇವರಾಜ  ವಿದ್ಯಾರ್ಥಿಗಳಿಗೆ ಪುರಾತತ್ವ ಆಧಾರಗಳ ಪ್ರಾಮುಖ್ಯತೆ ಕುರಿತು ವಿಶೇಷ ಉಪನ್ಯಾಸ ನೀಡಿದರು ಹಾಗೂ ಇಲಾಖೆಯ ಕಾರ್ಯವೈಖರಿಗಳ ಬಗ್ಗೆ ಮಾತನಾಡಿದರು. ಇತಿಹಾಸ ತಿಳುವಳಿಕೆ, ಹೊಸದನ್ನು ಕಟ್ಟಲು ಹಾಗೂ ಪರಂಪರೆಯನ್ನು ತಿಳಿಯಲು ಬುನಾದಿ ಎಂದರು. ಇತಿಹಾಸದ ಪ್ರಜ್ಞೆ ಯುವಜನರಿಗೆ ಬಹಳ ಮಹತ್ವದ್ದು ಎಂದರು.  ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಬಸವರಾಜ್ ಎನ್ .ಅಕ್ಕಿ ಅಧ್ಯಕ್ಷೆತೆ ವಹಿಸಿದ್ದರು.  ವಿದ್ಯಾರ್ಥಿಗಳಿಗೆ ಛಾಯಾಚಿತ್ರ ಪ್ರದರ್ಶನದ ಕುರಿತು ಡಾ. ದೇವರಾಜ್ ಅವರು ಮಾಹಿತಿ ನೀಡಿದರು. ಕಾಲೇಜಿನ ಎಲ್ಲಾ ವಿಭಾಗದ ಪ್ರಾಧ್ಯಾಪಕರು ಉಪನ್ಯಾಸಕರು ಹಾಗೂ  ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.