ಪಾರಂಪರಿಕ ಕರಕುಶಲ ಶಿಬಿರ

ಲೋಕದರ್ಶನ ವರದಿ

ಬೈಲಹೊಂಗಲ 03: ಇಂದಿನ ಆಧುನಿಕ ಜಗತ್ತಿನಲ್ಲಿ ಕರಕುಶಲ ಕಲೆಗಳು ನಾಶವಾಗುತ್ತಿದ್ದು ಪಾರಂಪರಿಕ ಕಲೆಗಳನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕು ಎಂದು ಕಿತ್ತೂರ ಮತಕ್ಷೇತ್ರದ ಶಾಸಕ ಮಹಾಂತೇಶ ದೊಡಗೌಡರ ಹೇಳಿದರು.

    ಸೋಮವಾರ ಪಟ್ಟಣದ ಅಕ್ಕಮಹಾದೇವಿ ಮಹಿಳಾ ಪದವಿ ಕಾಲೇಜಿನಲ್ಲಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮೈಸೂರ ಇವರ ಆಶ್ರಯದಲ್ಲಿ  ಜರುಗಿದ ಪಾರಂಪರಿಕ ಕರಕುಶಲ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಪೂರ್ವಕಾಲದಿಂದಲೂ ಕರಕುಶಲ ಕಲೆಗಳು ಜನಮನರ ಜೀವನಾಡಿಯಾಗಿದ್ದವು. ವೃತ್ತಿಪರ ಉದ್ಯೋಗವಾಗಿ ಆರ್ಥಿಕ ಪರಿಸ್ಥಿತಿಗೆ ಅನಕೂಲವಾಗಿದ್ದವು. ಇಂದು ಟಿವ್ಹಿ, ಕಂಪ್ಯೂಟರ ಹಾಗೂ ಮೊಬೈಲದಂತಹ ಸಾಧನಗಳಿಂದ ಪಾರಂಪರಿಕ ಕರಕುಶಲ ಕಲೆಗಳ ನಾಶವಾಗುತ್ತಿದ್ದು ಖೇದಕರ ಸಂಗತಿ ಎಂದರು.

ಅಧ್ಯಕ್ಷತೆ ವಹಿಸಿದ ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಪ್ರತಿಕ್ಷೇತ್ರದಲ್ಲಿ ಇತಿಹಾಸ ಇದ್ದು ಪಾರಂಪರಿಕ ಕರಕುಶಲ ಕಲೆಗಳಲ್ಲೂ ಒಂದು ಇತಿಹಾಸ ಇದ್ದು ಪೂರ್ವಜರು ಕರಕುಶಲ ಕಲೆಗಳ ಬಗ್ಗೆ ಹೆಚ್ಚಿ ಆಸಕ್ತಿವಹಿಸಿ ಅವುಗಳಿಂದ ಉಪಜೀವನ ಸಾಗಿಸುತ್ತಿದ್ದರು. ಪಾರಂಪರಿಕ ಕಲೆಗಳತ್ತ ಎಲ್ಲರೂ ಗಮನ ಹರಿಸಿ ಅವುಗಳನ್ನು ಉಳಿಸಿ ಬೆಳೆಸುವಲ್ಲಿ ನಾವೆಲ್ಲರೂ ಶ್ರಮವಹಿಸಬೇಕಾಗಿದೆ ಎಂದರು.

  ಸಾನಿಧ್ಯ ವಹಿಸಿದ ಶಾಖಾ ಮೂರುಸಾವಿಮಠದ ಪ್ರಭುನೀಲಕಂಠ ಸ್ವಾಮೀಜಿ ಮಾತನಾಡಿ, ಹಿಂದಿನ ಕಾಲದ ಸ್ತ್ರೀ ಪುರಷರೆಲ್ಲ  ತಮ್ಮ ದಿನನಿತ್ಯದ ಕಾಯಕದೊಂದಿಗೆ ಪಾರಂಪರಿಕ ಕರಕುಶಲ ಕಲೆಗಳತ್ತ ಹೆಚ್ಚಿನ ಪಾಮುಖ್ಯತೆಯನ್ನು ನೀಡುತ್ತಿದ್ದರು. ಹೀಗಾಗಿ ಅವರೆಲ್ಲರ ಆರೋಗ್ಯ ಉತ್ತಮವಾಗಿದ್ದವು. ತಾವೆಲ್ಲರೂ ಕರಕುಶಲ ಕಲೆಗಳನ್ನು ಬೆಳೆಸುವ ನಿಟ್ಟಿನಲ್ಲಿ ಹೆಚ್ಚಿನ ಆಶಕ್ತಿ ತೋರಿದಾಗ ಮಾತ್ರ ಮುಂದಿನ ಪೀಳಿಗೆಗೆ ಆದರ್ಶವಾಗಬಹುದು ಎಂದರು. ಮೈಸೂರಿನ (ಪರಂಪರೆ) ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಉಪನಿರ್ದೇಶಕಿ ನಿರ್ಮಲ ಮಠಪತಿ ಮಾತನಾಡಿ, ವೃತ್ತಿ ಆಧಾರಿತವಾಗಿರುವ ಕರಕುಶಲ ಕಲೆಗಳ ಉಳಿಸುವ ಬೆಳೆಸುವ ಮಹಾತ್ವಾಂಕಾಕ್ಷೆಯಿಂದ ಇಂಥ ಶಿಬಿರಗಳನ್ನು ನಾಡಿನ ಉದ್ಧಕ್ಕೂ  ಹಮ್ಮಿಕೊಂಡು ಕರಕುಶಲ ಕಲೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸುವಂತಹ ಕಾರ್ಯವನ್ನು ಇಲಾಖೆಗಳ ಮೂಲಕ ಮಾಡಲಾಗುತ್ತಿದೆ ಎಂದರು.

  ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ, ದಾರವಾಡದ ಡಾ. ಕೆ.ಕೆ. ಸಣ್ಣಪಾಪಮ್ಮ, ಪ್ರೋ. ಬಿ.ಕೆ. ಪತ್ತಾರ, ಬಿ.ವೆಂಕಟೇಶ, ಡಾ.ಎಸ್.ಕೆ ವಾಸುದೇವ, ಪ್ರೊ.ಎಸ್.ಸಿ ಪಾಟೀಲ್, ಬಿ.ಬಿ. ಗಣಾಚಾರಿ, ಕಾಶಿನಾಥ ಬಿರಾದಾರ, ಪ್ರಾಚಾರ್ಯ ಡಾ. ಸಿ.ಬಿ.ಗಣಾಚಾರಿ  ಕಲಾವಿದ ಸಿ.ಕೆ. ಮೆಕ್ಕೆದ ಇದ್ದರು. ಪುರಸಭೆ ಆವರಣದಲ್ಲಿ ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ ಅವರು ಪಾರಂಪರಿಕ ಕರಕುಶಲ ಕಲೆಗಳ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು. ಸಾವಿರಾರು ವಿಧ್ಯಾರ್ಥಿಗಳು ಸಾಂಪ್ರದಾಯಕ ಉಡುಗೆಯಲ್ಲಿ ಪಾಲ್ಗೊಂಡಿದ್ದರು.ಉಪನ್ಯಾಸಕ ಎಂ.ಎಚ್. ಪೆಂಟೇದ ಸ್ವಾಗತಿಸಿದರು. ರಾಘವೇಂದ್ರ ವಂದಿಸಿದರು. ವಿದ್ಯಾರ್ಥಿನಿಯರಾದ ರಾಜೇಶ್ವರಿ ಗೌಡರ ಹಾಗೂ ಶ್ರೀದೇವಿ ಪಡೆಣ್ಣನವರ ನಿರೂಪಿಸಿದರು.