ತಾಳಿಕೋಟಿ 10: ಬಸವಾದಿ ಶಿವಶರಣರ ಮಾರ್ಗದಲ್ಲಿ ನಡೆದು ತನ್ನ ಅನನ್ಯವಾದ ಭಕ್ತಿಯಿಂದ ಶ್ರೀಶೈಲ ಮಲ್ಲಿಕಾರ್ಜುನನ ಕೃಪೆಗೆ ಪಾತ್ರಳಾಗಿ, ತಾನು ಸಂಕಷ್ಟಗಳನ್ನು ಸಹಿಸಿ ನೊಂದವರ ಬಾಳಿಗೆ ಬೆಳಕನ್ನು ನೀಡಿದ ರೆಡ್ಡಿ ಕುಲದೇವತೆ ಶ್ರೀ ಹೇಮರೆಡ್ಡಿ ಮಲ್ಲಮ್ಮಳ ಬದುಕಿನ ಆದರ್ಶ ಗಳನ್ನು ನಾವು ಅನುದಿನವೂ ಅನುಸರಿಸುವ ಅಗತ್ಯ ಇದೆ ಎಂದು ಶಿಕ್ಷಕ ಅಪ್ಪಸಾಹೇಬಗೌಡ ಮೂಲಿಮನಿ ಹೇಳಿದರು.
ಪಟ್ಟಣದ ಶ್ರೀ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಶನಿವಾರ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮಳ 603ನೇ ಜಯಂತ್ಯೋತ್ಸವದ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮದ ಸಾನಿಧ್ಯ ವಹಿಸಿದ ಪುರಾಣಿಕ ಬಸಯ್ಯ ಶಾಸ್ತ್ರಿಗಳು ಮಾತನಾಡಿ ಮಹಾನ್ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಅಂಗವಾಗಿ 10 ದಿನಗಳ ಕಾಲ ನೀವು ಅವಳ ಇಡೀ ಬದುಕಿನ ಆದರ್ಶ ವೃತ್ತಾಂತಗಳನ್ನು ಆಲಿಸಿದ್ದೀರಿ ಅವುಗಳನ್ನು ಜೀವನಕ್ಕೆ ಅಳವಡಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಿ ಎಂದು ಸಲಹೆ ನೀಡಿದರು.
ವೇದಿಕೆ ಕಾರ್ಯಕ್ರಮ ಮುನ್ನ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದಿಂದ ಶ್ರೀ ಖಾಸ್ಗತೇಶ್ವರ ಬಡಾವಣೆಯ ಪ್ರಮುಖ ಸ್ಥಳಗಳಲ್ಲಿ ಪಲ್ಲಕ್ಕಿಯ ಅದ್ದೂರಿ ಮೆರವಣಿಗೆ ಸಕಲ ವಾದ್ಯ ಮೇಳ ಹಾಗೂ ಕುಂಭ ದೊಂದಿಗೆ ಜರುಗಿತು. ಇದೇ ಸಂದರ್ಭದಲ್ಲಿ ಸಮಿತಿ ವತಿಯಿಂದ ಶಾಸಕ ಅಪ್ಪಾಜಿ ನಾಡಗೌಡರ ಧರ್ಮಪತ್ನಿ ಸುವರ್ಣ ನಾಡಗೌಡ, ತಹಸಿಲ್ದಾರ್ ಡಾ.ವಿನಯಾ ಹೂಗಾರ ಹಾಗೂ ನೀಲಮ್ಮ ಬಿ.ಪಾಟೀಲ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಶರಣೆ ಶಾಂತಮ್ಮ ಕೋಳೂರ,ಪುರಾಣಿಕ ಸಿಎನ್ ಹಿರೇಮಠ, ಎಚ್.ಎಸ್.ಪಾಟೀಲ, ಪ್ರಭುಗೌಡ ಮದರಕಲ್ಲ,ಆರ್.ಎಸ್. ಪಾಟೀಲ ಕೂಚಬಾಳ,ಬಿ.ಎನ್.ಹಿಪ್ಪರಗಿ, ಸಿದ್ದನಗೌಡ ಪಾಟೀಲ ನಾವದಗಿ, ರವಿ ಪಾಟೀಲ್,ಕಾರ್ಯಕ್ರಮ ಸಂಚಾಲಕಿ ಸುಮಂಗಲಾ ಕೋಳೂರ,ದ್ರಾಕ್ಷಾಯಿಣಿ ಹಿಪ್ಪರಗಿ,ಸುನಂದಾ ಪಾಟೀಲ, ಸವಿತಾ ಅಸ್ಕಿ,ವಿಜಯಲಕ್ಷ್ಮಿ ಕೇಸರಬಾವಿ, ಸಂಗನಗೌಡ ಅಸ್ಕಿ, ಪ್ರವೀಣ್ ರೆಡ್ಡಿ,ಚಿನ್ನಪ್ಪ ಮಾಳಿ,ಬಿ.ಆರ್.ಪೊಲೀಸ್ ಎಸ್.ಎಸ್. ದೇಸಾಯಿ,ಎಂ.ಹೆಚ್. ಹಂದ್ರಾಳ, ಬಿ.ಎಸ್.ಇಸಾಂಪೂರ ಹಾಗೂ ರೆಡ್ಡಿ ಸಮಾಜದ ಬಾಂಧವರು ಉಪಸ್ಥಿತರಿದ್ದರು.