ಆರೋಗ್ಯ ನಿಜವಾದ ಸಂಪತ್ತು: ಡಾ.ಪ್ರಭುಗೌಡ

Health is real wealth: Dr.Prabhu Gowda

ಆರೋಗ್ಯ ನಿಜವಾದ ಸಂಪತ್ತು: ಡಾ.ಪ್ರಭುಗೌಡ

ತಾಳಿಕೋಟಿ 22: ಪ್ರತಿಯೊಬ್ಬರಿಗೂ ಆರೋಗ್ಯವೇ ಭಾಗ್ಯ,ಅದುವೇ ನಿಜವಾದ ಸಂಪತ್ತು ನಮ್ಮ ಬಳಿ ಎಲ್ಲವೂ ಇದ್ದು ಆರೋಗ್ಯ ಇಲ್ಲದೆ ಹೋದಲ್ಲಿ ಏನನ್ನೂ ಮಾಡಲು ಸಾಧ್ಯವಿಲ್ಲ ಅದಕ್ಕಾಗಿ ಆರೋಗ್ಯದ ಬಗ್ಗೆ ಎಲ್ಲರೂ ಕಾಳಜಿ ವಹಿಸಬೇಕು ಎಂದು ಅನುಗ್ರಹ ಕಣ್ಣಿನ ಆಸ್ಪತ್ರೆ ಮುಖ್ಯಸ್ಥ ಡಾ.ಪ್ರಭುಗೌಡ ಲಿಂಗದಳ್ಳಿ ಹೇಳಿದರು. ರವಿವಾರ ತಾಲೂಕಿನ ತುಂಬಗಿ ಗ್ರಾಮದಲ್ಲಿ ಶ್ರೀ ಗ್ರಾಮದೇವತೆ ಜಾತ್ರಾ ಮಹೋತ್ಸವ ಅಂಗವಾಗಿ ಅನುಗ್ರಹ ಕಣ್ಣಿನ ಆಸ್ಪತ್ರೆ, ಅನುಗ್ರಹ ವಿಸನ್ ಫೌಂಡೇಶನ್ ಟ್ರಸ್ಟ್‌ ಮತ್ತು ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ವಿಜಯಪುರ ಹಾಗೂ ಯಶೋಧಾ ಆಸ್ಪತ್ರೆ ವಿಜಯಪುರ ಇವರ ಸಹಯೋಗದಲ್ಲಿ ಏರಿ​‍್ಡಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ಅನುಗ್ರಹ ಆಸ್ಪತ್ರೆ ನೇತೃತ್ವದಲ್ಲಿ ಲಕ್ಷಾಂತರ ಜನರಿಗೆ ಉಚಿತವಾಗಿ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಸೇವೆಯನ್ನು ಮಾಡುತ್ತಾ ಬಂದಿದ್ದೇವೆ ಈ ಶಿಬಿರದಲ್ಲಿಯೂ  ಶಸ್ತ್ರಚಿಕಿತ್ಸೆಗೆ ಆಯ್ಕೆಯಾದವರನ್ನು ನಮ್ಮ ವಿಜಯಪುರದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿಸಿ ಅವರವರ ಗ್ರಾಮಗಳಿಗೆ ತಲುಪಿಸಲಾಗುವುದು. ಇವತ್ತು ನಮ್ಮ ಜೊತೆಗೆ ಈ ಗ್ರಾಮದವರೇ ಆದ ಎಲುಬು ಕೀಲು ತಜ್ಞ ಡಾ.ಅತ್ರೇಶ್ ಬಿರಾದಾರ ಹಾಗೂ ಯಶೋಧಾ ಆಸ್ಪತ್ರೆಯ ತಜ್ಞ ವೈದ್ಯರು ಕೈಜೋಡಿಸಿ ವಿವಿಧ ರೋಗಗಳ ತಪಾಸಣೆ ನಡೆಸಲಿದ್ದಾರೆ ಶಿಬಿರದ ಸದುಪಯೋಗವನ್ನು ತಾವೆಲ್ಲರೂ ಮಾಡಿಕೊಳ್ಳಬೇಕು ಎಂದರು.  

ಅನುಗ್ರಹ ಕಣ್ಣಿನ ಆಸ್ಪತ್ರೆ ಮತ್ತು ಯಶೋಧಾ ಆಸ್ಪತ್ರೆಯ ನೇತೃತ್ವದಲ್ಲಿ ನಡೆದ ಈ ಶಿಬಿರದಲ್ಲಿ 195 ಜನರ ನೇತ್ರ ತಪಾಸಣೆ ಮಾಡಲಾಗಿದ್ದು ಅದರಲ್ಲಿ 46 ಜನರನ್ನು ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಲಾಗಿದೆ. ಇನ್ನುಳಿದ ವಿವಿಧ ರೋಗಗಳಿಗೆ ಸಂಬಂಧಿಸಿದ 215 ಜನ ರೋಗಿಗಳ ತಪಾಸಣೆ ಕೈಗೊಳ್ಳಲಾಯಿತು. ಈ ಉಚಿತ ಆರೋಗ್ಯ ಶಿಬಿರದಲ್ಲಿ ನೇತ್ರ ತಜ್ಞರು, ಎಲುಬು ಮತ್ತು ಕೀಲು ತಜ್ಞ ಹಾಗೂ ಸಕ್ಕರೆ, ಹೃದಯ ರೋಗಕ್ಕೆ ಸಂಬಂಧಿಸಿದ ಇಸಿಜಿ,ಬಿಪಿ, ತಜ್ಞ ವೈದ್ಯರು ಪಾಲ್ಗೊಂಡು ವಿವಿಧ ರೋಗಗಳಿಗೆ ಸಂಬಂಧಿಸಿ ತಪಾಸಣೆ ಕೈಗೊಂಡು ಉಚಿತ ಓಷಧೋಪಚಾರ ನೀಡಿದರು.  

ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಅನುಗ್ರಹ ಆಸ್ಪತ್ರೆಯ ಮುಖ್ಯಸ್ಥ ಡಾ. ಪ್ರಭುಗೌಡ ಲಿಂಗದಳ್ಳಿ,ಎಲುಬು ಕೀಲು ತಜ್ಞ ಡಾ.ಅತ್ರೇಶ ಬಿರಾದಾರ, ಯಶೋಧಾ ಆಸ್ಪತ್ರೆಯ ಡಾ.ಶ್ರೀನಿವಾಸ ಜಿ.ಎಸ್‌.ಡಾ.ಪ್ರಶಾಂತ ಕೆಂಗನಾಳ ಒಳಗೊಂಡು ಅನುಗ್ರಹ ಹಾಗೂ ಯಶೋಧಾ ಆಸ್ಪತ್ರೆಯ ಸಿಬ್ಬಂದಿಗಳು ಕಾರ್ಯನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಗ್ರಾಮದ ಗಣ್ಯರಾದ ಭೀಮನಗೌಡ ಪಾಟೀಲ, ಬಸನಗೌಡ ನಡಗಡ್ಡಿ,ಚಂದ್ರಶೇಖರ ಸಜ್ಜನ,ಹನುಮಂತ್ರಾಯ ಢವಳಗಿ,ಜಾನರಾವ್ ದೇಶಮುಖ, ಶಂಕರಗೌಡ ಬಿರಾದಾರ, ಅವ್ವಪ್ಪಗೌಡ ಹೊಸಮನಿ,ನಿಂಗನಗೌಡ ಚೌದ್ರಿ, ಹನುಮಂತರಾಯಗೌಡ ಅಜರೆಡ್ಡಿ, ಸಂಗಮೇಶ್ ಕೊಳ್ಳಿ, ಬಸನಗೌಡ ಲಕ್ಕುಂಡಿ,ನಿಂಗನಗೌಡ ಹಾರಲಡ್ಡಿ,ಎಂ.ಎಸ್‌. ರಬಬ್ಬಿನಾಳ,ಮಡು ಬಬಲಾದಿ ಇದ್ದರು.