ಮಂಗಳೂರಲ್ಲಿ ಗ್ರಾಮ ಆರೋಗ್ಯದ ಅಡಿ ಆರೋಗ್ಯ ಶಿಬಿರ

ಕುಕನೂರ 31: ತಾಲ್ಲೂಕಿನ, ಮಂಗಳೂರು ಗ್ರಾಮ ಪಂಚಾಯತನ ಹಾಲು ಉತ್ಪಾದಕರ ಸಹಕಾರ ಸಂಘ ಕೇಂದ್ರದಲ್ಲಿ  ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಶೇಖರಗೌಡ್ರ  ಪೊಲೀಸಪಾಟೀಲ ಅಧ್ಯಕ್ಷತೆಯಲ್ಲಿ  ಗ್ರಾಮ ಆರೋಗ್ಯ ಕಾರ್ಯಕ್ರಮದ ಅಡಿ ಆರೋಗ್ಯ ಶಿಬಿರ ಏರಿ​‍್ಡಸಲಾಗಿತ್ತು. 

ಹಾಲು ಉತ್ಪಾದಕರ ಸಂಘದ ಅಧ್ಯಕ್ಷರು ಮಾತನಾಡಿ, ಗ್ರಾಮ ಆರೋಗ್ಯ ಕಾರ್ಯಕ್ರಮದ ಅಡಿ ನಮ್ಮ ಸದಸ್ಯರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕೆಂದು ಕರೆಕೊಟ್ಟರು. ನಂತರ  ಆರೋಗ್ಯ ಇಲಾಖೆಯ ಸಿಹೆಚ್‌ಓ ಸುಮಾ ಬಂಡ್ರಕಲ್  ಅವರು  ಮಾತನಾಡಿ ಎಲ್ಲರೂ ದಿನಪ್ರತಿ ಸೇವಿಸುವ ಆಹಾರದ ಕ್ರಮವನ್ನು ಸರಿಯಾದ ರೀತಿಯಲ್ಲಿ  ಪೌಷ್ಟಿಕ ಆಹಾರವನ್ನು ಸೇವಿಸಿ ಎಂದು ಹೇಳಿದರು.      ಗ್ರಾಮ ಆರೋಗ್ಯ ತಾಲೂಕು ಸಂಯೋಜಕರು ಮಹಮ್ಮದ್ ರಫಿ ಮಾತನಾಡಿ ಗ್ರಾಮ ಆರೋಗ್ಯ ಕಾರ್ಯಕ್ರಮವು  *ಆರೋಗ್ಯ ಇಲಾಖೆ,* ಪಂಚಾಯತಿ ಇಲಾಖೆ* ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ಹಾಗೂ ಸ್ವಯಂ ಸಂಘ ಸಂಸ್ಥೆಗಳ  ಸಹಭಾಗಿತ್ವದಲ್ಲಿ ಜರುಗುತ್ತದೆ. ಮಂಗಳೂರು ಗ್ರಾಮ ಪಂಚಾಯತಿಯವರು, ಆರೋಗ್ಯ ತಪಾಸಣೆಗೆ ಬೇಕಾಗುವ ಪರಿಕರಗಳನ್ನು ತರಿಸಿಕೊಟ್ಟಿರುತ್ತಾರೆ  ಮತ್ತು, ಆರೋಗ್ಯ ಇಲಾಖೆಯವರು ಪರೀಕ್ಷೆ ಮಾಡುತ್ತಾರೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು ಪೌಷ್ಟಿಕಾಂಶದ ಬಗ್ಗೆ ಮಾಹಿತಿ ನೀಡುತ್ತಾರೆ, ಹಾಗೂ ಸಂಘ-ಸಂಸ್ಥೆಗಳು  ಜನರನ್ನು ಸೇರಿಸಿ ಗ್ರಾಮದ ಕಟ್ಟ ಕಡೆಯ ವ್ಯಕ್ತಿಗೂ ಆರೋಗ್ಯ ಸೇವೆ ತಲುಪು ಹಾಗೆ ಮಾಡುತ್ತಾರೆ. ಇದರಿಂದಾಗಿ ಗ್ರಾಮ ಆರೋಗ್ಯ ಕಾರ್ಯಕ್ರಮವನ್ನು ಎಲ್ಲರೂ ಸದುಪಯೋಗಪಡಿಸಿ ಕೊಳ್ಳಬೇಕೆಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಹಾಲು ಉತ್ಪಾದಿಸುವ ಸಹಕಾರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಸರ್ವ ಸದಸ್ಯರು, ಸರ್ವ ರೈತ ಬಾಂಧವರು, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಗ್ರಾಮ ಆರೋಗ್ಯ ತಾಲೂಕ ಸಂಯೋಜಕರು, ಅಂಗನವಾಡಿ ಕಾರ್ಯಕರ್ತರು ಮತ್ತು ಆಶಾ ಕಾರ್ಯಕರ್ತರು, ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.