ಹರಪನಹಳ್ಳಿ: ಶಾಲಾ-ಕಾಲೇಜುಗಳಲ್ಲಿ ರಾಷ್ಟ್ರೀಯ ಭಾವೈಕ್ಯತಾ ದಿನ

ಹರಪನಹಳ್ಳಿ 03: ಜೆಸಿಐ ಹರಪನಹಳ್ಳಿ ಸ್ಪೂರ್ತಿ ಮತ್ತು ಶಿಕ್ಷಣ ಇಲಾಖೆ ಸಹಯೋಗದಲ್ಲಿ ತಾಲ್ಲೂಕಿನ ವಿವಿಧ  ಶಾಲಾ-ಕಾಲೇಜುಗಳಲ್ಲಿ ರಾಷ್ಟ್ರೀಯ ಭಾವೈಕ್ಯತಾ ದಿನವನ್ನು ಸೋಮವಾರ ಆಚರಿಸಲಾಯಿತು. 

ತಾಲ್ಲೂಕಿನ ಸರ್ಕಾರಿ, ಅನುದಾನಿತ, ಅನುದಾನ ರಹಿತ ಸರರ್ಕಾರಿ ಶಾಲೆಗಳಲ್ಲಿ ಪ್ರಮಾಣ ವಚನವನ್ನು ಬೋಧಿಸಿದರು. ರಾಷ್ಟ್ರೀಯ ಭಾವೈಕ್ಯತೆ ದಿನದ ನಿಮಿತ್ತ ಪಟ್ಟಣದ ಬಾಲಕೀಯರ ಸರ್ಕಾರಿ ಪ್ರೌಢಶಾಲೆ ಮತ್ತು ಅನಂತನಹಳ್ಳಿ ಬಳಿ ಇರುವ  ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಒಂದು ದಿನದ ಪ್ರಮಾಣಿಕ ಅಂಗಡಿ (ಹಾನೆಸ್ಟಿ ಶಾಪ್) ಸ್ಥಾಪಿಸಲಾಗಿತ್ತು. 

ಮಾರಾಟ ಮಾಡುವ ಮಾಲೀಕರು ಇಲ್ಲದ ಅಂಗಡಿಯಲ್ಲಿ ಎರಡು ಶಾಲೆಗಳ ಸಾವಿರಕ್ಕೂ ಅಧಿಕ ವಿದ್ಯಾಥರ್ಿಗಳು ಹಣವನ್ನು ಡಬ್ಬದಲ್ಲಿ ಹಾಕಿ, ವಸ್ತುಗಳನ್ನು ಖರೀದಿಸಿದರು. ಇದರ ಮೂಲಕ ಮಕ್ಕಳಿಗೆ ಪ್ರಮಾಣಿಕತೆಯ ಅರಿವು ಮೂಡಿಸಲಾಯಿತು. 

ಚಾಲನೆ ನೀಡಿದ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಲಿಂಗಾನಂದ ಅವರೂ ಮಾತನಾಡಿ, ರಾಷ್ಟ್ರೀಯ ಭಾವೈಕ್ಯತೆ ದಿನದಂದು  ದೇಶದ ಹಿತದೃಷ್ಟಿಯಿಂದ ಪ್ರಮಾಣ ವಚನ ಬೋಧಿಸುವುದು  ಮತ್ತು ಪ್ರಮಾಣಿಕ ಅಂಗಡಿ ಸ್ಥಾಪನೆ ಮಾಡಿ, ವಿದ್ಯಾರ್ಥಿಗಳಲ್ಲಿ ಪ್ರಮಾಣಿಕತೆ, ನಿಷ್ಠೆಯ ಅರಿವು ಮೂಡಿಸಿದ್ದು ಮಾದರಿ ಎಂದರು. 

ಸ್ವತಃ ವಿದ್ಯಾರ್ಥಿಗಳ ಸರದಿಯಲ್ಲಿ ನಿಂತು ಸಾಮಾನು ಖರೀದಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ.ವೀರಭದ್ರಯ್ಯ ಮಾತನಾಡಿ,  ಪ್ರಮಾಣಿಕತೆಯ ಬಿತ್ತುವ ಮೊದಲ ಹೆಜ್ಜೆಯೇ ಪ್ರಮಾಣಿಕ ಅಂಗಡಿ. ಇದರ ಮೂಲಕ ಮಕ್ಕಳು, ಶಿಕ್ಷಕರು ಹಾಗೂ ಪಾಲಕರು ಪ್ರಮಾಣಿಕತೆಯನ್ನು ಬೆಳೆಸಿಕೊಳ್ಳುವ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 

ಮಾಲೀಕರಿಲ್ಲದ ಅಂಗಡಿಯಲ್ಲಿ ಮಕ್ಕಳು ಸಹ ಖರೀದಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಮೆಚ್ಚುಗೆ ವ್ಯಕ್ತಪಡಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. 

ಪುರಸಭೆ ಸದಸ್ಯ ಜಾಕೀರ್ ಹುಸೇನ್, ಜೆಸಿಐ ಪೂರ್ವಾಧ್ಯಕ್ಷರಾದ ರವೀಂದ್ರ ಅಧಿಕಾರ, ಪ್ರಸನ್ನಕುಮಾರ ಜೈನ್, ಪಿ.ಟಿ.ನಾಗರಾಜ್, ಅಧ್ಯಕ್ಷ ಡಿ.ವಿಶ್ವನಾಥ, ಕಾರ್ಯದರ್ಶಿ  ಎಲ್.ಎ.ಮಹೇಶಸೋನು, ಕಾರ್ಯಕ್ರಮ ಅಧಿಕಾರಿಗಳಾದ ಶರತ್ ಬಾಬು, ಸುದೀಕ್ಷಾ, ಪತ್ರಕರ್ತರ ಸಂಘದ ಅಧ್ಯಕ್ಷ ಸುರೇಂದ್ರಬಾಬು, ಮುಖ್ಯಶಿಕ್ಷಕರಾದ ಮುಸ್ತಾಪ್, ಶಿವಾನಂದಪ್ಪ ಕೌಟಿ, ಸಲಾಂಸಾಬ್, ಷಣ್ಮುಖಪ್ಪ, ಚೇತನ್, ಸಲಾಂಸಾಬ್, ಶಿಕ್ಷಕರು, ವಿದ್ಯಾಥರ್ಿಗಳು ಉಪಸ್ಥಿತರಿದ್ದರು.