ಲೋಕದರ್ಶನ ವರದಿ
ಹರಪನಹಳ್ಳಿ 03: ರಾಜ್ಯದಲ್ಲಿಯೇ ಮಾದರಿಯಾಗುವಂತಹ ಕೆಲಸಗಳನ್ನು ಹರಪನಹಳ್ಳಿ ತಾಲ್ಲೂಕಿನ ಅಲ್ಪಸಂಖ್ಯಾತರು ಕಾರ್ಯನಿರ್ವಹಿಸಲಿದ್ದು ಶೈಕ್ಷಣಿಕ, ಸಾಮಾಜಿಕ, ಆಥರ್ಿಕವಾಗಿ ಅಭಿವೃದ್ದಿಗೊಳ್ಳಲು ಸದಾ ಶ್ರಮಿಸುವುದಾಗಿ ತಾಲ್ಲೂಕು ಅಲ್ಪಸಂಖ್ಯಾತರ ಅಧ್ಯಕ್ಷ ಎ.ಮೂಸಾಸಾಬ್ ಹೇಳಿದರು.
ಪಟ್ಟಣದ ಹೊಸಪೇಟೆ ರಸ್ತೆಯಲ್ಲಿರುವ ಅಂಜುಮನ್ ಶಾದಿಮಹಲ್ನಲ್ಲಿ ಶನಿವಾರ ಕರ್ನಾಟಕ ರಾಜ್ಯ ಸಕರ್ಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಸನ್ಮಾನ ಮತ್ತು ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಮುಸ್ಲಿಂ ನೌಕರರ ಸಂಘವು ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸದಾ ಶ್ರಮಿಸುತ್ತಿದ್ದು ಮುಂದಿನ ದಿನಗಳಲ್ಲಿ ಸಾಮಾಜಿಕವಾಗಿ ಉತ್ತಮ ಕೆಲಸಗಳನ್ನು ಆಯೋಜಿಸಿದಲ್ಲಿ ಅಲ್ಪಸಂಖ್ಯಾತರ ಘಟಕವು ಸಹಕಾರ ನೀಡಲಿದೆ ಎಂದು ಹೇಳಿದರು.
ಪುರಸಭೆ ಸದಸ್ಯ ಡೆಪ್ಯೂಟಿ ರೇಹಮಾನ್ ಸಾಬ್ ಸನ್ಮಾನ ಸ್ವೀಕರಿಸಿ ಮಾತನಾಡಿ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ದೇಶಕ್ಕಾಗಿ ತ್ಯಾಗ, ಬಲಿದಾನ ನೀಡಿದವರಲ್ಲಿ ಮುಸ್ಲಿಂರ ಕೊಡುಗೆ ಅಪಾರವಾಗಿದೆ. ನಾವು ಭಾರತ ದೇಶದ ನಿವಾಸಿಗಳಾಗಿದ್ದು ನಮಗೆ ಯಾವುದೇ ಪೌರತ್ವ ಕಾಯ್ದೆಯ ಮೂಲಕ ಈ ದೇಶದವರು ಎಂದು ಗುರುತಿಸಿಕೊಳ್ಳುವ ಅಗತ್ಯವಿಲ್ಲ ಆದ್ದರಿಂದ ಪೌರತ್ವ ಕಾಯ್ದೆಯನ್ನು ವಾಪಾಸ್ಸು ಪಡೆಯಬೇಕು ಎಂದು ಹೇಳಿದರು.
ಕನರ್ಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿದ್ದಲಿಂಗನಗೌಡ ಮಾತನಾಡಿ ಯಾವುದೇ ಒಂದು ಸಮುದಾಯ ಮುಂದೆ ಬರಬೇಕಾದರೆ ಶಿಕ್ಷಣ ಬಹು ಮುಖ್ಯವಾಗಿದ್ದು, ಮುಸ್ಲಿಂ ಸಮುದಾಯವು ಸಹ ತಮ್ಮ ಮಕ್ಕಳಿಗೆ ಶೈಕ್ಷಣಿಕವಾಗಿ ಒತ್ತು ನೀಡಬೇಕು ಎಂದರು.
ಇದೇ ಸಂದರ್ಭದಲ್ಲಿ ನೂತನ ಪುರಸಭೆ ಸದಸ್ಯರು, ಪ್ರಗತಿಪರ ವೇದಿಕೆಯಲ್ಲಿ ವಿಜೇತರಾದ ಶಿಕ್ಷಕರಿಗೆ, ನಿವೃತ್ತಿ ಹೊಂದಿದ ಮುಸ್ಲಿಂ ನೌಕರರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಾಹಿತಿ ಡಿ.ರಾಮನಮಲಿ, ವೈದ್ಯೆ ಎನ್.ಎಂ.ಖಾನ್, ಇಸ್ಮಾಯಿಲ್ ಎಲಿಗಾರ, ಪುರಸಭೆ ಸದಸ್ಯ ಜಾಕೀರ್ ಸಕರ್ಾವಸ್, ಜಾವೀದ್, ಶಿಕ್ಷಕ ಮುಸ್ತಾಪ್, ದಾದ ಖಲಂದರ್, ಲಾಟಿ ದಾದಪೀರ್, ಕೆ.ಉಸ್ಮಾನ್, ಶರಿಫ್, ಎಂ.ಯಾಹ್ಯ, ಅಬ್ದುಲ್ ಸಲಾಂ, ಮನ್ಸೂರ್ ಅಹ್ಮದ್ದ, ಅತಾವುಲ್ಲಾ, ಹೆಚ್.ಸಲೀಂ, ಸೇರಿದಂತೆ ಇತರರು ಇದ್ದರು.