ಹರಪನಹಳ್ಳಿ: ತಿಂಗಳು ಗತಿಸಿದರೂ ದುರಸ್ತಿಯಾಗದ ರಸ್ತೆ
ಲೋಕದರ್ಶನ ವರದಿ
ಹರಪನಹಳ್ಳಿ 22: ತಾಲ್ಲೂಕಿನ ದಡಗಾರನಹಳ್ಳಿ ರಸ್ತೆ ಮಳೆಯಿಂದ ಕೊಚ್ಚಿಕೊಂಡು ಹೋಗಿ ತಿಂಗಳುಗಲೇ ಉರಳಿದ್ದರೂ ದುರಸ್ಥಿತಿ ಕಾಣದೇ ಸಾರ್ವಜನಿಕರ ಸಂಚಾರಕ್ಕೆ ಕುತ್ತು ತಂದಿದೆ. ಪಟ್ಟಣದಿಂದ ಕೂಗಳತೆ ದೂರದಲ್ಲಿರುವ ಈ ಗ್ರಾಮ ಪ್ರತಿ ದಿನ ವಿದ್ಯಾಥರ್ಿಗಳು, ರೈತರು, ಆಸ್ಪತ್ರೆಗೆ ತರಳುವ ರೋಗಿಗಳ ಗೋಳನ್ನು ಕೇಳೋರಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.
ತಿಂಗಳ ಹಿಂದೆ ಸುರಿದ ಮಳೆಗೆ ತಾಲ್ಲೂಕಿನ ದಡಗಾರನಹಳ್ಳಿಗೆ ಸಂಪರ್ಕಸುವ ಗ್ರಾಮೀಣ ಸಡಕ್ ರಸ್ತೆ ಹರಪನಹಳ್ಳಿಯಿಂದ 5ಕಿ.ಮೀ. ದೂರದಲ್ಲಿದೆ. ರಾಜ್ಯ ಹೆದ್ದಾರಿ ಹೊಸಪೇಟೆ ರಸ್ತೆಯಿಂದ ಹಾದು ಹೋಗಿ ಮುಂದೆ ಶೃಂಗಾರತೋಟ, ಕಾಯಕದಹಳ್ಳಿ, ಹೊಂಬಳಗಟ್ಟಿ ವರೆಗೂ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಇದನ್ನು ಗ್ರಾಮೀಣ ಸಡಕ ಯೋಜನೆಯಲ್ಲಿ ರಸ್ತೆ ಡಾಂಬರೀಕರಣ ಮಾಡಲಾಗಿದೆ. ಅಕ್ಟೋಬರ್ ತಿಂಗಳಲ್ಲಿ ಸುರಿದ ಮಳೆಗೆ ಕೊಚ್ಚಿ ಕೊರಕಲಾಗಿ ಹಾನಿಯಾಗಿ ವಾಹನಗಳ ಸಂಚಾರಕ್ಕೆ ದುಸಾಧ್ಯವಾಗಿದೆ. ವಿದ್ಯಾರ್ಥಿಗಳು, ರೈತರು, ಕೂಲಿಕಾರರು, ಗ್ರಾಮಸ್ಥರು ನಿತ್ಯ ತಮ್ಮ ದೈನಂದಿನ ಕೆಲಸಗಳಿಗೆ ಓಡಾಡಲು ಇದೆ ರಸ್ತೆಯನ್ನು ಅವಲಂಭಿಸಿದ್ದಾರೆ, ರಾತ್ರಿವೇಳೆ ಈ ರಸ್ತೆಯಲ್ಲಿ ಸಂಚಾರ ಮಾಡಿದರೆ ಅಪಘಾತ ಕಟ್ಟಿಟ್ಟ ಬುತ್ತಿಯಾಗಿದೆ. ಆಸ್ಪತ್ರೆಗೆ ಅಥವಾ ತುರ್ತು ಪ್ರಯಾಣಕ್ಕೆ ಈ ರಸ್ತೆಯನ್ನು ಅವಲಂಬಿಸದೇ ಬೇರೆ ಸಂಪರ್ಕ ರಸ್ತೆಯ ಮೂಲಕ ಓಡಾಡುವ ಅನಿವಾರ್ಯ ಗ್ರಾಮಸ್ಥರಿಗೆ ಎದುರಾಗಿದೆ. ಕೂಡಲೇ ರಸ್ತೆ ದುರಸ್ಥಿ ಕಾರ್ಯ ಮಾಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಈ ರಸ್ತೆಯು ಹಿಂದೆ ಪಿಎಂಜಿಎಸ್ವೈ ಅಡಿಯಲ್ಲಿ ನಿರ್ಮಾಣಗೊಂಡಿದೆ. ಸುಮಾರು 1.5ಕಿ.ಮೀ. ರಸ್ತೆ ದುರಸ್ಥಿಗೆ ಶಾಸಕರ ಗಮನಕ್ಕೆ ತರಲಾಗಿದೆ. ಕ್ರಿಯಾಯೋಜನೆ ರೂಪಿಸಿ ಅನುಮೋದನೆಗೆ ಸಲ್ಲಿಸಿದ್ದು ಬಂದ ಕೂಡಲೇ ರಸ್ತೆಯನ್ನು ಪುನಃ ಅಭಿವೃದ್ಧಿಗೊಳಿಸಲಾಗುವುದೆಂದು ಸತೀಶಗೌಡ, ಇಂಜಿನಿಯರ್, ಪಿಆರ್ಡಿ ಉಪವಿಭಾಗ, ಹರಪನಹಳ್ಳಿ ತಿಳಿಸುತ್ತಾರೆ.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ 