ಹಾನಗಲ್ ಶ್ರೀ ಕುಮಾರಸ್ವಾಮಿಗಳ 159ನೇ ಜಯಂತ್ಯುತ್ಸವ

ಹಾನಗಲ್ ಶ್ರೀ ಕುಮಾರಸ್ವಾಮಿಗಳ 159ನೇ ಜಯಂತ್ಯುತ್ಸವ  Hangal Sri Kumaraswamiji's 159th Birth Anniversary Celebration

ಲೋಕದರ್ಶನ ವರದಿ 

  ಧಾರವಾಡ  11: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಧಾರವಾಡದ ಲಿಂಗಾಯತ ಭವನದಲ್ಲಿ ಹಾನಗಲ್   ಕುಮಾರಸ್ವಾಮಿಗಳ 159ನೇ ಜಯಂತ್ಯುತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಕೋಶಾಧ್ಯಕ್ಷ ಎಂ.ಎಸ್‌. ಶಿರಿಯಣ್ಣನವರು   ಕುಮಾರಸ್ವಾಮಿಗಳ ಜೀವನ ಚರಿತ್ರೆ ಕುರಿತು ಮಾತನಾಡಿದರು. ನಿರ್ದೇಶಕಿ ವಿಜಯಲಕ್ಷ್ಮೀ ಕಲ್ಯಾಣಶೆಟ್ಟರ್ ಅವರು ವಚನ ಪ್ರಾರ್ಥನೆ ಸಲ್ಲಿಸಿದರು. ನಿರ್ದೇಶಕ ಮಹೇಶ ಬಿಳೇಹಾಳ ಅವರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶಿವಶರಣ ಕೆ. ಕಲಬಶೆಟ್ಟರ್ ಕಾರ್ಯಕ್ರಮ ನಿರೂಪಿಸಿದರು. ನಂತರ ಸುಧಾ ಎಸ್‌. ಕಬ್ಬೂರ ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ಡಾ. ಸುವರ್ಣಾ ಎಲ್‌. ಬಿರಾದಾರ, ನಿರ್ದೇಶಕರಾದ ಬಸವರಾಜ ಗೋಲಪ್ಪನವರ, ಲಕ್ಕನಗೌಡ ಬಿರಾದಾರ, ಶಂಕರ ಕಲಘಟಗಿ, ಮಹಾಂತೇಶ ಬಾನಿ, ಎನ್‌.ಎನ್‌. ಮುಶೆಪ್ಪನವರ, ಶಿವಕುಮಾರ ಎಂ. ಕುಂಬಾರಿ, ಶ್ರೀಶೈಲ ಕೆಂಗಲ್, ತಿಪ್ಪಣ್ಣ ನಾಯ್ಕರ್ ಸೇರಿದಂತೆ ಸಮಾಜದ ಬಂಧುಗಳು ಉಪಸ್ಥಿತರಿದ್ದರು.