ಹೊಳಗುಂದಿ ವೀರಭದ್ರೇಶ್ವರ ಸ್ವಾಮಿ ಅಗ್ನಿ ಮಹೋತ್ಸವ

ಹೂವಿನಹಡಗಲಿ 23: ತಾಲ್ಲೂಕಿನ ಹೊಳಗುಂದಿ ಗ್ರಾಮದ ವೀರಭದ್ರೇಶ್ವರ ಸ್ವಾಮಿಯ ಅಗ್ನಿ‌ ಮಹೋತ್ಸವ‌‌‌  ಮಂಗಳವಾರ ಹಂಪಿ ಹುಣ್ಣುಮೆ ದಿನ ಬೆಳಿಗ್ಗೆ ಸಂಭ್ರಮದಿಂದ ಜರುಗಿತು.   

ಬೆಳಿಗ್ಗೆ 11.30ಕ್ಕೆ ಭಕ್ತರ  ನಡುವೆ ಸಂಭ್ರಮದಿಂದ ಪ್ರಸನ್ನಗೊಂಡಿತು. ಅಗ್ನಿ ಮಹೋತ್ಸವ  ಅಂಗವಾಗಿ ದೇವಸ್ಥಾನ ದಲ್ಲಿ ಬೆಳಿಗ್ಗೆ ಯಿಂದಲೇ ವಿಶೇಷ ಪೂಜೆಯನ್ನು ನೆರವೇರಿತು.ದೇವಸ್ಥಾನ ಮುಂಬಾಗದಲ್ಲಿ ಅಗ್ನಿ ಪ್ರಜ್ವಲನ ಮಾಡಲಾಯಿತು. ಮಂಗಳವಾರ‌ ಅಗ್ನಿ ಮಹೋತ್ಸವ ವಿಜ್ರಂಭಣೆಯಿಂದ ನೆರವೇರಿತು. ಇದಕ್ಕೂ ಮೊದಲು ಗ್ರಾಮದ ಪ್ರಮುಖ ಬೀದಿಗಳಲ್ಲಿ ವೀರಭದ್ರೇಶ್ವರ ಸ್ವಾಮಿ ಯ ಉತ್ಸವ ಮೂರ್ತಿಯನ್ನು ಹೂವಿನಿಂದ ಸಿಂಗರಗೊಂಡಿದ್ದ ಪಲ್ಲಕ್ಕಿ ಯಲ್ಲಿ ಸಂಚರಿಸಿ ಅಗ್ನಿ ಹಾಯುವ ಮೂಲಕ ದೇವಸ್ಥಾನ ತಲುಪಿತು. ಉತ್ಸವ ಮೆರವಣಿಗೆ ಯಲ್ಲಿ  ವೇಷ ಭೂಷಣದೊಂದಿಗೆ ಪುರವಂತರು  ಕಲಾವಿದರು ತಮ್ಮ ಪ್ರದರ್ಶಿ ತಮ್ಮ‌ಭಕ್ತಿಯನ್ನು ಮೆರೆದರು. ಇನ್ನು ಕೆಲವರು 200ಅಡಿ ಉದ್ದದ ಹಗ್ಗವನ್ನು ಕೆನ್ನೆಯ ಮೂಲಕ ಹೊರ ತೆಗೆದು ಭಕ್ತಿ ಯನ್ನು‌ ಸಮರ್ಪಿಸಿದರು.  ಭಕ್ತರ ಸಮ್ಮುಖದಲ್ಲಿ ಅಗ್ನಿ ಪ್ರವೇಶ ಕಾರ್ಯ ಕ್ರಮ ಸಂಭ್ರಮದಿಂದ ನಡೆದು ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಯೊಂದಿಗೆ ಜಾತ್ರೆ ಸಂಪನ್ನಗೊಂಡಿತು. ದೇವಸ್ಥಾನ ಪದಾಧಿಕಾರಿಗಳು. ಗ್ರಾಮಸ್ಥರು ಭಾಗವಹಿಸಿದ್ದರು.