ಪುರಾಣ ಪ್ರವಚನಗಳಿಂದ ಮನಸ್ಸಿಗೆ ನೆಮ್ಮದಿ: ಗುರುಶಾಂತೇಶ್ವರಶ್ರೀ

ಸವಣೂರ 16: ಪುರಾಣ ಪ್ರವಚನ ಆಲಿಸುವುದರಿಂದ ಮನಸ್ಸಿಗೆ ನೆಮ್ಮದಿ ಹಾಗೂ ಶಾಂತಿ ಲಭಿಸುವುದು ಎಂದು ನೆಗಳೂರಿನ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. 

ತಾಲೂಕಿನ ಹಿರೇಮುಗದೂರ ಗ್ರಾಮದ ಗುರುಶಾಂತೇಶ್ವರ ಹಿರೇಮಠದಲ್ಲಿ ಸೋಮವಾರ ಗುಡ್ಡಾಪುರದಾನಮ್ಮದೇವಿ ಪುರಾಣ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಆಶೀವರ್ಚನ ನೀಡಿದರು.  

ಮನುಷ್ಯ ತನ್ನ ಜೀವಾತವಧಿಯಲ್ಲಿ ಒಮ್ಮೆಯಾದರೂ ಪುರಾಣ ಪ್ರವಚನಗಳನ್ನು ಕೇಳುವುದರ ಮೂಲಕ ಆತನಲ್ಲಿಯ ತಾಮಸ ಗುಣಗಳು ಮಾಯವಾಗಿ ಸದ್ವಿಚಾರದಗುಣಗಳನ್ನು ಮೂಡಿಸುವ ಉದ್ದೇಶದಿಂದ ಮಠದಲ್ಲಿ ಪ್ರವಚನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಭಕ್ತರ ಸದುಪಯೋಗ ಪಡಿಸಿಕೊಳ್ಳಬೇಕೆಂದರು. ಮಹಾಸಾದ್ವಿ ಶಿವ ಶರಣೆ ಗುಡ್ಡಾಪುರ ದಾನಮ್ಮದೇವಿ ಜೀವನ ಚರಿತ್ರೆ ಬಹಳ ವೈಶಿಷ್ಟ್ಯ ತೆಯಿಂದ ಕೂಡಿದ್ದಾಗಿದೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ದಾನಮ್ಮ ದೇವಿ ಜೀವನ ಚರಿತ್ರೆ ಯನ್ನು ಕೇಳಿ 

ತಾಯಿಯ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು. 

ಪ್ರವಚನ ಕಾರ ಡಾ.ಗುರುಮಹಾಂತಯ್ಯ ಶಾಸ್ತ್ರೀ ದಾನಮ್ಮ ದೇವಿ ಪುರಾಣ ಪ್ರವಚನ ಪ್ರಾರಂಭಿಸಿ ಭಾರತ ದೇಶದಲ್ಲಿ ಮಹಿಳೆಯರಿಗೆ ಅತ್ಯುನ್ನತವಾದ ಸ್ಥಾನವನ್ನು ನೀಡಲಾಗಿದೆ. ದಾನಮ್ಮ ದೇವಿಯು ಸಹ ಒಬ್ಬ ಸಾಮಾನ್ಯ ಮಹಿಳೆಯಂತೆ ಜೀವನ ಸಾಗಿಸಿ ದೈವತ್ವದ ಕಡೆಗೆ ಸಾಗಿದಳು ಅಂತಹ ಮಾತೆಯ ಜೀವನ ಚರಿತ್ರೆಯನ್ನು ಕೇಳಿದವರ ಬದುಕು ಹಸನಾಗುವುದು ಎಂದರು. 

ನೂತನವಾಗಿ ಗ್ರಾಮ ಪಂಚಾಯತಿಗೆ ಆಯ್ಕೆಯಾದ ಸರ್ವಸದಸ್ಯರನ್ನು ಶ್ರೀ ಗಳು ಗೌರವಿಸಿದರು. ಮಂಜನಗೌಡ ಕಲ್ಲನಗೌಡ್ರ ಮರಿಯಪ್ಪ ಹಾದಿಮನಿ  ಪ್ರಗತಿಪರ ರೈತ ಚಂದ್ರಶೇಖರ ಕನವಳ್ಳಿ ಬಸಪ್ಪ ಕಡ್ಲೆಪ್ಪನವರ ಬಿ.ಡಿ ಕೊಳೂರ  ಮಲ್ಲಪ್ಪ ಸೋಮಸಾಗರ ಫಕ್ಕೀರಯ್ಯ ಕೆಂಬಾವಿಮಠ ಗುರುಬಸಯ್ಯ ಚಪ್ಪರದಳ್ಳಿಮಠ ರೇಣುಕಸ್ವಾಮಿ ಹಿರೇಮಠ,  ಶಿವಲಿಂಗಪ್ಪ ಕನವಳ್ಳಿ ನಿಂಗಪ್ಪ ಆರೇರ ನೇತ್ರಾವತಿ ಸೋಮಸಾಗರ  ರವಿಚಂದ್ರಮಣೂ್ಣೂರ  ವಿಜಯಲಕ್ಷ್ಮಿ ತಳವಾರ ಲಕ್ಷ್ಮಿ ತಳವಾರ ಇತರರಿದ್ದರು.  

ಗಂಗಾಧರ ಕನವಳ್ಳಿ ಸ್ವಾಗತಿಸಿದರು. ಶಿಕ್ಷಕ ಎಸ್.ವಿ.ಹಿರೇಮಠ ನಿರೂಪಿಸಿದರು. ಬಿ.ಡಿ ಕೊಳೂರ ವಂದಿಸಿದರು.