ಗುರುದತ್ತ ಬಂಟ್ ಕಾರವಾರ ರೋಟರಿಗೆ ಅಧ್ಯಕ್ಷರಾಗಿ ಪದಗ್ರಹಣ
Gurudatta Bunt assumes office as President of Karwar Rotary
ಕಾರವಾರ 07 : ರೋಟರಿ ಕ್ಲಬ್ ಆಫ್ ಕಾರವಾರ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ರೋಟರಿ ಶತಾಬ್ಧಿ ಭವನದಲ್ಲಿ ಈಚೆಗೆ ಸಂಭ್ರಮದಿಂದ ಆಚರಿಸಲಾಯಿತು. ಪದಗ್ರಹಣಾಧಿಕಾರಿಯಾಗಿ ಆಗಮಿಸಿದ್ದ ರೋ. ಅಭಿನಂದನ ಶೆಟ್ಟಿ ನೂತನ ಅಧ್ಯಕ್ಷರಾದ ರೋ. ಗುರುದತ್ತ ಈಶ್ವರ ಬಂಟ್ ಗೆ ಅಧಿಕಾರವನ್ನು ಹಸ್ತಾಂತರಿಸಿದರು. ನಂತರ ಮಾತನಾಡಿದ ಅವರು ರೋಟರಿ ಶಾಂತಿ ಮತ್ತು ಸಹಬಾಳ್ವೆಯನ್ನು ಸಾರುತ್ತದೆ.
ಅಸಾಹಯಕರ ಕಣ್ಣಲ್ಲಿ ನಗು ನೋಡುವುದೇ ರೋಟರಿಯನ್ನಗಳ ಉದ್ದೇಶ. ಜಗತ್ತೇ ಒಂದು, ಮನುಷ್ಯತ್ವವೇ ಬದುಕು ಎಂಬುದನ್ನು ರೋಟರಿ ತನ್ನ ಇತಿಹಾಸದಲ್ಲಿ ನಡೆದು ಕೊಂಡು ಬಂದಿದೆ ಎಂದರು. ಕಾರವಾರ ರೋಟರಿ ಕ್ಲಬ್ಬಿನ ಕಾರ್ಯವೈಖರಿಯನ್ನು ಶ್ಲಾಘಿಸಿದ ಅವರು ಕಾರವಾರ ರೋಟರಿ ಕ್ಲಬ್ ರೋಟರಿ ಜಿಲ್ಲೆಯಲ್ಲಿ ಮಾದರಿ ಸ್ಥಾನದಲ್ಲಿದೆ. ಸಮಾಜಕ್ಕೆ ಇನ್ನೂ ಒಳ್ಳೆಯ ಸೇವೆ ಲಭಿಸುವಂತಾಗಲಿ ಎಂದು ಹಾರೈಸಿದರು. ನಿಕಟ ಪೂರ್ವ ಕಾರ್ಯದರ್ಶಿ ರೋ. ವಿನೋದ ಕೊಠಾರಕರ 2025-26ರ ಕಾರ್ಯದ ವರದಿ ವಾಚಿಸಿದರು. ಅತಿಥಿಗಳಾಗಿ ಅಸಿಸ್ಟಂಟ್ ಗವರ್ನರ್ ರೋ. ಡಾ. ಅನು ಜೈಪ್ರಕಾಶ ಪಿಳೈ ಮಾತನಾಡಿ ಪ್ರಸ್ತುತ ವರ್ಷದ ಥೀಮ್ ಅಖಇಂಖಿಇ ಐಂಖಖಿಋಉ ಋಕಂಅಖಿ ಬಿಡುಗಡೆ ಗೊಳಿಸಿದರು.
ಕ್ಲಬ್ಬಿನ ಖಿಜ ಖಠಿಚಿಡಿಞ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಪ್ರಸ್ತುತ ವರ್ಷದ ಅಧ್ಯಕ್ಷ ರೋ. ಗುರುದತ್ತ ಈಶ್ವರ ಬಂಟ ಮಾತನಾಡಿ ತಮ್ಮ ಅಧ್ಯಕ್ಷ ಅವಧಿಯಲ್ಲಿ ಕೈಗೊಳ್ಳಲಿರುವ ಕಾರ್ಯದ ವಿವರಣೆ ನೀಡಿದರು. ಈ ಸಂದರ್ಭದಲ್ಲಿ 5 ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗಗಳನ್ನು ವಿತರಿಸಲಾಯಿತು. ಅಂದು ಚಾರ್ಟರ್ಡ ಅಕೌಂಟೆಂಟ್ ಡೇ ಇದ್ದರಿಂದ ನಗರದ ಚಾರ್ಟರ್ಡ ಅಕೌಂಟೆಂಟ್ ಸುಬ್ರಮಣ್ಯ ಗಾಂವಕರ ರವರನ್ನು ಸನ್ಮಾನಿಸಲಾಯಿತು. ಮತ್ತು ಪತ್ರಕರ್ತರಾದ ನಾಗರಾಜ ಹಪನಹಳ್ಳಿ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ರೊಟರಿಯ ಎಲ್ಲಾ ಸದಸ್ಯರು, ಎನ್ನರ್ವ್ಹೀಲ್ ಸದಸ್ಯರು ಹಾಗೂ ಸಮಾಜದ ಗಣ್ಯ ವ್ಯಕ್ತಿಗಳು ಉಪಸ್ತಿತರಿದ್ದರು. ಕಾರ್ಯಕ್ರಮವನ್ನು ರೋ. ಶೈಲೇಶ ಹಳದಿಪೂರ ಮತ್ತು ರೋ. ಫ್ರಾನ್ಸಿಸ್ ಫರ್ನಾಂಡಿಸ್ರವರು ನೆರವೇರಿಸಿಕೊಟ್ಟರು. ವಿವರಣೆಯನ್ನು ನೀಡಿ ನೂತನ ಪದಾಧಿಕಾರಿಗಳನ್ನು ಅಭಿನಂದಿಸಿದರು. ನಿಕಟ ಪೂರ್ವ ಅಧ್ಯಕ್ಷ ಅರ್ಜುನ್ ಉಪಾಧ್ಯಾಯ ಸ್ವಾಗತಿಸಿದರು. ಕಾರ್ಯದರ್ಶಿಗಳಾದ ರೋ. ಪ್ರಶಾಂತ ಕೊಡಾರಕರ ಸರ್ವರನ್ನು ವಂದಿಸಿದರು.
ಕ್ರಿಕೇಟಿಗ್ ಧೋನಿ ಬೆಳಗಾವಿಗೆ ಕರೆಸಿ : ವಿದ್ಯಾರ್ಥಿಗಳಿಂದ ಡಿಸಿಗೆ ವಿಭಿನ್ನ ಮನವಿ
ಮಳೆಯಿಂದ ಕಾರಲಗಾ ಗ್ರಾಮ ಜಲಾವೃತ; ವಿದ್ಯಾರ್ಥಿಗಳ ಪರದಾಟ : ಶಾಲಾ ಕಾಲೇಜುಗಳಿಗೆ ರಜೆ
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ
ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ, ಜೀವ ಬೆದರಿಕೆ, ನ್ಯಾಯಕ್ಕಾಗಿ ಡಿಸಿ, ಎಸ್ಪಿಗೆ ಉಪನ್ಯಾಸಕನ ಮೊರೆ
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ 