ಹಳೆಯ ವಿದ್ಯಾರ್ಥಿಗಳಿಂದ ಗುರುವಂದನೆ ಕಾರ್ಯಕ್ರಮ
Guru Vandana program by alumni
ಯರಗಟ್ಟಿ, 02 : ವಿದ್ಯೆ ನೀಡಿದ ಗುರುಗಳನ್ನು ನೆನೆದರೆ ಅವರು ನೀಡಿದ ವಿದ್ಯೆಯನ್ನು ಸ್ಮರಣೆಗೆ, ಸ್ಮೃತಿಗೆ ತಂದುಕೊಂಡಂತೆ, ಇದು ಬಾಳಿಗೆ ಬುತ್ತಿಯಿದ್ದಂತೆ. ಕಲಿಸಿದ ಗುರುಗಳ ಆದರ್ಶವನ್ನು ನೆನೆದು ಅವರನ್ನು ಗೌರವಿಸಿದರೆ ವಿದ್ಯಾರ್ಥಿಗಳು ತಮ್ಮನ್ನು ತಾವೇ ಗೌರವಿಸಿದಂತೆ ಎಂದು ಬೈಲಹೊಂಗಲದ ಶ್ರೀ ಪ್ರಭುನೀಲಕಂಠ ಸ್ವಾಮೀಜಿ ಹೇಳಿದರು.
ಸಮೀಪದ ಮುನವಳ್ಳಿ ಪಟ್ಟಣದ ಶ್ರೀ ಮುರುಘರಾಜೇಂದ್ರ ಯೋಗ ವಿದ್ಯಾ ಕೇಂದ್ರ ಸಂಚಾಲಿತ ಶ್ರೀ ಅನ್ನದಾನೇಶ್ವರ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳಿಂದ ಗೌರವ ಗುರುವಂದನೆ ಹಾಗೂ ಸ್ನೇಹ ಸಂಭ್ರಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಸಂಸ್ಥೆಯ ಗೌರವಾಧ್ಯಕ್ಷರು, ಶ್ರೀ ಸೋಮಶೇಖರ ಮಠದ ಪೂಜ್ಯರಾದ ಶ್ರೀ ಮುರುಘೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಯಕ್ಕುಂಡಿ ಸರಕಾರಿ ಪಿ.ಯು.ಕಾಲೇಜಿನ ರಮೇಶ ಮುರಂಕರ, ಗಂಗಾಧರ ಗೊರಾಬಾಳ ಹಾಗೂ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರು ಇದ್ದರು.
ಡಾ. ಅಜೇಯ ಅಬ್ಬಾರ, ಪ್ರಾ. ಎಂ.ಎಚ್.ಪಾಟೀಲ, ಪ್ರಾ. ಕೆ.ಬಿ.ನಲವಡೆ, ಎಂ. ಗೀರೀಶ, ಮಂಜುಳಾ ಭಾಂಡೇಕರ, ಜಿ.ಜಿ.ಲಮಾಣಿ, ಡಾ.ಸಿ.ಬಿ.ಕಾರಬಾರಿ, ಎಸ್.ಪಿ.ಗೋಪಶೆಟ್ಟಿ, ದಾನು ಗದಗಿನ, ಆಯ್.ಕೆ.ಮಠಪತಿ, ಶೇಖರ ಮುಪ್ಪಿನವರಮಠ, ಉಮೇಶ ಗುದಗಾಪೂರ ಸೇರಿದಂತೆ ಶಿಕ್ಷಕ ಬಳಗವನ್ನು ಗೌರವಿಸಿ ಸನ್ಮಾನಿಸಲಾಯಿತು.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ 