ಗೃಹಲಕ್ಷ್ಮೀಗೆ ಮಹಿಳೆಯರ ನೂಕುನೂಗ್ಗಲು

ರಬಕವಿ-ಬನಹಟ್ಟಿ : ಕರ್ನಾಟಕ ಸರಕಾರ ಮನೆಯೊಡತಿಗೆ ನೀಡುವ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ  ಸಲ್ಲಿಸಲು ಮಹಿಳೆಯರ ನೂಕುನೂಗ್ಗಲು ಉಂಟಾದ ಘಟನೆ ರಬಕವಿ-ಬನಹಟ್ಟಿ ನಗರಸಭೆ ವ್ಯಾಪ್ತಿಯ ಗಾಂಧಿ ಸರ್ಕಲ್ ಬಳಿ ತೆರೆದಿರುವ ಕೇಂದ್ರದಲ್ಲಿ ನಡೆದಿದೆ.

ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮೀ ಯೋಜನೆಡೆಯಲ್ಲಿ ಮನೆಯೊಡತಿಗೆ ಪ್ರತಿ ತಿಂಗಳು ರೂ. 2000 ನೀಡುವ ಯೋಜನೆ ಇದಾಗಿದ್ದು, ಯೋಜನೆಯ ಲಾಭ ಪಡೆಯಲು ಸೂಕ್ತ ದಾಖಲಾತಿ ನೀಡಿ,ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿಸಲ್ಲಿಸಲು ನಗರಸಭೆಯ ವ್ಯಾಪ್ತಿಯ ಬನಹಟ್ಟಿಯಲ್ಲಿ ಎರಡು, ರಾಮಪುರ, ಹೊಸೂರ ಹಾಗೂ ರಬಕವಿಯಲ್ಲಿ ತಲಾ ಒಂದು ಕೇಂದ್ರವನ್ನು ತೆರಯಲಾಗಿದೆ. ಮಹಿಳೆಯರು ಸರದಿ ಸಾಲಿನಲ್ಲಿ ನಿಂತು ಅರ್ಜಿ ಸಲ್ಲಿಸಬಹುದಾಗಿದ್ದರೂ ಸಾಕಷ್ಟು ಮಹಿಳೆಯರು ಜಮಾವಣೆಯಾಗಿದ್ದು ನೂಕು ನೂಗ್ಗಲು ಉಂಟಾಗಿದೆ.

ರಬಕವಿ-ಬನಹಟ್ಟಿ ನಗರಸಭೆಯ ವ್ಯಾಪ್ತಿಯಲ್ಲಿ ಇಲ್ಲಿಯವರೆಗೆ 932 ಆನ್ಲೈನ್ ಅರ್ಜಿ  ಸಲ್ಲಿಕೆಯಾಗಿದ್ದು, ಫಲಾನುಭವಿಗಳು ಸರದಿ ಸಾಲಿನಲ್ಲಿ ನಿಂತು ಅರ್ಜಿ ಸಲ್ಲಿಸಬೇಕೆಂದು ನಗರಸಭೆಯ ಪೌರಾಯುಕ್ತ ಜಗದೀಶ ಈಟಿ ಹೇಳಿದ್ದಾರೆ.