ಕಡಲೆಕಾಳು ಖರೀದಿ ಕೇಂದ್ರ ಯಾದವಾಡ ಉದ್ಘಾಟನೆ

11ಆರ್‌ಎಂಡಿ1 

ರಾಮದುರ್ಗ 11: 2023-24ನೇ ಸಾಲಿನ ಸರಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಕಡಲೆಕಾಳು ಖರೀದಿ ಕೇಂದ್ರಗಳನ್ನು ರಾಮದುರ್ಗ ಮತ್ತು ತಾಲೂಕಿನ ಹುಲಕುಂದ ಗ್ರಾಮದಲ್ಲಿ ತೆರೆಯಲಾಗಿದೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು. 

ಪಟ್ಟಣದ ಎಪಿಎಂಸಿ ಕಾರ್ಯಾಲಯದಲ್ಲಿ ಗೋಕಾಕನ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹಾಗೂ ಸ್ಥಳೀಯ ಟಿಎಪಿಸಿಎಂಎಸ್ ಸಹಯೋಗದಲ್ಲಿ ಹಮ್ಮಿಕೊಂಡ ಬೆಂಬಲ ಬೆಲೆಗೆ ಕಡಲೆಕಾಳು ಖರೀದಿ ಕೇಂದ್ರವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. 

ಕಳೆದ ವರ್ಷ ಪ್ರತಿ ರೈತರಿಂದ ಗರಿಷ್ಟ 6 ಕ್ವಿಂಟಾಲ್ ಕಡಲೆ ಖರೀದಿಸಲು ನಿಗದಿ ಪಡಿಸಿತ್ತು. ಪ್ರಸಕ್ತ ವರ್ಷದಿಂದ ಪ್ರತಿ ಎಕರೆಗೆ 4 ಕ್ವಿಂಟಾಲ್‌ದಂತೆ ಗರಿಷ್ಟ 15 ಕ್ವಿಂಟಾಲ್ ಕಡಲೆ ಖರೀದಿಸಲು ಸರಕಾರ ನಿಗದಿ ಪಡಿಸಿದೆ. ಎಲ್ಲ ರೈತರು ಇದರ ಸದುಪಯೋಗ ಪಡೆಯುವಂತೆ ಅವರು ವಿನಂತಿಸಿದರು. 

ಟಿಎಪಿಸಿಎಂಎಸ್ ಕಾರ್ಯದರ್ಶಿ ತುಳಜಪ್ಪ ನಡಗಡ್ಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಡಲೆ ಖರೀದಿಗೆ ಮಾ. 31 ಕೊನೆಯ ದಿನವಾಗಿದೆ. ಖರೀದಿ ಕಾಲಾವಧಿ ಮೇ. 15ರ ವರೆಗೆ ಇದ್ದು, ಪ್ರತಿ ಕ್ವಿಂಟಾಲ್ ಕಡಲೆಗೆ ರೂ.5335 ನಿಗದಿಪಡಿಸಲಾಗಿದೆ. ಈಗಾಗಲೆ 218 ರೈತರು ನೋಂದಣಿ ಮಾಡಿಸಿದ್ದಾರೆ ಎಂದು ಹೇಳಿದರು. 

ಅಧ್ಯಕ್ಷತೆ ವಹಿಸಿದ್ದ ಟಿಎಪಿಸಿಎಂಎಸ್ ಉಪಾಧ್ಯಕ್ಷ ಪಿ.ಎಂ. ಜಗತಾಪ ಮಾತನಾಡಿದರು. ಸಭೆಯಲ್ಲಿ ಎಪಿಎಂಸಿ ಕಾರ್ಯದರ್ಶಿ ರುದ್ರಗೌಡ ಪಾಟೀಲ, ಟಿಎಪಿಸಿಎಂಎಸ್ ಸದಸ್ಯರು ಹಾಗೂ ರೈತರು ಉಪಸ್ಥಿತರಿದ್ದರು.