ಹಸಿರು ಸೇನೆ ತಾಲೂಕಾ ಘಟಕದ ಕಚೇರಿ ಉದ್ಘಾಟನೆ

ಬ್ಯಾಡಗಿ 07:  ರೈತರು ಸರಳ ಬದುಕನ್ನು ಮೈ ಗೂಡಿಸಿಕೊಂಡು, ಅಜ್ಞಾನ ಮತ್ತು ಮೌಢ್ಯದಿಂದ ಹೊರಬಂದು ರೈತ ಹೋರಾಟದಲ್ಲಿ ಭಾಗವಹಿಸಿದಾಗ ಮಾತ್ರ ಸಂಘಟನೆಯಿಂದ ಫಲ ಪಡೆಯಲು ಸಾಧ್ಯವೆಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ರಾಮಣ್ಣ ಕೆಂಚಳ್ಳೆರ ಹೇಳಿದರು. ಶನಿವಾರ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಘಟಕದ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು. ತಾಲೂಕಿನ ರೈತರು ಸಭೆ ಸೇರಿ ಅವರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಸೂಕ್ತ ಸ್ಥಳವಿರಲಿಲ್ಲ. ಈಗ ತಾಲೂಕಾ ಕಚೇರಿ ಆರಂಭಿಸಿರುವುದರಿಂದ ರೈತರು ಸಂಪರ್ಕಿಸಲು ಅನುಕೂಲವಾಗುತ್ತದೆ. ಯಾವುದೇ ಸಂದರ್ಭದಲ್ಲಿ ರೈತರು ಕಚೇರಿಗೆ ಬಂದು ಅವರ ಸಮಸ್ಯೆ ಹೇಳಿಕೊಳ್ಳಬಹುದೆಂದರುರೈತ ಸಂಘದ  ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ  ರೈತರ ಬೆಳೆಗೆ ಬೆಂಬಲ ಬೆಲೆಯನ್ನು ಎರಡೂ ಸರ್ಕಾರಗಳು ನೀಡಬೇಕು.  

ಪ್ರಸ್ತುತ ದಿನಗಳಲ್ಲಿ ಜಿಲ್ಲೆಯಲ್ಲೆಡೆ ವಿವಿಧ ಕಾರಣಗಳಿಂದಾಗಿ ರೈತರು ಆತ್ಯಹತ್ಯೆಗೆ ಶರಣಾಗುತ್ತಿದ್ದಾರೆ. ಅದಕ್ಕೆ ಆಡಳಿತ ನಡೆಸುವ ಸರ್ಕಾರಗಳೇ ನೇರ ಹೊಣೆ. ರೆ?ತರ ನೋವು ಯಾರಿಗೂ ಅರ್ಥವಾಗುತ್ತಿಲ್ಲಾ, ಈ ದೇಶವನ್ನಾಳಿದ ಯಾವುದೇ ರಾಜಕೀಯ ಪಕ್ಷಗಳು ರೈತರ ಹಿತಕಾಯುವಲ್ಲಿವಿಫಲವಾಗಿವೆ. ಹಾಗಾಗಿ ಗ್ರಾಮ ಮಟ್ಟದಿಂದ ರೆ?ತರನ್ನು ಸಂಘಟಿಸುವ ಸಲುವಾಗಿ ರೈತ ಕಾರ್ಯಾಲಯಗಳನ್ನು ತೆರೆಯಲಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ರೈತರ ಕಾರ್ಯಾಲಯಗಳನ್ನು ತೆರೆಯಲಾಗುವುದೆಂದರು.ಸಾನಿಧ್ಯ ವಹಿಸಿದ್ದ ಮುಪ್ಪಿನೇಶ್ವರ ಮಠದ ಮಲ್ಲಿಕಾರ್ಜುನ ಶ್ರೀಗಳು ಮಾತನಾಡಿ ರೈತರಿಗೆ ಇಲ್ಲಿಯವರೆಗೂ ಯಾವುದೇ ಸರ್ಕಾರಗಳು ಹತ್ತಿರ ಕರೆದು ಸೌಜನ್ಯದಿಂದ ಮಾತನಾಡುವ ಪ್ರಯತ್ನ ಮಾಡುತ್ತಿಲ್ಲ, ಕೆವಲ ತಮ್ಮ ಓಟಿಗಾಗಿ ರೈತರಲ್ಲಿ ಇಲ್ಲ ಸಲ್ಲದ ಆಸೆ, ಪ್ರಣಾಳಿಕೆ ನೀಡಿ ರೈತರನ್ನು ಗೊಂದಲದಲ್ಲಿ ಸಿಲುಕಿಸಿ ಮೋಸ ಮಾಡುವ ಪ್ರಯತ್ನಗಳು ಹಲವಾರು ವರ್ಷಗಳಿಂದ ನಡೆಯುತ್ತಲಿವೆ. ರೈತ ಪ್ರತಿನಿತ್ಯ ದುಡಿದರೂ ಇನ್ನೂ ಬಡತನದಿಂದ ಹೊರ ಬರಲಾರದೇ ಚಡಪಡಿಕೆ ಯಲ್ಲಿದ್ದಾನೆ. ಸರ್ಕಾರಗಳು ರೈತರ ನೆರವಿಗೆ ಬಂದು ಅನ್ನ ಬೆಳೆಯಲು ಸರಿಯಾದ ನೀರಾವರಿ ಸೌಲಭ್ಯ ಒದಗಿಸಿ ಕೊಡಬೇಕು. ರೈತರು ತಮ್ಮ ಚಿಂತನೆ ಹಂಚಿಕೊಳ್ಳಲು ಸರ್ಕಾರ ಉಚಿತ ಜಾಗೆ ಹಾಗೂ ಕಟ್ಟಡಗಳು ಸೌಲಭ್ಯಗಳನ್ನು ಕಲ್ಪಿಸಬೇಕು.  

ಇಲ್ಲವಾದಲ್ಲಿ ಮುಂದಿನ ದಿನಮಾನಗಳಲ್ಲಿ ರೈತರೇ ಸಂಘಟನೆ ಮೂಲಕ ಚುನಾವಣೆಗೂ ಸ್ಫರ್ಧೆಯಲ್ಲಿ ಭಾಗವಹಿ ರಾಜಕಾರಣಿಗಳನ್ನು ಮನೆಗೆ ಕಳಿಸುವ ಪಾಠ ಬಂದಿತೆಂದು ಸರ್ಕಾರಗಳಿಗೆ ಎಚ್ಚರಿಸಿದರು. ವೇದಿಕೆಯಲ್ಲಿ ಚಿಕ್ಕಪ್ಪ ಚತ್ರದ. ಮಾಲತೇಶ ಪೂಜಾರ. ಅಡವೆಪ್ಪ ಆಲದಕಟ್ಟಿ. ಶಿವಬಸಪ್ಪ ಭೋವಿ.ಮಹ್ಮದಗೌಸ ಪಾಟೀಲ. ರುದ್ರಗೌಡ ಕಾಡನಗೌಡ್ರ.ಗಂಗಣ್ಣ ಎಲಿ, ಕಿರಣ ಗಡಿಗೋಳ ಸೇರಿದಂತೆ ಇತರರಿದ್ದರು.ಬಾಕ್ಸ್‌: ತಾಲೂಕಿನಲ್ಲಿ ರೈತ ಸಹಾಯವಾಣಿ ಕಛೇರಿ ಪ್ರಾರಂಭವಾಗಿದ್ದು, ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಅವುಗಳಿಗೆ ಸರ್ಕಾರದ ಮೂಲಕ ಪರಿಹಾರ ಒದಗಿಸಿಕೊಡುವುದು ರೈತ ಸಂಘದ ಮುಖ್ಯ ಗುರಿ. ರೈತರು ಹೊಸ ಕಚೇರಿಗೆ ಬಂದು ಅವರ ದೂರು ದುಮ್ಮಾನ ತಿಳಿಸಬಹುದು. ರೈತ ಸಹಾಯವಾಣಿ  ಕರೆ:9480124365 ಹಾಗೂ 9483124365 ಕರೆ ಮಾಡುವಂತೆ ಹಸಿರು ಸೇನೆ ತಾಲೂಕಾ ಅಧ್ಯಕ್ಷ ಗಂಗಣ್ಣ ಯಲಿ ತಿಳಿಸಿದ್ದಾರೆ.