ಬಳ್ಳಾರಿ: ಪಾಪದ ದುಡ್ಡಲ್ಲಿ ಸರಕಾರ ಬೀಳಿಸಿದರು ರಾಮುಲು ವಿರುದ್ಧ ಎಚ್ಡಿಕೆ ಕೆಂಡ!
ಬಳ್ಳಾರಿ 26: ಸಚಿವ ಶ್ರೀರಾಮುಲು ವಿರುದ್ಧ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಬಳ್ಳಾರಿಯಲ್ಲಿ ಮಾತನಾಡಿದ ಅವರು, ರಾಮುಲು ವಿರುದ್ಧ ಕಿಡಿಕಾರುವ ಮುನ್ನ, ಒಂದು ಉದಾಹರಣೆಯನ್ನೂ ಕೊಟ್ಟರು. ಎಸ್ಟಿ ಸಮುದಾಯದ ಹೆಣ್ಣು ಮಗಳು ಸಿಎಂ ಯಡಿಯೂರಪ್ಪ ಬಳಿ, ಸಚಿವರ ಬಳಿ ತಮ್ಮ ಗೋಳು ಹೇಳಿಕೊಂಡಾಗ ಯಾರೂ ಕೇಳಲಿಲ್ಲವಂತೆ. ಆಕೆ ಕೊನೆಗೆ ತ ನ್ನ ಕಿಡ್ನಿ ಮಾರಾಟ ಮಾಡಿ ಜೀವನ ಮಾಡ್ತೇನೆ ಎಂದಳು. ಆಗ ನಾನು ಆಕೆಗೆ 1 ಲಕ್ಷ ರೂಪಾಯಿ ಕೊಟ್ಟೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ರಾಮುಲು ಕೂಡಾ ಎಸ್ಟಿ ಸಮುದಾಯದವರು. ಗದಗ್ ಜಿಲ್ಲೆಯ ಲಕ್ಕವ್ವ ಕೂಡಾ ಎಸ್ಟಿ ಸಮುದಾಯದವರು. ಆಕೆಯ 9 ಹಸುಗಳು ಮೃತಪಟ್ಟಿದ್ದವು. ಜೀವನವೇ ದುಸ್ತರವಾಗಿತ್ತು. ತಮ್ಮ ಸಮುದಾಯಕ್ಕೆ ಸೇರಿದ್ದ ಮಹಿಳೆಗೇ ರಾಮುಲು ಯಾವುದೇ ಸಹಾಯ ನೀಡಲಿಲ್ಲ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ಧಾರೆ.
ಜಾರಕಿಹೊಳಿ ಕುಟುಂಬವನ್ನು ಪರೋಕ್ಷವಾಗಿ ಹೆಸರಿಸಿದ ಕುಮಾರಸ್ವಾಮಿ, ಗೋಕಾಕ್ನವರಿಗೆ ಸಾಹುಕಾರರು ಎಂದು ಟಿವಿಗಳಲ್ಲಿ ಕರೆಯುತ್ತಾರೆ. ಆದ್ರೆ, ಆ ಭಾಗದ ರೈತರಿಗೆ ಸಾಹುಕಾರರು ಹಣ ಕೊಟ್ಟಿಲ್ಲ ಎಂದು ಕುಮಾರಸ್ವಾಮಿ ಕಿಡಿಕಾರಿದರು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 