ಮೇ.4ರಂದು ಗೋಸಬಾಳ ಮಾರುತಿ ದೇವರ ಓಕುಳಿ
Gosabala Maruti Devara's Okuli on May 4th
ಬೆಟಗೇರಿ 02 :ಗೋಕಾಕ ತಾಲೂಕಿನ ಗೋಸಬಾಳ ಗ್ರಾಮದ ಶ್ರೀ ಮಾರುತಿ ದೇವರ ಓಕುಳಿ ಇದೇ ಶನಿವಾರ ಮೇ.2ರಿಂದ ಸೋಮವಾರ ಮೇ.4 ರವರೆಗೆ ಜರುಗಲಿದೆ.
ಮೇ.3 ರಂದು ಮುಂಜಾನೆ 7ಗಂ ಮಾರುತಿ ದೇವರ ಗದ್ದುಗೆಗೆ ಮಹಾರುದ್ರಾಭಿಷೇಕ, ಮಹಾಪೂಜೆ ಮತ್ತು ಕುಂಕುಮ ಪೂಜೆ ಕಾರ‌್ಯಕ್ರಮ ನಡೆದ ಬಳಿಕ ಸಾಯಂಕಾಲ 5 ಗಂಟೆಗೆ ಓಕುಳಿ ಕೊಂಡ ಪೂಜೆ ನಡೆಯಲಿದೆ. ರವಿವಾರ ಮೇ.4ರಂದು ಮುಂಜಾನೆ 7ಗಂ ಮಾರುತಿ ದೇವರ ಗದ್ದುಗೆಗೆ ಅಭಿಷೇಕ, ಪೂಜೆ, ನಂತರ ಸಾಯಂಕಾಲ 5 ಗಂಟೆಗೆ ನಡು ಓಕುಳಿ ಜರುಗಲಿದೆ.
ಸೋಮವಾರ ಮೇ.5ರಂದು ಮುಂಜಾನೆ 6ಗಂ ಮಾರುತಿ ದೇವರ ಗದ್ದುಗೆಗೆ ಮಹಾರುದ್ರಾಭಿಷೇಕ, ಮಹಾಪೂಜೆ ನಡೆದ ನಂತರ ಪುರಜನರಿಂದ ಪೂಜೆ-ಪುನಸ್ಕಾರ, ನೈವೈದ್ಯ ಅರೆ್ಣ ನಡೆಯಲಿದ್ದು, ವಿವಿಧ ಗ್ರಾಮಗಳಿಂದ ವಿವಿಧ ದೇವರ ಪಲ್ಲಕ್ಕಿಗಳ ಆಗಮನ, ಸಾಯಂಕಾಲ 5 ಗಂಟೆಗೆ ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ವಿವಿಧ ದೇವರುಗಳ ಓಕಳಿ ಕೊಂಡಕ್ಕೆ ಪಲ್ಲಕ್ಕಿ ಪ್ರದಕ್ಷೀಣೆ ನಡೆದ ಬಳಿಕ ಕಡೆ ಓಕಳಿ ಜರುಗಲಿದೆ. ಸಂಜೆ 8 ಗಂಟೆಗೆ ಮಹಾಪ್ರಸಾದ ಕಾರ್ಯಕ್ರಮ ನಡೆಯಲಿದೆ.
ಅದೇ ದಿನ ರಾತ್ರಿ 10-30 ಕ್ಕೆ ಸುಣಧೋಳಿಯ ಜಡಿಸಿದ್ಧೇಶ್ವರ ನಾಟ್ಯ ಸಂಘದವರಿಂದ ಅರವತ್ತು ಹಳ್ಳಿಯ ಅರಸ ಎಂಬ ಸುಂದರ ಸಾಮಾಜಿಕ ನಾಟಕ ಜರುಗಲಿದೆ ಎಂದು ಇಲ್ಲಿಯ ಶ್ರೀ ಮಾರುತಿ ದೇವರ ಓಕುಳಿ ಉತ್ಸವ ಆಚರಣಾ ಸಮಿತಿ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 