ಉತ್ತಮ ಗುಣಮಟ್ಟದ ಬೀಜಗಳನ್ನು ಖರೀದಿಸಿ ಬಿತ್ತನೆ ಮಾಡಿದರೆ ಉತ್ತಮ ಇಳುವರಿ ಸಾಧ್ಯ: ಶಾಸಕ ಪಾಟೀಲ

ರೋಣ 28: ರೈತರಿಗೆ ಪ್ರಸಕ್ತ ವರ್ಷ ಸಕಾಲದಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ರೈತರು ಉತ್ತಮ ಗುಣಮಟ್ಟದ ಬೀಜಗಳನ್ನು ಖರೀದಿಸಿ ಬಿತ್ತನೆ ಮಾಡಿದರೆ ಉತ್ತಮ ಇಳುವರಿ ಪಡೆಯಲು ಸಾಧ್ಯ ಎಂದು ಶಾಸಕ ಜಿ.ಎಸ್‌.ಪಾಟೀಲ ಹೇಳಿದರು.     

 ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ತಾಲೂಕು ಪಂಚಾಯತ, ಕೃಷಿ ಇಲಾಖೆ ವತಿಯಿಂದ 2033-24ನೇ ಸಾಲಿನ ಹಿಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಅಧಿಕಾರಿಗಳು ರೈತರ ಸಮಸ್ಯೆಗಳಿಗೆ ಸ್ಪಂದನೆ ಮಾಡಿ ಸರ್ಕಾರದ ಯೋಜನೆಗಳನ್ನು ರೈತರಿಗೆ ತಲುಪಿಸಬೇಕು ಎಂದರು.    

2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕಡಲೆ,ಜೋಳ,ಕುಸುಬಿ, ಸೂರ್ಯಕಾಂತಿ ಸೇರಿದಂತೆ ವಿವಿಧ ಬೀಜಗಳನ್ನು ಕ್ಯೂರ್ ಕೋಡ್ ಮುಖಾಂತರರೈತರಿಗೆ ಸಾಂಕೇತಿಕವಾಗಿ ವಿತರಣೆ ಮಾಡಲಾಯಿತು. ರೋಣ ಬ್ಲಾಕ್ ಕಾಂಗ್ರೆಸ್ ತಾಲೂಕಾಧ್ಯಕ್ಷ ವೀರಣ್ಣ ಶೆಟ್ಟರ ಮಾತನಾಡಿ ಭಾರತದಲ್ಲಿ ಒಟ್ಟು ಶೇ.85 ಜನ ರೈತರು ಇದ್ದಾರೆ. ಅಧಿಕಾರಿಗಳ ಜೊತೆ ರೈತರು ನೇರ ಸಂಪರ್ಕ ಹೊಂದಿರಬೇಕು. ಸರ್ಕಾರದಿಂದ ಬಂದಂತಹ  ಸೌಲಭ್ಯಗಳನ್ನು ರೈತರು ಸದುಪಯೋಗ ಪಡೆದುಕೊಳ್ಳಬೇಕು. ಅಧಿಕಾರಿಗಳು ರೈತರ ಸಮಸ್ಯೆಗಳನ್ನು ಆದಷ್ಟು ಬೇಗ ಬಗೆಹರಿಸಬೇಕು ಎಂದು ಹೇಳಿದರು.  

ಗದಗ ಕೃಷಿ ಜಂಟಿ ನಿರ್ದೇಶಕಿ ತಾರಾಮನಿ ಜಿ.ಎಚ್, ಕೃಷಿ ಇಲಾಖೆ ಸಹಾಯ ನಿರ್ದೇಶಕ ರವೀಂದ್ರಗೌಡ ಪಾಟೀಲ, ಗೀರೀಶ ಹೊಸೂರು, ವೀರಣ್ಣ ಶೆಟ್ಟರ್, ಶಂಕರ್ ಕಾಗಣ್ಣವರ, ಶಿವಣ್ಣ ಅರಹುಣಸಿ, ವೀರಣ್ಣ ಶೆಟ್ಟರ್, ಮುತ್ತಣ್ಣ ಸಂಗಳದ, ನಿಂಗರಾಜ ಬಾವಿ, ಬಸವರಾಜ ನವಲಗುಂದ, ಮುತ್ತಣ್ಣ ಪರಡ್ಡಿ, ಯುಸೂಫ್ ಇಟಗಿ, ಎಚ್‌.ಎಸ್‌. ಸೊಂಪುರ, ಗಂಗಯ್ಯ ಗುಮ್ಮತಿ, ಬಿ.ಟಿ. ರಬ್ಬನಗೌಡ್ರ, ಮುತ್ತಣ್ಣ ಚೌಡರೆಡ್ಡಿ, ಮಲ್ಲಿಕಾರ್ಜುನ ಮೇಟಿ ಸೇರಿದಂತೆ ರೈತರು ಪಾಲ್ಗೊಂಡಿದ್ದರು.