ಎಚ್‌ಎಸ್ ಪಾಟೀಲ ಪಿಯು ಕಾಲೇಜ ವಿದ್ಯಾರ್ಥಿಗಳ ಉತ್ತಮ ಸಾಧನೆ

ತಾಳಿಕೋಟಿ 13: ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಶ್ರೀ ಎಚ್‌ಎಸ್ ಪಾಟೀಲ ಪಿಯು ಕಾಲೇಜಿನ ವಿದ್ಯಾರ್ಥಿಗಳು ಈ ಬಾರಿ ನಡೆದ ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಕಲಾ ವಿಭಾಗದಲ್ಲಿ ಕುಮಾರ ದರ್ಶನ್ ಬಡಿಗೇರ ಎಂಬ ವಿದ್ಯಾರ್ಥಿ ಶೇ. 97( 579/600) ಪ್ರಥಮ ಸ್ಥಾನ. ಶಿವಕುಮಾರ್ ನಾಯ್ಕೋಡಿ ಶೇ. 95( 569/600) ದ್ವಿತೀಯ ಸ್ಥಾನ.ಕುಮಾರಿ ಸವಿತಾ ಎಸ್ ಪೂಜಾರಿ ಶೇ. 91( 569/600) ತೃತೀಯ ಸ್ಥಾನ ಪಡೆದುಕೊಂಡಿದ್ದಾಳೆ. ವಾಣಿಜ್ಯ ವಿಭಾಗದಲ್ಲಿ ಬಸನಗೌಡ ಪಾಟೀಲ ಶೇ. 93.16(574/600) ಪ್ರಥಮ ಸ್ಥಾನ. ಮುತ್ತಣ್ಣ ಚೌಹಾಣ್ ಶೇ. 88.5 (531/600) ದ್ವಿತೀಯ ಸ್ಥಾನ. ಸಿದ್ದಪ್ಪ ಯರಜೇರಿ ಶೇ. 88.3(530/600) ತೃತಿಯ ಸ್ಥಾನ ಪಡೆದುಕೊಂಡಿದ್ದಾನೆ. ವಿಜ್ಞಾನ ವಿಭಾಗದಲ್ಲಿ ಮಲ್ಲಿಕಾರ್ಜುನ ಚಿಕ್ಕಮಠ ಶೇ. 95(574/600) ಪ್ರಥಮ ಸ್ಥಾನ. ಶಿವರಾಜ್ ಪೂಜಾರಿ  ಶೇ. 95.16(571/600) ದ್ವಿತೀಯ ಸ್ಥಾನ.ಕುಮಾರಿ ಜಮೀರಾ ಅವಟಿ ಶೇ. 92.16(553/600) ತೃತೀಯ ಸ್ಥಾನ ಪಡೆದುಕೊಂಡಿದ್ದಾಳೆ. ವಿದ್ಯಾರ್ಥಿಗಳ ಈ ಅಮೋಘ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಹೆಚ್‌ಎಸ್ ಪಾಟೀಲ. ಕಾರ್ಯದರ್ಶಿ ಸಚೀನ ಪಾಟೀಲ ಪ್ರಾಚಾರ್ಯ ಎಂ. ಎಸ್‌. ಬಿರಾದಾರ. ಉಪ ಪ್ರಾಚಾರ್ಯ ಎಸ್‌. ಬಿ. ಮಂಗ್ಯಾಳ. ಉಪನ್ಯಾಸಕರಾದ ಪ್ರಕಾಶ್ ಎಸ್ ಪಾಟೀಲ್ ಎಂಬಿ ವಾಲಿಕಾರ್ ಎಸ ವಿ ಜಾಮಗೊಂಡ ಎಸ್‌.ಎಂ.ಖಿಂಡಿಮನಿ.ಆರ್‌.ವಾಯ್‌.ದೊಡಮನಿ.ಎಚ್‌.ಆರ್‌.ಸುಭೇದಾರ.ಎಂ.ಆರ್‌.ಪಟ್ಟೇವಾಲೆ.ವಿ.ಎಸ್‌.ಬಿರಾದಾರ.ಆರಿ​‍್ಬ.ಪಟೀಲ.ಗಂಗಾಂಬಿಕಾ ಎಸ್‌. ಪೂಜಾ ಹಿರೇಮಠ. ಸಿ. ಬಿ. ಪಾಟೀಲ ಸನಾ ಪಠಾಣ ಅಭಿನಂದಿಸಿದ್ದಾರೆ.