ಗಿರಿ ಮಲ್ಲಿಗೆ ಮಹಿಳಾ ಸೌಹಾರ್ದ ಸಹಕಾರಿ ದಶಕದ ಸಂಭ್ರಮ

ಗಿರಿ ಮಲ್ಲಿಗೆ ಮಹಿಳಾ ಸೌಹಾರ್ದ ಸಹಕಾರಿ ದಶಕದ ಸಂಭ್ರಮ Giri Mallige Women's Souharda Cooperative Decennial Celebrations


 ಲೋಕದರ್ಶನ ವರದಿ 

ಹೂವಿನ ಹಡಗಲಿ  15: ಮಹಿಳೆಯರು ಆರ್ಥಿಕವಾಗಿ ಸಾಮಾಜಿಕವಾಗಿ ಸಬಲರಾಗಬೇಕು ಎಂದು ತಾಲೂಕು ಬಣಜಿಗ ಸಮಾಜದ ಸಂಸ್ಥಾಪಕ ಅಧ್ಯಕ್ಷ ಡಾ.ಜಂಬಣ್ಣ ಯಲಗಚ್ಚಿನ ಅಭಿಮತ ವ್ಯಕ್ತಪಡಿಸಿದರು.ಪಟ್ಟಣದ ಗವಿಮಠದಲ್ಲಿ ಶನಿವಾರ ಇಲ್ಲಿನ ಗಿರಿ ಮಲ್ಲಿಗೆ ಮಹಿಳಾ ಸೌಹಾರ್ದ ಸಹಕಾರಿ ಹತ್ತನೇ ವರ್ಷದ ವಾರ್ಷಿಕ ಮಹಾಜನ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಗ್ರಾಮೀಣ ಮಹಿಳೆಯರು ಸಹಕಾರಿ ಸಂಸ್ಥೆಗಳಿಂದ ಸಾಲ ಪಡೆದು ಸ್ವಂತ ಉದ್ದಿಮೆಗಳನ್ನು ಆರಂಭಿಸಿ ಆರ್ಥಿಕ ವಹಿವಾಟು ನಡೆಸುವ ಮೂಲಕ ಸ್ವಾವಲಂಬನೆ ಜೀವನ ನಡೆಸಿರಿ ಎಂದು ತಿಳಿಸಿದರು. '

ತಾಲೂಕು ಬಣಜಿಗ ಸಮಾಜದ ಅಧ್ಯಕ್ಷ ಮುಂಡವಾಡ ಉಮೇಶ್ ಮಾತನಾಡಿ ಹೆಚ್ಚು ಖಾತೆಗಳನ್ನು ತೆರೆದು ಸಹಕಾರಿ ಸಂಸ್ಥೆಗಳನ್ನು ಬೆಳೆಸಿರಿ. ದುಡಿದ ಹಣವನ್ನು ಮುಂದಿನ ಭವಿಷ್ಯಕ್ಕಾಗಿ ಸಹಕಾರಿ ಸಂಘಗಳಲ್ಲಿ ಹೂಡಿಕೆ ಮಾಡಿರಿ ಎಂದು ಹೇಳಿದರು. ಗಿರಿ ಮಲ್ಲಿಗೆ ಮಹಿಳಾ ಸೌಹಾರ್ದ ಸಹಕಾರಿಯ ಅಧ್ಯಕ್ಷೆ ಸವಿತಾ ಅಂಗಡಿ ಮಾತನಾಡಿ ಉತ್ತಮ ಆರ್ಥಿಕ ಶಿಸ್ತು ನೀಡುವುದರ ಮೂಲಕ ಪಾರದರ್ಶಕ ಮತ್ತು ಜವಾಬ್ದಾರಿಯುತ ಆಡಳಿತ ಮುಂದುವರೆಸುವ ಸಂಕಲ್ಪ ಹೊಂದಿರುವುದಾಗಿ ತಿಳಿಸಿದರು. ಸಂಪೂರ್ಣವಾಗಿ ಸಮಾನಾಸಕ್ತ ಮಹಿಳೆಯರೇ ಸೇರಿಕೊಂಡು ಸಮಾಜದ ಹಿರಿಯರ ಆಶಯದಂತೆ ಸಹಕಾರಿ ನಿಯಮಿತವನ್ನು ಹತ್ತು ವರ್ಷಗಳ ಹಿಂದೆ ಸ್ಥಾಪಿಸಿದ್ದೇವೆ ಎಂದರು.

ಹತ್ತು ವರ್ಷಗಳ ಸಹಕಾರಿ ಪಯಣದ ಹಾದಿಯಲ್ಲಿ ಸಹಕರಿಸಿದ ಎಲ್ಲರ ಸೇವೆ ಸಹಕಾರ ಸ್ಮರಿಸಿದರು. ಗವಿಮಠದ ಶರಣಮ್ಮ ಗಿರಿ ಮಲ್ಲಿಗೆ ಸೌಹಾರ್ದ ಸಹಕಾರಿಯ ಉಪಾಧ್ಯಕ್ಷೆ ನರ್ಮದಾ ಯಲಗಚ್ಚಿನ ಪಟ್ಟೇದ ಕೊಟ್ರೇಶಪ್ಪ,ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ವಿದ್ಯಾ ಯಳಮಾಲಿ ಇದ್ದರು.ನಿರ್ದೇಶಕರಾದ ಸೌಮ್ಯ ತುರಕಾಣಿ, ವಿಜಯಾ ಕಡ್ಲಿ,ಮಂಗಳಾ ವಾಲಿ, ಭುವನೇಶ್ವರಿ ಅಂಗಡಿ, ಲಲಿತಾ ಕೋರಿ, ಶಾಂತಾ ಅರ್ಲೂರು ಇತರರು ಇದ್ದರು.ನಿರ್ದೇಶಕಿ ನಾಗರತ್ನ ಕುಂಚೂರುಸ್ವಾಗತಿಸಿದರು. ಸವಿತಾ ಕುಂಬಾರಿ ನಿರ್ವಹಿಸಿದರು.ಸಮಾಜದ ಮಹಿಳೆಯರು ಭಾಗವಹಿಸಿದ್ದರು.