ಗದಗ ಜಿಪಂ ನೂತನ ಸಿಇಒ ಮುಕುಲ್ ಜೈನ್ಗೆ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಸನ್ಮಾನ
Gadag ZP's new CEO Mukul Jain felicitated by Employees' Welfare Development Association
ಗದಗ, ಸೆ. 2: ಗದಗ ಜಿಲ್ಲಾ ಪಂಚಾಯಿತಿಯ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಸಿಇಒ) ಅಧಿಕಾರ ವಹಿಸಿಕೊಂಡಿರುವ ಮುಕುಲ್ ಜೈನ್ ಅವರನ್ನು ಜಿಪಂ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬುಧವಾರ ಭೇಟಿ ಮಾಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಉಪಾಧ್ಯಕ್ಷ ಸುರೇಶ್ ಬಾಳಿಕಾಯಿ ಅವರು, ನೌಕರರ ಹಿತದೃಷ್ಟಿಯಿಂದ ಪ್ರತಿ ಮೂರು ತಿಂಗಳಿಗೊಮ್ಮೆ ವಿಶ್ವಕರ್ಮ ಯೋಜನೆಯ ನೌಕರರ ಕುಂದುಕೊರತೆ ಸಭೆ ನಡೆಸುವಂತೆ ಸಿಇಒ ಅವರಿಗೆ ಮನವಿ ಮಾಡಿದರು.
ಮನವಿಗೆ ಸ್ಪಂದಿಸಿದ ಸಿಇಒ ಮುಕುಲ್ ಜೈನ್ ಅವರು, ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ನೌಕರರನ್ನು ಕರೆದು ಸಭೆ ನಡೆಸಿ, ಅವರ ಸಮಸ್ಯೆಗಳು ಹಾಗೂ ಕುಂದುಕೊರತೆಗಳನ್ನು ಆಲಿಸಲಾಗುವುದು ಎಂದು ಭರವಸೆ ನೀಡಿದರು.
ನೌಕರರ ಸಮಸ್ಯೆಗಳನ್ನು ಕಾಲಕಾಲಕ್ಕೆ ಆಲಿಸುವ ಮೂಲಕ ಯೋಜನೆಯ ಅನುಷ್ಠಾನದಲ್ಲಿ ಎದುರಾಗುವ ತೊಂದರೆಗಳನ್ನು ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ರಾಜ್ಯ ಪ್ರತಿನಿಧಿ ಕಿರಣಕುಮಾರ್, ನರಗುಂದ ತಾಲೂಕು ಅಧ್ಯಕ್ಷ ಹನುಮಂತ ಡಂಬಳ, ರೋಣ ತಾಲೂಕು ಅಧ್ಯಕ್ಷೆ ಶಾಂತಾ ತಿಮ್ಮರಡ್ಡಿ, ಮುಂಡರಗಿ ತಾಲೂಕು ಪ್ರತಿನಿಧಿ ಬಸವರಾಜ ಮನ್ನಮ್ಮನವರ, ಗದಗದ ನವೀನ ಬಸರಿ, ಶಿರಹಟ್ಟಿಯ ವೀರೇಶ ಪಟ್ಟಣಶೆಟ್ಟಿ, ಲಕ್ಷ್ಮೇಶ್ವರದ ಶ್ರೀನಿವಾಸ ಕಲಾಲ್ ಸೇರಿದಂತೆ ಜಿಲ್ಲಾ ಪದಾಧಿಕಾರಿಗಳಾದ ಫಕೀರೇಶ ನಿಟ್ಟಾಳಿ, ಅರುಣ ಸಿಂಗ್ರಿ, ಹರೀಶ್ ಸೋಬರದ, ಲಿಂಗರಾಜ ಮುಡಿಗೌಡರ, ಮಲ್ಲಿಕಾರ್ಜುನ ಸರ್ವಿ, ವೀರಭದ್ರ್ಪ ಸಜ್ಜನ, ಲಿಂಗರಾಜ ಅರಿಶಿಣದ, ಮಂಜುನಾಥ ತಳವಾರ, ಅಜಯ್ ಅಬ್ಬಿಗೇರಿ ಹಾಗೂ ವಿವಿಧ ತಾಲೂಕುಗಳ ನೌಕರರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 