ಗದಗ-ಬೆಟಗೇರಿ ಗ್ರಾಮ ದೇವತೆಗಳ ಜಾತ್ರೆ: ಕಳಿಯುಗ ವಿನಾಶದ ಅಂಚಿನಲ್ಲಿದೆ ಎಂದ ಸಿದ್ದಲಿಂಗ ಸ್ವಾಮೀಜಿ

ಗದಗ-ಬೆಟಗೇರಿ ಗ್ರಾಮ ದೇವತೆಗಳ ಜಾತ್ರೆ: ಕಳಿಯುಗ ವಿನಾಶದ ಅಂಚಿನಲ್ಲಿದೆ ಎಂದ ಸಿದ್ದಲಿಂಗ ಸ್ವಾಮೀಜಿ  Gadag-Betageri Village Deities' Fair: Siddalinga Swamiji Says Kali Yuga Is on the Brink of Destructi


ಗದಗ, ಆ.25: ವಿನಾಶದ ಅಂಚಿನಲ್ಲಿರುವ ಮಾನವ ಕುಲಕ್ಕೆ ರಕ್ಷಣೆ ದೊರೆಯಬೇಕಾದರೆ ಗುರು, ಧ್ಯಾನ, ದಾನ ಹಾಗೂ ಧರ್ಮದ ಮಾರ್ಗದಲ್ಲಿ ನಡೆಯಬೇಕು. ದೇವರ ಕಾರ್ಯದಿಂದ ಮಾತ್ರ ಇದು ಸಾಧ್ಯ ಎಂದು ಧಾರವಾಡದ ಸಿದ್ಧಸುಕ್ಷೇತ್ರ ನಯಾನಗರದ ಶ್ರೀಗುರು ಅಭಿನವ ಸಿದ್ದಲಿಂಗ ಮಹಾಸ್ವಾಮೀಜಿ ಹೇಳಿದರು.  

ನಗರದ ಒಕ್ಕಲಗೇರಿ ಓಣಿಯ ದ್ಯಾಮವ್ವನ ಕಟ್ಟೆ ಬಳಿ ನಡೆಯುತ್ತಿರುವ ಗದಗ-ಬೆಟಗೇರಿ ಗ್ರಾಮ ದೇವತೆಗಳಾದ ಶ್ರೀ ದ್ಯಾಮವ್ವ ಹಾಗೂ ಶ್ರೀ ದುರ್ಗವ್ವ ದೇವಿಯರ ಹರಿಜಾತ್ರಾ ಮಹೋತ್ಸವದ ಆರನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  

ಮುದ್ರಣಕಾಶಿ ಗದಗದಲ್ಲಿ ನಡೆಯುತ್ತಿರುವ ಈ ಜಾತ್ರೆಗೆ ತಾಯಂದಿರ ಆಶೀರ್ವಾದವಿದೆ. ದೇವರನ್ನು ಶರಣಾಗಿ ಬದುಕಿದರೆ ಜೀವನ ಸುಂದರವಾಗುತ್ತದೆ. ಅಧಿಕಾರ, ಜಾತಿ, ಗತ್ತು ಮತ್ತು ದೌಲತ್ತಿನ ಅಹಂಕಾರದಿಂದ ತಾಯಿಯ ಎದುರು ನಡೆಯಬಾರದು. ತಾಯಿ ಆಡಿಸಿದಂತೆ ನಾವು ಆಡಬೇಕು. ಆಕೆಯ ಮುಂದೆ ತಲೆಬಾಗಿದರೆ ಬದುಕಿನಲ್ಲಿ ತಲೆ ಎತ್ತುವ ಅವಕಾಶ ದೊರೆಯುತ್ತದೆ ಎಂದರು.