ಗದಗ : ಚುನಾವಣಾ ವೀಕ್ಷಕರ ಸಮ್ಮುಖದಲ್ಲಿ ರ್ಯಾಂಡ ಮೈಜೇಶನ್

ಗದಗ 10: ಹಾವೇರಿ ಹಾಗೂ ಬಾಗಲಕೋಟ ಸಾಮಾನ್ಯ ವೀಕ್ಷಕರ ಸಮ್ಮುಖದಲ್ಲಿ ಏಪ್ರೀಲ್ 23 ರಂದು ನಡೆಯುವ ಲೋಕಸಭಾ ಮತದಾನ ಅಧಿಕಾರಿ ಸಿಬ್ಬಂದಿಯನ್ನು ನಿಯಮಿಸುವ 2ನೇ ಸುತ್ತಿನ ರ್ಯಾಂಡಮೈಜೇಶನ್ ಕಾರ್ಯ ಗದುಗಿನ ಜಿಲ್ಲಾಡಳಿತ ಭವನದ ಎನ್.ಐ.ಸಿ ಕಚೇರಿಯಲ್ಲಿಂದು ಜರುಗಿತು.

ಗದಗ ಜಿಲ್ಲೆಯ ನಾಲ್ಕು ವಿಧಾನ ಸಭಾ ಕ್ಷೇತ್ರಗಳಲ್ಲಿ  ಒಟ್ಟು 4848 ಮತದಾನ ಸಿಬ್ಬಂದಿ 162 ಮೈಕ್ರೋ ಆಬ್ಸರ್ವರ ಅವರುಗಳ 2ನೇ ಸುತ್ತಿನ ರ್ಯಾಂಡಮೈಜೇಶನ್ ಇಂದು ಜರುಗಿದ್ದು ಹಾವೇರಿ ಲೋಕಸಭೆ ವ್ಯಾಪ್ತಿಗೆ ಸಂಬಂಧಿಸಿದಂತೆ ಅಂತಿಮಗೊಳಿಸಲಾಗುವ ಪಟ್ಟಿಯಲ್ಲಿ ಸೂಚಿಸಿದಂತೆ ಸಂಬಂಧಿತ ಮತಗಟ್ಟೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಹಾವೇರಿ ಲೋಕಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕರಾದ ಡಾ.ಅಖ್ತರ ರಿಯಾಜ್ ತಿಳಿಸಿದರು.

ಮಹಿಳಾ ಅಧಿಕಾರಿ ಸಿಬ್ಬಂದಿಗಳನ್ನು ಅವರ ಕಾರ್ಯವ್ಯಾಪ್ತಿಯ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಆಯೋಗದ ನಿದರ್ೇಶನದ ರೀತ್ಯಾ ಕ್ರಮ ಜರುಗಿಸಲಾಗಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.

ಬಾಗಲಕೋಟೆ ಲೋಕಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕ ಟಿ.ಎಲ್.ನರಸಿಂಗಾರಿ, ಹಾವೇರಿ ಲೋಕಸಭಾ ಕ್ಷೇತ್ರದ ವೆಚ್ಚ ವಿಕ್ಷಕ ಹಸನ್ ಅಹ್ಮದ, ಗದಗ ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಗದಗ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಶಿವಾನಂದ ಭಜಂತ್ರಿ, ರೋಣ ಸಹಾಯಕ ಚುನಾವಣಾಧಿಕಾರಿ ಡಿ.ಪ್ರಾಣೇಶರಾವ್, ಶಿರಹಟ್ಟಿ ಸಹಾಯಕ ಚುನಾವಣಾಧಿಕಾರಿ ರಾಮಕೃಷ್ಣ ಪಡಗಣ್ಣವರ, ನೊಡೆಲ್ ಅಧಿಕಾರಿ ಕಂಬಾಳಿಮಠ, ಎನ್.ಐ.ಸಿ.ಯ ರಾಮಕೃಷ್ಣ ಸಭೆಯಲ್ಲಿ ಭಾಗವಹಿಸಿದ್ದರು.