ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ: ಮಹಾಂತೇಶ

Full cooperation for the idol installation program: Mahantesh

ತಾಳಿಕೋಟಿ: ಪಟ್ಟಣದಲ್ಲಿ ರಜಪೂತ ಸಮಾಜದ ವತಿಯಿಂದ ಇಂದು ಮತ್ತು ನಾಳೆ(ಮೇ.8,9.) ನಡೆಯಲಿರುವ ಶ್ರೀ ಮಹಾರಾಣಾ ಪ್ರತಾಪ್ ಸಿಂಹರ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದ ಯಶಸ್ವಿಗೆ ಪಟ್ಟಣದ ಚೈತನ್ಯ ಸ್ನೇಹಿತರ ಬಳಗದ ಸಂಪೂರ್ಣ ಸಹಕಾರ ಇರಲಿದೆ ಎಂದು ಬಳಗದ ಕಾರ್ಯದರ್ಶಿ ಮಹಾಂತೇಶ ಮುರಾಳ ಹೇಳಿದರು.  

ಪತ್ರಿಕೆಯೊಂದಿಗೆ ಮಾತನಾಡಿದ ಅವರು ಮೇ 8ರಂದು ಮಹಾರಾಣಾ ಪ್ರತಾಪ್ ಸಿಂಹರ ಮೂರ್ತಿಯು ರಾಜಸ್ಥಾನದ ಜೈಪುರದಿಂದ ಪಟ್ಟಣಕ್ಕೆ ಆಗಮಿಸಲಿದ್ದು ಅದನ್ನು ಬಳಗಾನೂರ ಗ್ರಾಮದಿಂದ ಬೈಕ್ ರ್ಯಾಲಿ ಮೂಲಕ ತರಲಾಗುವುದು ಹಾಗೂ ಮೇ 9ರಂದು ರಜಪೂತ ಸಮಾಜದ ಶ್ರೀ ಅಂಬಾ ಭವಾನಿ ಮಂದಿರದಿಂದ ಅದರ ಭವ್ಯ ಶೋಭಾಯಾತ್ರೆ ಮಹಾರಾಣಾ ಪ್ರತಾಪ್ ಸಿಂಹ ವೃತ್ತದ ವರೆಗೆ ನಡೆಯಲಿದೆ ಈ ಎರಡೂ ಕಾರ್ಯಕ್ರಮ ಯಶಸ್ವಿಗೊಳಿಸಲು ನಮ್ಮ ಬಳಗದ ಎಲ್ಲ ಪದಾಧಿಕಾರಿಗಳು ಶಕ್ತಿಮೀರಿ ಪ್ರಯತ್ನಿಸಲಿದ್ದಾರೆ ಎಂದ ಅವರು ಪಟ್ಟಣದ ಸರ್ವ ಸಮಾಜದ ಬಾಂಧವರು ಕೂಡಾ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಲು ಸಹಕರಿಸಬೇಕು ಎಂದು ಹೇಳಿದರು.