ಕಂಪ್ಲಿ

40ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ನೋಟ್ ಬುಕ್, ಪೆನ್ನು ವಿತರಣೆ

40ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ನೋಟ್ ಬುಕ್, ಪೆನ್ನು ವಿತರಣೆ

ಲೋಕದರ್ಶನ ವರದಿ

ಕಂಪ್ಲಿ 10:  ಕರವೇ ರಾಜ್ಯಾಧ್ಯಕ್ಷ  ನಾರಾಯಣಗೌಡ ಅವರ ನಿರಂತರ ಹೋರಾಟದ ಮುಖೇನ ಜನ ಸಮೂಹವನ್ನು ಕತ್ತಲೆಯ ಅಂಧಕಾರದಿಂದ ಬೆಳಕಿನೆಡೆಗೆ ಕೊಂಡೊಯ್ದ ಮೂಲಕ ಸಮಾಜಕ್ಕೆ ಒಂದು ದಿಕ್ಕನ್ನು ತೋರಿಸಿಕೊಟ್ಟಿದ್ದಾರೆ ಎಂದು ಕರವೇ ತಾಲೂಕು ಅಧ್ಯಕ್ಷ ಬಳೆ ಮಲ್ಲಿಕಾರ್ಜುನ ಹೇಳಿದರು. 

ತಾಲೂಕಿನ ನಂ.10 ಮುದ್ದಾಪುರ ಗ್ರಾಮದ ಯಲ್ಲಮ್ಮಕ್ಯಾಂಪ್ ಬಳಿಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕರವೇ(ನಾರಾಯಣಗೌಡ ಬಣ) ತಾಲೂಕು ಘಟಕ ನೇತೃತ್ವದಲ್ಲಿ ಬುಧವಾರ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್, ಪೆನ್ನು, ಪೆನ್ಸಿಲ್ ವಿತರಿಸಿದ ನಂತರ ಮಾತನಾಡಿ, ಇಡೀ ರಾಜ್ಯಾದ್ಯಂತ ನಾರಾಯಣಗೌಡ ಅವರ ಜನ್ಮದಿನಾಚರಣೆ ಮಾಡಲಾಗುತ್ತಿದೆ.

ನಾಡು, ನುಡಿ, ಭಾಷೆಗಾಗಿ ಶ್ರಮ ಅಪಾರವಿದೆ.  ಇಡೀ ರಾಜ್ಯದ ಮೂಲೆ ಮೂಲೆಯಲ್ಲಿ ಕನ್ನಡದ ಕಂಪನ್ನು ಪಸರಿಸುವ ಮೂಲಕ ತನ್ನದೇ ಆದ ಛಾಪು ಮೂಡಿಸುವ ಜೊತೆಗೆ ಸಾಕಷ್ಟು ಜನತೆಗೆ ಸರ್ಕಾರದ ಮಟ್ಟದಲ್ಲಿ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಾಡಿನ ಒಳಿತಿಗಾಗಿ ಸದಾ ಸಮಾಜ ಸೇವೆ ಮಾಡಿಕೊಂಡು ಬರಲಾಗಿದೆ ಎಂದರು 

ಪ್ರಧಾನ ಕಾರ್ಯದರ್ಶಿ ಮನೋಜ್ ಗೌಡ ಮಾತನಾಡಿ, ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುವ ನಿಟ್ಟಿನಲ್ಲಿ ನೋಟ್ ಬುಕ್, ಪೆನ್ನು ಮಕ್ಕಳಿಗೆ ಅತ್ಯವಶ್ಯಕವಾಗಿದೆ. ನಿರಂತರ ಹೋರಾಟ ನಡೆಯುತ್ತಿದೆ. ಶಿಕ್ಷಣ ಹುಲಿ ಹಾಲಿನಂತೆ. ಶಿಕ್ಷಣ ಪಡೆದ ಪ್ರತಿಯೊಬ್ಬ ಘರ್ಷಿಸಲೇಬೇಕು. ಅವರ ಆದರ್ಶಗಳ ಪರಿಪಾಲನೆಯೊಂದಿಗೆ ಇನ್ನಷ್ಟು ಜನಪರ ಸೇವೆಗೆ ಮುಂದಾಗೋಣ ಎಂದರು.  ಇಲ್ಲಿನ ಶಾಲೆಯಲ್ಲಿ ಒಟ್ಟು 40ಕ್ಕೂ ಹೆಚ್ಚು ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್ ಮತ್ತು ಪೆನ್ನು, ಪೆನ್ಸಿಸ್ ವಿತರಿಸಲಾಯಿತು. 

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ವಿ.ಬಿ.ನಾಗರಾಜ, ಅಕ್ಕಿ ಜಿಲಾನ್, ನಗರ ಘಟಕ ಅಧ್ಯಕ್ಷ ಜಂಗ ನಾಗರಾಜ, ಗ್ರಾಮ ಘಟಕ ಅಧ್ಯಕ್ಷರಾದ ಜಿ.ರಮೇಶ, ಕೆ.ಶಶಿಧರ, ಪದಾಧಿಕಾರಿಗಳಾದ ಹೆಚ್‌.ಲಿಂಗೇಶ, ಗಾರೆ ಸುದೀಪ್, ಅಂಬರೇಶ, ಜಿ.ಗಜೇಂದ್ರ, ರಾಮಚಂದ್ರ, ಮುಖ್ಯಶಿಕ್ಷಕಿ ಉಷಾರಾಣಿ ಬಾವಿ, ಸಹ ಶಿಕ್ಷಕಿ ಶೇಖಮ್ಮ, ಅಡುಗೆದಾರರಾದ ಪ್ರೇಮ, ಶಿವಮ್ಮ ಸೇರಿದಂತೆ ಶಾಲಾ ಮಕ್ಕಳಿದ್ದರು.  


ಸುದ್ದಿ ಓದಿ