ವಧು ವರರ ಶೀಘ್ರ ಕಲ್ಯಾಣಕ್ಕಾಗಿ ಉಚಿತ ಸ್ವಪರಿಚಯ ಕಾರ್ಯಕ್ರಮ

ಕಂಪ್ಲಿ 13: ಬೆಂಗಳೂರಿನ ತಿಟ್ಟಹಳ್ಳಿಯ ಶ್ರೀಘನನೀಲ ಸಿದ್ದಪ್ಪಾಜಿ ದೇವಸ್ಥಾನದ ಆವರಣದಲ್ಲಿ, ದಿ10ರಂದು ಸಾಮೂಹಿಕ ಉಪನಯನ, 11ರಂದು ವಧು ವರರ ಶೀಘ್ರ ಕಲ್ಯಾಣಕ್ಕಾಗಿ ಉಚಿತ ಸದಸ್ಯತ್ವ ಹಾಗೂ ವಧುವರರ ಸ್ವಪರಿಚಯ ಹಾಗೂ 28ನೇ ವರ್ಷದ ಶ್ರೀಘನನೀಲ ಸಿದ್ದಪ್ಪಾಜಿ ಕಾರ್ತೀಕ ದೀಪೋತ್ಸವ ಕಾರ್ಯಕ್ರಮವು, ಆನೆಗುಂದಿ ಸಂಸ್ಥಾನ ಸರಸ್ವತೀಪೀಠದ ವಿಶ್ವಕರ್ಮ ಏಕದಂಡಿಗಿ ಮಠದ ಶ್ರೀದೊಡ್ಡೇಂದ್ರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ, ಶ್ರೀಘನನೀಲ ಸಿದ್ಧಪ್ಪಾಜಿ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ರಮೇಶಬಾಬು ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವು ಸಂಪೂರ್ಣ ಯಶಸ್ವಿಗೊಂಡಿತು ಎಂದು ಕಂಪ್ಲಿ ಪಟ್ಟಣದ ಶ್ರೀಮಂಜುನಾಥ ವರ್ಲ್ಡ್‌ ವಧುವರರ ಮಾಹಿತಿ ಕೇಂದ್ರದ ಸಂಸ್ಥಾಪಕ ಎಂ.ಮಂಜುನಾಥ ಹೇಳಿದರು. 

ಆನೆಗುಂದಿ ಸಂಸ್ಥಾನ ಸರಸ್ವತೀಪೀಠದ ಸುಲೇಪೇಟೆಯ ವಿಶ್ವಕರ್ಮ ಏಕದಂಡಿಗಿ ಮಠದ ಶ್ರೀದೊಡ್ಡೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿ, ಷೋಡಷ ಸಂಸ್ಕಾರಗಳಲ್ಲಿ ಉಪನಯನ ಸಂಸ್ಕಾರವು ಅತ್ಯಂತ ಪವಿತ್ರವಾಗಿದ್ದು, ಉಪನಯನ ಪಡೆದ ವಟುಗಳು ನಿತ್ಯ ಜೀವನದಲ್ಲಿ ಸಂಸ್ಕಾರನಿರತರಾಗಬೇಕು.ಎಂದರು. 

ಶ್ರೀಘನನೀಲ ಸಿದ್ಧಪ್ಪಾಜಿ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ರಮೇಶಬಾಬು ಇವರು ಅಧ್ಯಕ್ಷತೆವಹಿಸಿ ಮಾತನಾಡಿ, ವಿಶ್ವಕರ್ಮ ಸಮಾಜದ ಅಭಿವೃದ್ಧಿಗಾಗಿ ಅನುದಾನಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸುವಲ್ಲಿ ಸಮಾಜದ ಸಂಘಟನೆಗಳು ಮುಂದಾಗಬೇಕು ಎಂದರು. 

ಚಿಕ್ಕಲ್ಲೂರು ಶ್ರೀಘನನೀಲ ಸಿದ್ಧಪ್ಪಾಜಿ ದೇವಸ್ಥಾನದ ಕಾರ್ಯದರ್ಶಿ ಸಿದ್ಧಪ್ಪಾಜಿ ಮೈಸೂರು ಇವರು ಮಾತನಾಡಿ, ವಿಶ್ವಕರ್ಮ ಸಮಾಜದವರು ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಹಾಗೂ ಉಚಿತ ವಧುವರರ ನೇರ ಸಂದರ್ಶನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಲ್ಲಿ ಮುಂದಾಗಬೇಕು ಎಂದರು. 

ಆಧ್ಯಾತ್ಮಿಕ ಕಾರ್ಯಕ್ರಮಗಳ ಪೌರೋಹಿತ್ಯವನ್ನು ಜಿ.ಪಿ.ಜಗದೀಶಾಚಾರ್ ವಹಿಸಿದ್ದರು.. ತಿಟ್ಟಹಳ್ಳಿಯ ಶ್ರೀಕಾಳಿಕಾಂಬಾ ಮಹಿಳಾ ಮಂಡಳಿಯ ಪದಾಧಿಕಾರಿಗಳಾದ ಜಯಶ್ರೀ, ಪಾರ್ವತಮ್ಮ, ಮಾಯಾ, ಮಧುಶ್ರೀ, ಶಿಲ್ಪಾ, ಕಲಾವತಿ, ಚಂದ್ರಕಲಾ, ಸುಮಾ, ದೀಪಿಕಾ, ಉಷಾ, ಪ್ರಿಯಾಂಕ, ರೇಖಾ, ಮಮತಾ, ಪ್ರಮುಖರಾದ ನಾಗಲಿಂಗಮೂರ್ತಿ, ನಾಯಂಡಹಳ್ಳಿಯ ಕಾಳಿಕಾಂಬಾ ದೇವಸ್ಥಾನದ ಕಾರ್ಯದರ್ಶಿ ಕಾಂತರಾಜು, ತಿಟ್ಟಹಳ್ಳಿಯ ಶ್ರೀಘನನೀಲ ಸಿದ್ಧಪ್ಪಾಜಿ ದೇವಸ್ಥಾನದ ಸೇವಾ ಸಮಿತಿಯ ಪದಾಧಿಕಾರಿಗಳಾದ ಕಾಂತರಾಜು, ಲೋಕೇಶ್, ರಾಜಣ್ಣ, ಕುಮಾರ, ಷಣ್ಮುಖಮೂರ್ತಿ, ಪ್ರಭಾಕರ, ಕಂಪ್ಲಿ ಅಣ್ಣಿಗೇರಿ ವೀರಭದ್ರಾಚಾರಿ ಸೇರಿ ಅನೇಕರಿದ್ದರು .