ಕೆ.ಎಲ್.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯಗೆ ಫೌಂಡರ್ಸ ಡೇ ಕ್ರಿಕೇಟ್ ಕಪ್
Founder's Day Cricket Cup for KLE College of Arts and Commerce
ಗದಗ 13 : ಕೆ.ಎಲ್.ಇ ಸಂಸ್ಥೆಯ ಸಂಸ್ಥಾಪಕರ ದಿನದ ಪ್ರಯುಕ್ತ ಗದಗ ನಗರದ ಕೆ.ಎಲ್.ಇ ಅಂಗಸಂಸ್ಥೆಗಳು ಒಟ್ಟುಗೂಡಿ ಹಮ್ಮಿಕೊಂಡಿದ್ದ ‘ಫೌಂಡರ್ಸ ಡೇ ಕ್ರಿಕೇಟ್ ಕಪ್’ ಈ ಬಾರಿ ಕೆ.ಎಲ್.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪಾಲಾಗಿದೆ. ಅಂತಿಮ ಪೈನಲ್ ಪಂದ್ಯದಲ್ಲಿ ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯದ ‘ಬಿಕಾಂ ಬುಲ್ಸ್’ ತಂಡವನ್ನು ಎದುರಿಸಿದ ಸುಮಂತ್ ಗ್ರಾಮಪುರೋಹಿತ್ ನೇತೃತ್ವದ ‘ಕೆ.ಎಲ್.ಇ ಚಾಲೆಂಜರ್ಸ’ ತಂಡವು 47 ರನ್ ಗಳ ಅಂತರದಿಂದ ಅಮೋಘ ಜಯವನ್ನು ದಾಖಲಿಸಿತು. ‘ಕೆ.ಎಲ್.ಇ ಚಾಲೆಂಜರ್ಸ’ ತಂಡದ ಶರಣಬಸವ ದಮ್ಮೂರು ಒಟ್ಟು 03 ವಿಕೇಟ್ ಗಳಿಸಿ ಪಂದ್ಯಶ್ರೇಷ್ಟರೆನಿಸಿದರು. ಸರಣಿಶ್ರೇಷ್ಠರಾಗಿ ‘ಕೆ.ಎಲ್.ಇ ಚಾಲೆಂಜರ್ಸ’ ತಂಡದ ಮಣಿಕಂಠ ಗೌಡನಾಯ್ಕರ್ ಅವರು ಹೊರಹೊಮ್ಮಿದರು.
ಪಂದ್ಯಾವಳಿಯುದ್ದಕ್ಕೂ ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯದ ವಿವಿಧ ವಿಭಾಗಗಳು, ಎಸ್. ಎ. ಮಾನ್ವಿ ಕಾನೂನು ಮಹಾವಿದ್ಯಾಲಯ ಸೇರಿದಂತೆ ಒಟ್ಟು ಹತ್ತು ತಂಡಗಳು ಭಾಗವಹಿಸಿದ್ದವು. ವಿದ್ಯಾರ್ಥಿಗಳ ಸಾಧನೆಗೆ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎ.ಕೆ.ಮಠ, ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರೊ. ವೀರಣ್ಣ ಬಡಿಗೇರ ಮತ್ತು ಮಹಾವಿದ್ಯಾಲಯದ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 