ಅಂಜುಮನ್ ಪಬ್ಲಿಕ್ ಶಾಲಾ ಕಟ್ಟಡ ಕಾಮಗಾರಿ ಶಂಕುಸ್ಥಾಪನೆ

ಹೊಸಪೇಟೆ 06: ವಿಜಯನಗರ ಹೊಸಪೇಟೆಯ ರಾಮ ಟಾಕೀಸ್ ಹಿಂಭಾಗದಲ್ಲಿರುವ ಎಸ್ ಆರ್ ನಗರದಲ್ಲಿ ಅಂಜುಮನ್ ಖಿದ್ಮತೆ ಈ ಇಸ್ಲಾಂ ಕಮಿಟಿ ವತಿಯಿಂದ ಅಂಜುಮನ್ ಪಬ್ಲಿಕ್ ಶಾಲಾ ಕಟ್ಟಡ ಕಾಮಗಾರಿ ಶಂಕುಸ್ಥಾಪನೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಈ ಒಂದು ಶಂಕು ಸ್ಥಾಪನ  ಕಾರ್ಯಕ್ರಮವನ್ನು  ಉದ್ದೇಶಿಸಿ ಅಂಜುಮನ್ ಕಮಿಟಿಯ ಅಧ್ಯಕ್ಷರಾದ ಹೆಚ್‌.ಎನ್ ಮಹಮ್ಮದ್ ಇಮಾಮ್ ನಿಯಾಜಿ ರವರು ಮಾತನಾಡಿ ಈ ನಮ್ಮ ವಿಜಯನಗರ ಜಿಲ್ಲೆಯ ಹೊಸಪೇಟೆಯ ಅಂಜುಮನ್ ಕಿದ್ಮತೆ ಇಸ್ಲಾಂ ಕಮಿಟಿ ವತಿಯಿಂದ ಈ ಭಾಗದಲ್ಲಿ ಅಂಜುಮನ್ ಪ್ರಾಥಮಿಕ ಶಿಕ್ಷಣ ಶಾಲೆಯು ಅತ್ಯಂತ ಅವಶ್ಯಕತೆ ಇರುವುದರಿಂದ ಈ ಒಂದು ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಶಾಲಾ ಕಟ್ಟಡದ ಕಾಮಗಾರಿಯ ಶಂಕುಸ್ಥಾಪನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮ ಕೇವಲ ಅಂಜುಮನ್ ಸಂಸ್ಥೆಯಿಂದ ಪೂರ್ಣಗೊಂಡು ಯಶಸ್ವಿಯಾಗಲು ಸಾಧ್ಯವಿಲ್ಲ ಆದ್ದರಿಂದ ಈ ಒಂದು ಕಟ್ಟಡ ಕಾಮಗಾರಿಯು ಪೂರ್ಣಗೊಳಿಸಲು ದಾನಿಗಳು ಮುಂದೆ ಬಂದು ಸಹಕರಿಸಬೇಕಾಗಿ ಕಮಿಟಿ ವತಿಯಿಂದ ಮನವಿ ಮಾಡಿಕೊಳ್ಳುತ್ತೇನೆ ಎಂದರು.

ಅಂಜುಮನ್ ಕಮಿಟಿಯ ಉಪಾಧ್ಯಕ್ಷರಾದ ಎಮ್ ಫಿರೋಜ್ ಖಾನ್, ಕಾರ್ಯದರ್ಶಿಗಳಾದ ಎಮ್‌.ಡಿ. ಅಬೂಬಕ್ಕರ್, ಖಾಜಾಂಚಿಗಳಾದ ಜಿ. ಅನ್ಸರ್ ಭಾಷ, ಸಹಕಾರ್ಯದರ್ಶಿಗಳಾದ ಡಾ.ಎಮ್‌.ಡಿ. ದುರ್ವೇಶ್ ಮೈನುದ್ದಿನ್ ಹಾಗು ಸದ್ಯಸರುಗಳಾದ  ಕೋತ್ವಾಲ್ ಮೊಹಮ್ಮದ್ ಮೋಸಿನ್ ಅಡ್ವಕೇಟ್ ಸದ್ದಾಮ್ ಹುಸೇನ್, ಎಲ್‌. ಗುಲಾಮ್ ರಸೂಲ್ ವ್ಕಫ್ ಬೋರ್ಡ್‌ ಚೇರ್ಮನ್ ಗಳಾದ ದಾದಾಪೀರ್ ಬಾವ ಹೊಸಪೇಟೆಯ  ನಗರಸಭಾ ಸದಸ್ಯರಾದ ಮಳಗಿ ಅಸ್ಲಾಂ ಹಾಗೂ ಗೌಸ್, ಕಲಂದರ್, ಫಯಿರೋಜ್ ಸಾಬ್, ಅಮೀರ್,  ಡಾ. ಹಬೀಬುಲ್ಲ  ಹಾಗೂ ಮುಸ್ಲಿಂ ಸಮಾಜದ ಮುಖಂಡರುಗಳು ಉಪಸ್ಥಿತರಿದ್ದರು.