ಬ್ರಿಡ್ಜ್‌ ಕಂ ಬ್ಯಾರೇಜ್ ಕಾಮಗಾರಿಗೆ ಶಂಕುಸ್ಥಾಪನೆ

ಉಗರಗೋಳ 13:  ಕೃಷಿಭೂಮಿಗೆ ತೆರಳುವವರಿಗೆ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಮತ್ತು ಮಳೆನೀರು ಸಂಗ್ರಹಿಸಿ ಸುತ್ತಲಿನ ಪರಿಸರದಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಲು ಅನುಕೂಲವಾಗಲೆಂದು ಬ್ಯಾರೇಜ್ ಕಂ ಬ್ರಿಡ್ಜ್‌ ನಿರ್ಮಿಸಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಅಶ್ವತ ವೈದ್ಯ ಹೇಳಿದರು. 

ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದ ರೈತರ ಹೊಲಹಿಗದ್ದೆಗಳಿಗೆ ಸಂಪರ್ಕ ಕಲ್ಪಿಸುವ ಹನಶಿ ರಸ್ತೆಯ ಗದ್ನಾಳ ಹಳ್ಳದ ಬಳಿ 2.50 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಿರುವ ಬ್ರಿಡ್ಜ್‌ ಕಂ ಬ್ಯಾರೇಜ್ ಕಾಮಗಾರಿಗೆ ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. 

ಈ ಕಾಮಗಾರಿ ಮುಗಿದರೆ, ರೈತರಿಗೆ ತಮ್ಮ ಹೊಲಕ್ಕೆ ಹೋಗಲು ಅನುಕೂಲವಾಗಲಿದೆ. ಅಂತರ್ಜಲ ಮಟ್ಟ ವೃದ್ಧಿಗೆ ರೈತಾಪಿ ವರ್ಗಕ್ಕೆ ಅನುಕೂಲವಾಗುತ್ತದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.  

ರಾಮನಗೌಡ ತಿಪಾಶಿ, ಮಲ್ಲು ಜಕಾತಿ, ರೆಣ್ಕೀಗೌಡ ಪೊಲೇಶಿ, ನಿಂಗನಗೌಡ ಕಾಳಿಂಗೌಡ್ರ, ಸಿದ್ದನಗೌಡ ಗೂಡ್ರಾಶಿ, ಮಂಜುನಾಥ ಕಾಳಪ್ಪನವರ, ನಿಂಗನಗೌಡ ಹರಳಕಟ್ಟಿ, ಮಾರುತಿ ಶಿಂಧ, ನಾಗರಾಜ ಬಡೆಪ್ಪನವರ, ಅಭೀಷಕ ತಿಪರಾಶಿ, ರಾಜು ಅಂಗಡಿ, ಪರಸಪ್ಪ ಇಮ್ರಾಪೂರ, ಮಹಾಂತೇಶ ಮಲ್ಲಾಡ, ವಿಠಲ ಶಿದ್ದಕ್ಕನವರ, ಮಲಕಾಜಿ ಸಂಬರಗಿ, ಪ್ರಲ್ಹಾದ ಕೆಳಗಡೆ, ಪ್ರಕಾಶ ಲಮಾಣಿ, ಪಂಚಪ್ಪ ಬೋದಕ್ಕನವರ, ಗೊವಿಂದಗೌಡ ತಿಪರಾಶಿ, ಮಹೇಶ ಹನಶಿ, ದಿಲಾವರ ಬಾರಿಗಿಡದ, ಸಚಿಜು ಚನ್ನಪ್ಪಗೌಡ್ರ, ನೀಲಪ್ಪ ಶಿದ್ದಕ್ಕನವರ ಹಾಗೂ ಗ್ರಾಮಸ್ಥರು ಇದ್ದರು.