ಮಾಜಿ ಸಂಸದ ಹೆಚ್‌.ಜಿ ರಾಮುಲು ಕನಕಾಚಲ ಲಕ್ಷ್ಮೀನರಸಿಂಹ ದೇವಾಲಯಕ್ಕೆ ಭೇಟಿ

ಕನಕಗಿರಿ 05: ಐತಿಹಾಸಿಕ ಪುಣ್ಯಕ್ಷೇತ್ರ  ಕನಕಗಿರಿ ಶ್ರೀ ಕನಕಾಚಲ ಲಕ್ಷ್ಮೀನರಸಿಂಹ ದೇವರ  ದರ್ಶನ  ಪಡೆಯಲು  ಮಾಜಿ ಸಂಸದ ಹೆಚ್‌.ಜಿ.ರಾಮುಲು  ಕುಟುಂಬ ಸಮೇತ ಶನಿವಾರರಂದು ಭೇಟಿ ನೀಡಿ ದೇವರಿಗೆ ಅವರು ಕಾರ್ತೀಕ ದೀಪ ಹಚ್ಚಿ ವಿಶೇಷ ಸಂಕಲ್ಪ  ಪೂಜೆ ನೆರವೇರಿಸಿದರು.  

ಪೂಜಾ ಕಾರ್ಯಕ್ರಮ ನಂತರ ಅವರು, ಸುದ್ದಿಗಾರರೊಂದಿಗೆ  ಮಾತನಾಡಿ ಇತ್ತೀಚಿಗೆ  ಶ್ರೀ ಕನಕಾಚಲ ಲಕ್ಷ್ಮೀನರಸಿಂಹ ಸ್ವಾಮಿ ದೇವರು ನನ್ನ ಸ್ವಪ್ನದಲ್ಲಿ ಬಂದಿದ್ದರು, ಅದಕ್ಕೆ ನಾನು  ಆ ಭಗವಂತನ ಧರ್ಶನಕ್ಕೆ ಆಗಮಿಸಿದ್ದೇವೆ, ಕನಕಗಿರಿ ಅಂದರೆ ನನಗೆ ಬಹಳ ಪ್ರೀತಿ,ಇಲ್ಲಿಯ ಜನರೆಂದರೆ ನನಗೇ ತುಂಬಾ ಅಭಿಮಾನ.  ಕನಕಗಿರಿಯ ಜನ ಇಂದಿಗೂ ನನ್ನ ಮೇಲೆ ಪ್ರೀತಿ,  ವಿಶ್ವಾಸ, ಮತ್ತು ಅಭಿಮಾನ ಇಟ್ಟಿದ್ದಾರೆ, ಅವರು ಇಟ್ಟಂತ ಪ್ರೀತಿ ಅಭಿಮಾನ ನಾನೆಂದು ಮರೆಯುವುದಿಲ್ಲ ಯಂದರು ನಂತರ ತಮ್ಮ ಮನೋ ಚಿಂತನೆಯು ಕ್ಷೆತ್ರದ ರಾಜಕೀಯ ಕುರಿತಾಗಿ ಹಿಂದಿನ ಕಾಲದ ರಾಜಕೀಯಕ್ಕೂ ಈಗಿನ ರಾಜಕೀಯಕ್ಕೂ ತುಂಬಾ ವ್ಯತ್ಯಾಸವಿದೆ ಎಂದು ಹೇಳಿದರೂ. ಎಲ್ಲಾ ಪಕ್ಷದಲ್ಲಿಯೂ ಹಣ ಬಲ ಜಾತಿ ಬಲ ಇಂದಿನ ರಾಜಕೀಯ ನಡೆಯುತಿದೆ ಎಂದು ಬೇಸರ ವ್ಯಕ್ತ ಪಡಿಸಿದರು.  

ಮಾಜಿ ಸಚಿವರಾದ ಶಿವರಾಜ್ ತಂಗಡಿಗಿ ಅವರ ಅವಧಿಯಲ್ಲಿ ಕೆರೆ ತುಂಬಿಸುವ ಯೋಜನೆಗೆ ಮೆಚ್ಚುಗೆ ವೆಕ್ತ ಪಡಿಸಿದರು  

ಈ ಸಂದರ್ಭದಲ್ಲಿ ದುರ್ಗಾ ದಾಸ್  ಯಾದವ್ ಸ್ವಾಗತ ಕೋರಿದರು ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ಗಂಗಾಧರ್ ಸ್ವಾಮಿ, ಮಾಜಿ ಜಿಲ್ಲಾ ಪಂಚಾಯತ್ ಸದ್ಯಸರುಗಳಾದ, ಹನುಮೇಶ್ ನಾಯಕ,  ಲಕ್ಷ್ಮಮ್ಮ ನೀರಲೂಟಿ, ಪ್ರಮುಖರಾದ ಸಿದ್ದಪ್ಪ ನೀರಲೂಟಿ,ರೆಡ್ಡಿ ಶ್ರೀನಿವಾಸ್, ಪಟ್ಟಣ ಪಂಚಾಯಿತಿಯ ಸದಸ್ಯರಾದ ನೂರಸಾಬ್ ಗಡ್ಡಿಗಾಲ್, ಕಂಠಿ ನಾಯಕ,ಪ್ರಮುಖರಾದ ಮರಿಸ್ವಾಮಿ ಯಾದವ್, ವೆಂಕಣ್ಣ ತೊಂಡಿಯಾಳ್,  ಪಾಶ ಖಾನ್, ಚೇತನ್  ಯಾದವ್, ರಂಗಣ್ಣ ಕುರುಬರ,ಕನಕರಡ್ಡಿ, ವೆಂಕಟೇಶ್, ಖಾದರ್ ಬಾಷಾ  ಮತ್ತು ಇತರ ಮುಖಂಡರು ಉಪಸ್ಥಿತರಿದ್ದರು.