ಭೀಮಾ ನದಿಗೆ ನೀರು ಹರಿಸಲು ಮಾಜಿ ಶಾಸಕರಿಂದ ಪ್ರತಿಭಟನೆ

ಭೀಮಾ ನದಿಗೆ ನೀರು ಹರಿಸಲು ಮಾಜಿ ಶಾಸಕರಿಂದ ಪ್ರತಿಭಟನೆ Former MLA protests for release of water into Bhima River

ಲೋಕದರ್ಶನ ವರದಿ  

ಇಂಡಿ 15: ಕಳೆದ ತಿಂಗಳಿಂದ ತಾಲೂಕಿನಲ್ಲಿ ಮಳೆ ಇಲ್ಲ. ಹೀಗಾಗಿ ಭೀಮಾ ತೀರದ ಹಳ್ಳಿಗಳಿಗೆ ಕುಡಿಯುವ ನೀರಿಗಾಗಿ ನೀರು ಹರಿಸಲು ಜಿಲ್ಲಾಡಳಿತ ಮಹಾರಾಷ್ಟ ಸರಕಾರಕ್ಕೆ ಒತ್ತಾಯಿಸಬೇಕೆಂದು ಆಗ್ರಹಿಸಿ ಇಂಡಿಯ ಮಾಜಿ ಶಾಸಕ ರವಿಕಾಂತ ಪಾಟೀಲರು ಆಡಳಿತಸೌಧದ ಎದುರು ಪ್ರತಿಭಟನೆ ನಡೆಸಿದರು.  

 ಅದಲ್ಲದೆ ಕೃಷ್ಣಾ ಕಾಲುವೆಗೆ ಒಂದು ವರೆ ಟಿ.ಎಂ.ಸಿ ನೀರು ಬಿಟ್ಟಿದ್ದು ಇನ್ನೂ ಹೆಚ್ಚಿನ ನೀರು ಬಿಡಿಸಿ ಭೀಮಾ ನದಿಗೆ ಹರಿಸಿ ಗ್ರಾಮಸ್ಥರಿಗೆ ಅನುಕೂಲಮಾಡಬೇಕು ಎಂದರು.ತಾಲೂಕಿನಲ್ಲಿ ರೈತರು ಮಳೆಯಿಲ್ಲದೆ ಕಂಗಾಲಾಗಿದ್ದಾರೆ. ಬಿತ್ತನೆ ಸರಿಯಾಗಿ ಆಗಿಲ್ಲ, ಬರಗಾಲದ ಛಾಯೆ ಇದೆ. ಆದ್ದರಿಂದ ರೈತರಿಗೆ ಅನುಕೂಲವಾಗಲು ತಾಲುಕು ಬರಗಾಲ ಪ್ರದೇಶವೆಂದು ಸಾರಬೇಕು ಎಂದು ಆಗ್ರಹಿಸಿದರು. 

ಅಣ್ಣುಗೌಡ ಪಾಟೀಲ, ವಿರುಪಾಕ್ಷಿ ಹಿರೇಮಠ, ಜಗನ್ನಾಥ ಇಂಡಿ, ಬಾಳು ಗಣೋರೆ, ಶಂಕರಗೌಡ ಬಿರಾದಾರ, ಮಲ್ಲಿಕಾರ್ಜುನ ಶಿವೂರ, ಸಿಕಂದರ ಬೋರಾಮಣಿ, ಮಹಾದೇವ ಗುಡ್ಡೊಡಗಿ, ಕಾಂತು ಮಾಶ್ಯಾಳ, ಕಲ್ಲಪ್ಪ ಘಂಟಿ, ಬುಡ್ಡುಸಾಬ ಹೈದರ, ಜಗದೀಶ ಬಗಲಿ, ಈರಣ್ಣ ಡಾಂಗಿ, ಮತ್ತಪ್ಪ ಪೂಜಾರಿ, ಷಣ್ಮುಖ ಲಚ್ಯಾಣ ಮತ್ತಿತರಿದ್ದರು. ಶಿರಸ್ತೆದಾರ ಎಸ್‌.ಆರ್‌.ನುಜಗೊಂಡ ಮನವಿ ಸ್ವೀಕರಿಸಿದರು.