ಜಾತಿ ಮತ ಪಂಥ ಭೇದ ಮರೆತು ನಿಂತು ಎಲ್ಲ ಧರ್ಮೀಯರಿಗೆ ಆದಿ ಗುರು ರೇಣುಕಾಚಾರ್ಯರು
Forgetting caste, creed, and creed, Renukacharya is the first Guru for all religions
ಯರಗಟ್ಟಿ 01: ಪಟ್ಟಣದ ತಹಶೀಲ್ದಾರ ಕಚೇರಿ ಸಭಾಂಗಣದಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮ ಉದ್ದೇಶಿಸಿ ತಹಶೀಲ್ದಾರ ಎಮ್ ವ್ಹಿ ಗುಂಡಪ್ಪಗೋಳ ಮಾತನಾಡಿ, ಜಗದ್ಗುರು ರೇಣುಕಾಚಾರ್ಯರು ಜಾತಿ ಮತ ಪಂಥ ಭೇದ ಎಲ್ಲವನ್ನು ಮರೆತು ನಿಂತು ಎಲ್ಲ ಧರ್ಮೀಯರಿಗೆ ಆದಿ ಗುರುವಾಗಿರುವರು ಎಂದರು.ಸಮಾಜದ ಹಿರಿಯರಾದ ಕುಮಾರ ಹಿರೇಮಠ ಮಾತನಾಡಿ, ಜಗದ್ಗುರು ರೇಣುಕಾಚಾರ್ಯರು 18 ಪಂಗಡಗಳಿಗೆ ಜಗದ್ಗುರು ವಾಗಿದ್ದು ಮಾನವ ಧರ್ಮ ಒಂದೇ ಎಂದು ಸಾರುವ ಮೂಲಕ ಎಲ್ಲಾ ಧರ್ಮೀಯರಿಗೆ ಮಂತ್ರೋಪದೇಶ ಪಠಿಸಲು ಅವಕಾಶ ನೀಡಿದವರು ಜಗದ್ಗುರು ರೇಣುಕಾಚಾರ್ಯರು ಎಂದು ಪ್ರತಿಪಾದಿಸಿದರು. ಈ ವೇಳೆ ಶಾಂತಯ್ಯ ಹಿರೇಮಠ, ದೀಪಕ ತೋರಗಲ್ಲಮಠ, ಈರಯ್ಯ ಹಿರೇಮಠ, ರುದ್ರಯ್ಯ ಹಿರೇಮಠ, ಈರಯ್ಯ ಗೌಡರ, ಜಗದೀಶ ಹೊಸಮಠ, ಈರಯ್ಯ ಮಠಪತಿ, ಗುರುಪಾದಯ್ಯ ಮಾಸ್ತಮರಡಿ, ಪ್ರಸನ್ನಶಾಸ್ತ್ರಿ ಹಿರೇಮಠ, ಮಲ್ಲಿಕಾರ್ಜುನ ಹಿರೇಮಠ, ವಿನಯಕುಮಾರ ಹಿರೇಮಠ, ಬಾಳಯ್ಯ ಮಾಸ್ತಮರಡಿ, ಗುರುಪುತ್ರಯ್ಯ ಹೂಗಾರ, ಬಸಯ್ಯ ಪತ್ರಿಗಿಡದ, ಈರಣ್ಣಾ ಮಠಪತಿ, ಈರಣ್ಣಾ ಪೂಜೇರ, ಬಸಯ್ಯ ಹಿರೇಮಠ, ಶಿವಾನಂದ ಕರ್ಜಿಗಿಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 