ವೈದ್ಯರು ಉತ್ತಮ ಸೇವೆ ನೀಡಲು, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುವುದು ಅವಶ್ಯಕ: ಡಾ. ಚಂದ್ರಶೇಖರ ಹಳಿಂಗಳೆ..!
For doctors to provide good service, it is necessary to maintain mental health: Dr. Chandrashekar Ha
ಲೋಕದರ್ಶನ ವರದಿ
ಕಾಗವಾಡ ೧೬: ರೋಗಿಗಳ ಸೇವೆಯಲ್ಲಿ ನಿರತರಾಗಿರುವ ವೈದ್ಯರು ಅನೇಕ ಬಾರಿ ತಮ್ಮದೇ ಆದ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಕಡೆ ನಿರ್ಲಕ್ಷ್ಯ ತೋರುತ್ತಾರೆ. ಒತ್ತಡ ನಿರ್ವಹಣೆ ಕೇವಲ ವೈಯಕ್ತಿಕ ಅಗತ್ಯವಲ್ಲ. ಬದಲಾಗಿ ಉತ್ತಮ ಆರೋಗ್ಯ ಸೇವೆ ನೀಡಲು ಪೂರಕವಾಗಿದೆ ಎಂದು ಮಿರಜ ಪಟ್ಟಣದ ನಿರ್ಮಲ ಆಸ್ಪತ್ರೆ, ವ್ಯಸನಮುಕ್ತಿ ಮತ್ತು ಪುನರವಸತಿ ಕೇಂದ್ರದ ಖ್ಯಾತ ಮನೋವೈದ್ಯ ಡಾ. ಚಂದ್ರಶೇಖರ ಹಳಿಂಗಳಿ ಅಭಿಪ್ರಾಯ ಪಟ್ಟಿದ್ದಾರೆ.
ಅವರು, ಶನಿವಾರ ದಿ. ೧೩ ರಂದು ಅಥಣಿ ಪಟ್ಟಣದ ಸಾಹುಕಾರ ಸಭಾಭವನದಲ್ಲಿ ಆಯುಷ್ ಫೆಡರೇಷನ್ ಆಫ್ ಇಂಡಿಯಾ, ಹಾಗೂ ಮಿರಜ್‌ನ ನಿರ್ಮಲ ಆಸ್ಪತ್ರೆ ಮತ್ತು ವ್ಯಸನಮುಕ್ತಿ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವೈದ್ಯರಲ್ಲಿ ಒತ್ತಡ ನಿರ್ವಹಣೆ ಕುರಿತು ನಡೆದ ಶಿಬಿರದಲ್ಲ್ಲಿ ಮಾತನಾಡುತ್ತಿದ್ದರು. ವೈದ್ಯಕೀಯ ವೃತ್ತಿ ಅತ್ಯಂತ ಜವಾಬ್ದಾರಿಯುತವಾದ ವೃತ್ತಿಯಾಗಿದ್ದು, ರೋಗಿಗಳ ನಿರೀಕ್ಷೆಗಳು, ನಿರಂತರ ಕೆಲಸದ ಅವಧಿ, ತುರ್ತು ಪರಿಸ್ಥಿತಿಗಳು, ನಿರ್ಧಾರ ತೆಗೆದುಕೊಳ್ಳುವ ಹಾಗೂ ಹೆಚ್ಚುತ್ತಿರುವ ವೃತ್ತಿಪರ ಜವಾಬ್ದಾರಿಗಳಿಂದ ವೈದ್ಯರಲ್ಲಿ ಒತ್ತಡದ ಪ್ರಮಾಣ ಹೆಚ್ಚುತ್ತಿದೆ. ದೀರ್ಘಕಾಲದ ಒತ್ತಡ ಮಾನಸಿಕ, ದೈಹಿಕ ಆರೋಗ್ಯ, ಕೌಟುಂಬಿಕ ಜೀವನ ಹಾಗೂ ವೃತ್ತಿಪರ ಕಾರ್ಯಕ್ಷಮತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಒತ್ತಡವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ನಿಯಮಿತ ವ್ಯಾಯಾಮ, ಯೋಗ, ಧ್ಯಾನ, ಸಕಾರಾತ್ಮಕ ಚಿಂತನೆ, ಸಮಯದ ಸಮರ್ಪಕ ನಿರ್ವಹಣೆ, ಸಾಕಷ್ಟು ನಿದ್ದೆ, ಸಮತೋಲಿತ ಜೀವನಶೈಲಿ ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೈದ್ಯರು ಒತ್ತಡ ನಿರ್ವಹಣೆಗೆ ಸಂಬAಧಿಸಿದAತೆ ಅನೇಕ ಪ್ರಶ್ನೆಗಳನ್ನು ಕೇಳಿ, ತಮ್ಮ ಸಂದೇಹಗಳನ್ನು ನಿವಾರಿಸಿಕೊಂಡರು.
ಈ ವೇಳೆ ಆಯುಷ್ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷ ಡಾ. ಸತೀಶ ಮುಗ್ಗನ್ನವರ, ಉಪಾಧ್ಯಕ್ಷ ಡಾ. ಮುರಾರಿ ಬನಾಜ, ಕಾರ್ಯದರ್ಶಿ ಡಾ. ಸಂಜಯ ಪೂಜಾರ ಸೇರಿದಂತೆ ಎಲ್ಲಾ ಪದಾಧಿಕಾರಿಗಳು, ಗಣ್ಯರು ಮತ್ತು ನಿರ್ಮಲ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 