ಐದು ಆಚರಣೆಗಳು ಮುಸಲ್ಮಾನರಿಗೆ ಕಡ್ಡಾಯ: ಮುಫ್ತಿ ಆರಿಫಸಾಹಬ್
ಮಹಾಲಿಂಗಪೂರ : ಇಸ್ಲಾಂ ಧರ್ಮದ ಅನೇಕ ತತ್ವ ಸಿದ್ಧಾಂತಗಳಲ್ಲಿ ಪ್ರಮುಖವಾಗಿ ಈಮಾನ್, ನಮಾಜ್, ರೋಜಾ, ಸದಕಾ, ಹಜ್ಜ ಈ ಐದು ಆಚರಣೆಗಳು ಮುಸಲ್ಮಾನರಿಗೆ ಕಡ್ಡಾಯವಾಗಿವೆ ಎಂದು ಗದಗ ಮುಫ್ತಿ ಆರಿಫಸಾಹಬ್ ಹೇಳಿದರು.
ಸ್ಥಳೀಯ ಕೆಂಗೇರಿಮಡ್ಡಿ ಹತ್ತಿರವಿರುವ ಶಾದಿ ಮಹಲ್ ನಲ್ಲಿ ಬೈತುಲ್ ಮಾಮುರ್ ಮಸ್ಜಿದ್ ಜಮಾತ ವತಿಯಿಂದ ಪವಿತ್ರ ಹಜ್ಜ ಯಾತ್ರೆ ಕೈಗೊಂಡ ಮಹನಿಯರಿಗೆ ಜುಲೈ 01 ರಂದು ಸೋಮವಾರ ಪುಣ್ಯ ಸನ್ಮಾನ್ ಕಾರ್ಯಕ್ರಮ ಹಾಗೂ ಒಂದು ದಿನದ ತರಬೇತಿ ಕಾರ್ಯಕ್ರಮ ಹಮ್ಮಿಕ್ಕೊಳ್ಳಲಾಗಿತ್ತು. ಈ ಸಂಧರ್ಭದಲ್ಲಿ ತರಬೇತಿಯನ್ನು ನೀಡಿ ಅವರು ಮಾತನಾಡುತ್ತಾ ಐದು ಪ್ರಮುಖ ಆಚರಣೆಗಳಲ್ಲಿ ಹಜ್ಜ್ ಯಾತ್ರೆ ಕೈಗೊಳ್ಳುವುದು ಉಳ್ಳವರಿಗೆ ಕಡ್ಡಾಯವಾಗಿದೆ. ಸ್ಥಿತಿವಂತರಲ್ಲದವರಿಗೆ ಉಳ್ಳವರು ಪುಣ್ಯ ಪ್ರಾಪ್ತಿ ಮಾಡಿಕ್ಕೊಳ್ಳುವ ಸಲುವಾಗಿ ಹಜ್ಜ್ ಯಾತ್ರೆಯನ್ನು ಮಾಡಿಸಬಹುದು ಎಂದರು.
ನಗರದಿಂದ, ಪುರುಷರು,ಮಹಿಳೆಯರು ಸೇರಿ ಹದಿನೇಳು ಜನ ಹಜ್ಜ ಯಾತ್ರೆ ಕೈಗೊಳ್ಳಲಿದ್ದು ಇದೆ ಸಮಯದಲ್ಲಿ ಎಲ್ಲರನ್ನೂ ಸನ್ಮಾನಿಸಿ ಗೌರವಿಸಲಾಯಿತು. ಯಾತ್ರೆಗೆ ಶುಭ ಕೋರಿ ಸಾಮೂಹಿಕವಾಗಿ ಸೃಷ್ಟಿಕರ್ತನಲ್ಲಿ ದುವಾ (ಪ್ರಾರ್ಥನೆ) ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಹಜ್ಜ್ ಯಾತ್ರೆಗೆ ತೆರಳುವ ರಸೂಲ್ ಸಾಬ್. ಚಿಕ್ಕೊಡಿ, ರಾಜೇಸಾಬ್ ಐನಾಪುರ,ರಫಿಕ್ ಜಂಗಿ, ಇಲಾಯಿ ಝಾರೆ, ಐನೂದ್ದಿನ್ ಪಣಿಬಂಧ (ಬನಹಟ್ಟಿ), ದಾದಾಪೀರ್ ಪಣಿಬಂದ( ಬನಹಟ್ಟಿ),ಮೌಲಾಸಾಬ್ ಐನಾಪುರ ಹಾಗೂ ಮಹಿಳೆಯರು, ಸಮಾಜ ಗಣ್ಯರಾದ ಹಾಜಿ ಗಫೂರ್ ಸಾಬ್ ಯಕ್ಸಂಬಿ, ದಾವಲಸಾಬ್ ನಗಾಚರ್ಿ, ಅಬ್ದುಲ್ ಗಫೂರ್ ಆಲ್ಗೂರ್, ಮೇಹಬೂಬ್ ನಾಗನೂರ್,ಮೌಲಾಲಿ ಮೋಮಿನ್, ಮೌ.ಸಮೀರ್ ಬಿಸ್ತಿ, ನಜೀರ್ ಅತ್ತಾರ್, ಉಪಸ್ಥಿತರಿದ್ದರು.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 