ಉಡಿ ತುಂಬುವುದು ದೇಶದ ಸಂಸ್ಕೃತಿ: ಡಾ.ಸಂಧ್ಯಾ ಮನಗೂಳಿ
Filling the Udi is the culture of the country: Dr. Sandhya Managuli
ದೇವರಹಿಪ್ಪರಗಿ 05: ಉಡಿ ತುಂಬುವ ಪದ್ಧತಿ ಭಾರತೀಯ ಸಂಸ್ಕೃತಿಯ ಪ್ರತೀಕ.ಇಂತಹ ಸಂಪ್ರದಾಯವನ್ನು ಇಂದಿಗೂ ಪಾಲಿಸಿಕೊಂಡು ಬಂದಿರುವುದು ಹೆಮ್ಮೆಯ ಸಂಗತಿ. ತಾಯಂದಿರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ನೈತಿಕತೆ ಮೈಗೂಡಿಸಿಕೊಂಡರೆ ಅತ್ಯುತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಸಿಂದಗಿ ಖ್ಯಾತ ವೈದ್ಯರಾದ ಡಾ.ಸಂಧ್ಯಾ ಶಾಂತವೀರ ಮನಗೂಳಿ ಹೇಳಿದರು.
ತಾಲ್ಲೂಕಿನ ಕೊಂಡಗೂಳಿ ಗ್ರಾಮದ ಶ್ರೀ ಸಿದ್ಧಾರೂಢರ ಜಾತ್ರಾ ಮಹೋತ್ಸವ ಹಾಗೂ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಕುಟುಂಬವು ಸಿದ್ಧಾರೂಢರ ಭಕ್ತರು, ಶ್ರೀಗಳ ಆಜ್ಞೆ ಪಾಲಿಸುತ್ತಾ ಬಂದಿದ್ದೇವೆ. ಗ್ರಾಮದಲ್ಲಿ ಮಹಿಳೆಯರಿಗೆ ಉಡಿ ತುಂಬುವ ಮೂಲಕ ನಮ್ಮ ಸಂಪ್ರದಾಯ ಹಾಗೂ ಅದರ ಮಹತ್ವದ ಬಗ್ಗೆ ಮಹಿಳೆಯರಿಗೆ ಅರಿವು, ಜಾಗೃತಿ ಮೂಡಿಸುವ ಕೆಲಸ ಉತ್ತಮವಾಗಿದೆ. ಮಹಿಳೆಯರನ್ನು ಒಗ್ಗೂಡಿಸುವದರ ಜೊತೆ ದೇವರ ಧ್ಯಾನ ಹಾಗೂ ಬದುಕಿನ ಜಂಜಾಟದ ನಡು ನಡುವೆ ಎಲ್ಲರೂ ಒಟ್ಟಿಗೆ ಸೇರಿ ಆಚರಿಸುವ ಕೆಲಸ ಅತ್ಯಂತ ಪುಣ್ಯದ ಕಾಯಕವಾಗಿದೆ ಎಂದು ಹೇಳಿದರು.ಕಾರ್ಯಕ್ರಮದ ಸಾನ್ನಿಧ್ಯವನ್ನು ಬೀದರ ಹಾಗೂ ಕೊಂಡಗೂಳಿ ಸಿದ್ಧಾರೂಢ ಮಠದ ಪ.ಪಂ.ಸೊ.ಬ್ರ ಶ್ರೀ ಶಂಕ್ರಾನಂದ ಮಹಾಸ್ವಾಮಿಗಳು ಮಾತನಾಡಿ ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಪೂಜ್ಯನೀಯ ಸ್ಥಾನ ನೀಡಲಾಗಿದೆ. ನಮ್ಮ ದೇಶದಲ್ಲಿರುವಷ್ಟು ಮಹಿಳಾ ಪ್ರಧಾನ (ದೇವತೆಗಳ) ದೇವಾಲಯಗಳು ವಿಶ್ವದ ಯಾವುದೇ ರಾಷ್ಟ್ರಗಳಲ್ಲಿಲ್ಲ ಎಂದರು.
ಸಾನಿಧ್ಯವನ್ನು ಕೊಕಟನೂರ ಗದ್ದುಗಿ ಮಠದ ಶ್ರೀ ಮಡಿವಾಳೇಶ್ವರ ಸ್ವಾಮಿಗಳು ವಹಿಸಿದ್ದರು.ಉಡಿ ತುಂಬುವ ಕಾರ್ಯಕ್ರಮವನ್ನು ವೇ.ಮು ಮಹಾಂತಯ್ಯ ಹಿರೇಮಠ ಅವರು ನೆರವೇರಿಸಿದರು.ಪ್ರವಚನಕಾರರಾಗಿ ಚಿಕ್ಕರೂಗಿ ಗ್ರಾಮದ ಈರಣ್ಣ ಶಾಸ್ತ್ರಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಗ್ರಾಮದ ಪ್ರಮುಖರು, ಗಣ್ಯರು ಹಾಗೂ ಶ್ರೀಮಠದ ಭಕ್ತರು ಉಪಸ್ಥಿತರಿದ್ದರು.
*ಮಹಿಳೆಯರಿಂದ ರಥೋತ್ಸವ*
ದೇವರಹಿಪ್ಪರಗಿ ತಾಲ್ಲೂಕಿನ ಕೊಂಡಗೂಳಿ ಗ್ರಾಮದಲ್ಲಿ ನಡೆಯುವ ಜಾತ್ರೆಯಲ್ಲಿ ಮಹಿಳೆಯರಿಗೆ ಹಚ್ಚಿನ ಪ್ರಾತಿನಿಧ್ಯ ನೀಡಲಾಗುತ್ತದೆ. ಈ ಜಾತ್ರೆಯಲ್ಲಿ ಮಹಿಳೆರದ್ದೇ ಮೇಲುಗೈ. ಮಹಿಳೆಯರೇ ಈ ಜಾತ್ರೆಯ ಕೇಂದ್ರ ಬಿಂದು. ಸಾಮಾನ್ಯವಾಗಿ ಯಾವುದೇ ಜಾತ್ರೆಗಳು ನಡೆದರೆ ಅಲ್ಲಿನ ಬಹುತೇಕ ಜವಾಬ್ದಾರಿಗಳು ಗಂಡಸರೇ ವಹಿಸಿಕೊಂಡಿರುತ್ತಾರೆ. ಆದರೆ, ಶ್ರೀ ಸಿದ್ದಾರೂಢರ ಮಠದ ಜಾತ್ರೆಯನ್ನ ಮಹಿಳೆಯರು ಮಾಡುತ್ತಾರೆ. ಇಲ್ಲಿ ಪುರುಷರಿಗೆ ಅವಕಾಶವೇ ಇರುವುದಿಲ್ಲ. ಸುಮಾರು 10 ವರ್ಷಗಳಿಂದಲೂ ಜಾತ್ರೆಯಲ್ಲಿ ಮಹಿಳೆಯರೆ ರಥ ಎಳೆಯುವವರು. ಅಜ್ಜನ ಜಾತ್ರೆಯಲ್ಲಿ ಮಹಿಳೆಯರು ರಥೋತ್ಸವವನ್ನು ಸಂಭ್ರಮದಿಂದ ಎಳೆಯುವ ಮೂಲಕ ತಮ್ಮ ಇಷ್ಟಾರ್ಥಗಳು ಬೇಗ ಸಿದ್ದಿಸಲಿ ಎಂದು ವಿಶೇಷ ಪೂಜೆಗಳನ್ನು ಸಲ್ಲಿಸುತ್ತಾರೆ. ಮಂಗಳವಾರ ಬೆಳಗ್ಗೆಯಿಂದಲೇ ಜಾತ್ರೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ನಡೆದ ಮಹಿಳೆಯರ ಕುಂಭಮೇಳ, ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ದೂರಿಯಾಗಿ ನಡೆದು ಶ್ರೀಮಠಕ್ಕೆ ಬಂದು ತಲುಪಿತು. ನಂತರ ಸಾಯಂಕಾಲ ನೂರಾರು ಮಹಿಳೆಯರು ಕೂಡಿ ಎಳೆಯುವ ರಥೋತ್ಸವ ನೋಡುವುದೇ ಸುಂದರ. ರಥೋತ್ಸವ ನೋಡಲು ಶ್ರೀಗಳು ಗ್ರಾಮದ ಪ್ರಮುಖರು, ಗಣ್ಯರು, ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಮಹಿಳೆಯರು ಭಾಗವಹಿಸಿದ್ದರು.
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 