ಪ್ರತಿಭಾವಂತರಿಗೆ ಸನ್ಮಾನ

Felicitation to the talented

ಯಮಕನಮರಡಿ, 06 : ಕನ್ನಡ ಸಾಹಿತ್ಯ ಪರಿಷತ್ತು ಹುಕ್ಕೇರಿ ಇವರಿಂದ ಕಸಾ ಪರಿಷತ್ತಿನ 111 ನೇ ಸಂಸ್ಥಾಪನಾ ದಿನಾಚರಣೆಯನ್ನು ಸ್ಥಳೀಯ ಸಿಇಎಸ್ ಹೈಸ್ಕೂಲಿನ ಸಭಾಂಗಣದಲ್ಲಿ ಆಚರಿಸಲಾಯಿತು. ಈ ಸಮಾರಂಭದಲ್ಲಿ ಶಿವಾನಂದ ಮಠಪತಿ ಇವರು ಕನ್ನಡ ಮನಸ್ಸುಗಳ ಮೇಲೆ ಕನ್ನಡ ಸಾಹಿತ್ಯ ಬೀರಿದ ಪ್ರಭಾವ ಈ ವಿಷಯ ಕುರಿತು ಉಪನ್ಯಾಸ ನೀಡಿದರು.  

ಕನ್ನಡ ಹೃದಯದ ಭಾಷೆಯಾಗಿದೆ ಭಾಷೆಯನ್ನು ಕಟ್ಟುವಲ್ಲಿ ಬೆಳಸುವಲ್ಲಿ ಸಂರಕ್ಷಿಸುವಲ್ಲಿ ಜಾಗೃತಿಯನ್ನು ಮೂಡಿಸುವಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರು ಸರ್ ವಿಶ್ವೇಶ್ವರಯ್ಯ ಅವರು ಸರ್ ಮಿರ್ಜಾ ಇಸ್ಮಾಯಿಲ್ ಅವರು ಹುಕ್ಕೆರಿ ತಾಲೂಕಿನ ಬಸವಪ್ರಭು, ರಾಜಾ ಲಖಮನಗೌಡ ದೇಸಾಯಿ ಅವರುಇನ್ನು ಅನೇಕ ಮಹನೀಯರು 110 ವರ್ಷಗಳ ಹಿಂದೆ ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದರು ಈಗ ಹೆಮ್ಮರವಾಗಿ ಬೆಳದಿದೆ ಎಂದು ಅಭಿಪ್ರಾಯ ಪಟ್ಟರು.  

ಸಮಾರಂಭದ ಕಾರ್ಯಕ್ರಮದ ಉದ್ಘಾಟನೆಯನ್ನು ಎಸ್ ವಾಯ್ ಬನ್ನಿಗಿಡದ ಮುಖ್ಯಾಪಾದ್ಯಾಯಕರು ಸಿಇಎಸ್ ಹೈಸ್ಕೂಲ ಯಮಕನಮರಡಿ ಇವರಿಂದ ಜರುಗಿತು. ಸಮಾರಮಭದ ಅಧ್ಯಕ್ಷತೆಯನ್ನು ಪ್ರಕಾಶ ಅವಲಕ್ಕಿ ವಹಿಸಿದರು ಮುಖ್ಯ ಅತಿಥಿಗಳಾಗಿ ಎಂಎಸ್‌ಮಳ್ಳೋಳಿ, ಬಿಬಿ ಅಕ್ಕತಂಗೆರಹಾಳ, ಅರ್ಜುನ ಮಾಳಗಿ ಕುಮಾರಿ. ಎಕೆ ಹಡೆದಾರ ಅಗಮಿಸಿದ್ದರು. 

ಈ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್ ಸಿಯಲ್ಲಿ 98.40ಅ ಅಂಕಗಳನ್ನು ಗಳಿಸಿದ ವಿಶಾಲಾಕ್ಷಿ ಶೇಲಾರ ಹಾಗೂ ಪಿಯುಸಿ ದ್ವೀತಿಯ ವರ್ಷದಲ್ಲಿ ಹೆಚ್ಚು ಅಂಕ ಗಳಿಸಿದ 94ಅ ಕುಮಾರಿ ಸಹನಾ ಕಮತಿ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಾದ ಭುವನ ಮಾರಾ​‍್ಯಳಿ, ಸೌಂದರ್ಯ ತೇಲಿ ಈ ಎಲ್ಲ ವಿದ್ಯಾರ್ಥಿಗಳನ್ನು ಕಸಾಪ ಹುಕ್ಕೇರಿ ಘಟಕದ ಪರವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಎಸ್‌ಕೆ ಹುಡೆದಾರ ನಿರ್ವಹಿಸಿದರು.