ಬೆಟಗೇರಿಯ ರಾಜಪೂತ ಗಲ್ಲಿ ಬಡಾವಣೆಯ ನಾಗರಿಕರಿಂದ ಶಕುಂತಲಾ ಅಕ್ಕಿಯವರಿಗೆ ಸನ್ಮಾನ
Felicitation of Shakuntala Akki by the residents of the Rajput Galli locality in Betageri
ಬೆಟಗೇರಿ, ಸೆ. 2: ಅವಳಿ ನಗರ ಗದಗ-ಬೆಟಗೇರಿ ನಗರಸಭೆಯ 4ನೇ ವಾರ್ಡ್ ವ್ಯಾಪ್ತಿಯ ರಾಜಪೂತ ಗಲ್ಲಿ ಬಡಾವಣೆಯ ನಾಗರಿಕರ ವತಿಯಿಂದ ವಾರ್ಡ್ ಜನಸ್ನೇಹಿ ನಗರಸಭಾ ಸದಸ್ಯೆ ಶ್ರೀಮತಿ ಶಕುಂತಲಾ ಹೊಳೆಬಸಪ್ಪ ಅಕ್ಕಿಯವರಿಗೆ ಇತ್ತೀಚೆಗೆ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೂರಜ್ಸಿಂಗ್ ಜಮಾದಾರ ಮಾತನಾಡಿ, ಬಡಾವಣೆಯ ನಾಗರಿಕರ ಬಹುದಿನಗಳ ಬೇಡಿಕೆಯಾದ ಸುಸಜ್ಜಿತ ರಸ್ತೆ, ಗಟಾರ್, ಒಳಚರಂಡಿ ಹಾಗೂ ದೈನಂದಿನ ಬಳಕೆಯ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗಿದೆ. ಕೊಳವೆ ಬಾವಿಗಳನ್ನು ಅನುಷ್ಠಾನಗೊಳಿಸಿ, ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಬಡಾವಣೆಯ ನಾಗರಿಕರಿಗೆ ಅನುಕೂಲಕರ ವಾತಾವರಣ ನಿರ್ಮಿಸಿಕೊಡಲಾಗಿದೆ ಎಂದರು.
ಶಕುಂತಲಾ ಅಕ್ಕಿಯವರ ಸಮಾಜಮುಖಿ ಕಾರ್ಯಯೋಜನೆಗಳು ಸದಾ ಸ್ಮರಣೀಯವಾಗಿದ್ದು, ಅವರ ಸೇವೆಯಿಂದ ಬಡಾವಣೆಯ ನಾಗರಿಕರಲ್ಲಿ ಸಂತಸ ಮೂಡಿದೆ ಎಂದು ಅವರು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಕುಂತಲಾ ಅಕ್ಕಿಯವರು, ಕಳೆದ ಹಲವು ವರ್ಷಗಳಿಂದ ಬೆಟಗೇರಿ ಭಾಗ ನಿರ್ಲಕ್ಷಿತ ಪ್ರದೇಶ ಎಂಬ ಟೀಕೆಗಳನ್ನು ಕೇಳುತ್ತಾ ಬಂದಿದ್ದೇವೆ. ಆದರೆ ನಮ್ಮ ನೆಚ್ಚಿನ ರಾಜಕೀಯ ನಾಯಕರು ಹಾಗೂ ಗದಗ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಎಚ್.ಕೆ. ಪಾಟೀಲ ಅವರ ನೇತೃತ್ವದಲ್ಲಿ ಯಾವುದೇ ನಾಗರಿಕರೂ ಸಂವಿಧಾನಬದ್ಧ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಬಾರದು ಎಂಬುದು ನಮ್ಮ ಮೂಲ ಧ್ಯೇಯವಾಗಿದೆ ಎಂದರು.
ಬಡಾವಣೆಯ ಸಮಗ್ರ ಅಭಿವೃದ್ಧಿಗಾಗಿ ನಾಗರಿಕರ ಸಹಕಾರ ಮತ್ತು ಸಹಭಾಗಿತ್ವದೊಂದಿಗೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಬದ್ಧರಾಗಿರುವುದಾಗಿ ಅವರು ತಿಳಿಸಿದರು. ಈ ಸಂದರ್ಭದಲ್ಲಿ ವೀರೇಂದ್ರಸಿಂಗ್ ರಾಜಪೂತ, ಪರಶುರಾಮ, ಗಣೇಶ, ಗೀತಾ ಬಾಳಿಮುತ್ತು, ಸೀನು ಸೇರಿದಂತೆ ಬಡಾವಣೆಯ ಮಹಿಳೆಯರು ಹಾಗೂ ಗುರುಹಿರಿಯರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 